ನಿರ್ದೇಶಕ ತರುಣ್ ಸುಧೀರ್ ಹೃದಯದಲ್ಲಿ ಬೆಳಕಿನ ಕವಿತೆ ಬರೆದ ಬ್ಯೂಟಿಫುಲ್ ನಟಿ!, ಮದುವೆ ಬಗ್ಗೆ ಏನಂದ್ರು?

First Published | Jun 24, 2024, 6:33 PM IST

ಕನ್ನಡ ಖ್ಯಾತ ಖಳ ನಟ ಸುಧೀರ್ (Tharun Sudhir) ಅವರ ಕಿರಿಯ ಪುತ್ರ, ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ನಿರ್ದೇಶಕ ತರುಣ್ ಸುಧೀರ್ ಮತ್ತು ಸ್ಯಾಂಡಲ್‌ವುಡ್‌ ನಟಿ ಸೋನಾಲ್ (Sonal Monteiro ) ಅವರು ಮದುವೆಯಾಗುತ್ತಿದ್ದು, ಆಗಸ್ಟ್ 10 ರಂದು ವಿವಾಹ ನಡೆಯಲಿದೆ ಎಂದು ಚಿತ್ರರಂಗದಲ್ಲಿ ಗುಲ್ಲೆದ್ದಿದೆ.

ಬಹಳ ಹಿಂದಿನಿಂದಲೂ ಈ ಜೋಡಿ ಬಗ್ಗೆ ಗಾಸಿಪ್, ರೂಮರ್ ಇತ್ತು. ಆದರೆ ಇದೀಗ ಆ ಗಾಸಿಪ್ ಗಳು ನಿಜವಾಗುತ್ತಾ ಅನ್ನೋ ಪ್ರಶ್ನೆ ಕೂಡ ಎದ್ದಿದೆ. ಏಕೆಂದರೆ 38 ವರ್ಷದ ನಟ ನಿರ್ದೇಶಕ ತರುಣ್ ಸುಧೀರ್ 29ರ ಹರೆಯದ ನಟಿ ಸೋನಲ್ ಮೊಂಥೆರೋ ಅವರ ಕೈ ಹಿಡಿಯಲಿದ್ದಾರೆ ಎಂಬುದು ಸದ್ಯಕ್ಕೆ ಗಾಂಧಿನಗರದ ಹಾಟ್ ಟಾಪಿಕ್.
 

ಈ ಬಗ್ಗೆ ಇಬ್ಬರೂ ಪ್ರತಿಕ್ರಿಯೆ ನೀಡಿದ್ದು, ಇದೆಲ್ಲಾ ನಿಜನಾ ಅಂತ ಕೇಳಿದ್ರೆ ರೂಮರ್ ಎಂದು ತರುಣ್ ಸುಧೀರ್ ಹೇಳಿದ್ರೆ ಇಂತಹ ವಿಚಾರಗಳನ್ನು ಎರಡೂ ಮನೆಯವರು ಕುಳಿತು ಮಾತನಾಡಬೇಕು ಅಂತಾರೆ ನಟಿ ಸೋನಲ್ , ಅಲ್ಲಿಗೆ ಮದುವೆ ಇನ್ನೂ ಆನ್ ದಿ ವೇ ಅಂತ ಗೊತ್ತಾಗುತ್ತಿದೆ. ಈ ಶುಭ ಸುದ್ದಿಗೆ ಇನ್ನೂ ಸ್ವಲ್ಪ ದಿನ ಗಾಂಧಿನಗರ ಕಾಯಬೇಕಿದೆ. 

Tap to resize

ವಿಜಯನಗರದ ಹೊಸಪೇಟೆಯಲ್ಲಿ ಹುಟ್ಟಿರುವ ತರುಣ್ ಸುಧೀರ್ ರಾಬರ್ಟ್ ಸಿನೆಮಾವನ್ನು ನಿರ್ದೇಶನ ಮಾಡಿದ್ರು, ಇದೇ ಚಿತ್ರದಲ್ಲಿ ನಟ ವಿನೋದ್ ಪ್ರಭಾಕರ್‌ ಗೆ ಜೋಡಿಯಾಗಿ ಸೋನಲ್ ನಟಿಸಿದ್ದರು. ಮಂಗಳೂರಿನಲ್ಲಿ ಹುಟ್ಟಿ ಬೆಳೆದಿರುವ ನಟಿ ತುಳು ಸಿನೆಮಾಗಳ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟು, ಬಳಿಕ ಸ್ಯಾಂಡಲ್‌ ವುಡ್‌ ಪ್ರವೇಶಿಸಿದ್ದರು. 

ಮಾಡೆಲಿಂಗ್ ಕ್ಷೇತ್ರದಿಂದ ಬಣ್ಣದ ಬದುಕಿಗೆ ಕಾಲಿಟ್ಟ  ಸೋನಲ್,  ಮಿಸ್ ಬ್ಯೂಟಿಫುಲ್ ಸ್ಮೈಲ್ 2013, ಮಿಸ್ ಕೊಂಕಣ್ 2015 ಕಿರೀಟ ಅಲಂಕರಿಸಿದ್ದಾರೆ. ತುಳು ಚಿತ್ರರಂಗದ ಮೂಲಕ ಬಣ್ಣದ ಬದುಕು ಆರಂಭಿಸಿದ ಸೋನಲ್ ಮೊದಲ ಚಿತ್ರ ಎಕ್ಕ ಸಕ, ಈ ಚಿತ್ರ ನೂರು ದಿನ ಯಶಸ್ವೀ ಪ್ರದರ್ಶನ ಕಾಣುವ ಮೂಲಕ ತುಳು ನಾಡಿನ ತುಂಬಾ ಸೋನಲ್ ಹೆಸರುವಾಸಿಯಾಗಿದ್ದರು.

ಒಂದೆರಡು ಸಿನೆಮಾ ತುಳುವಿನಲ್ಲಿ ಮಾಡಿದ ಬಳಿಕ ಕನ್ನಡ ಸಿನೆಮಾ ಲೋಕಕ್ಕೆ ಎಂಟ್ರಿ ಕೊಟ್ಟ ಸೋನಲ್ ಅಭಿಸಾರಿಕೆ, ಮದುವೆ ದಿಬ್ಬಣ, ಪಂಚತಂತ್ರ, ಶಾಸಕ, ಡೆಮೊ ಪೀಸ್, ರಾಬರ್ಟ್, ಬನಾರಸ್ ಸಿನೆಮಾಗಳಲ್ಲಿ ಅಭಿನಯಿಸಿ ಕರ್ನಾಟಕಕ್ಕೆ ಚಿರಪರಿಚಿತರಾಗಿದ್ದಾರೆ.

ಬುದ್ಧಿವಂತ 2, ಮಾದೇವ, ಮಾರ್ಗರೇಟ್‌ ಲವರ್ ಆಫ್ ರಾಮಾಚಾರಿ ಚಿತ್ರಗಳು ಇನ್ನಷ್ಟೇ ಬಿಡುಗಡೆ ಆಗಬೇಕಿದೆ. ಅದೇನೆ ಇರಲಿ ಗಾಂಧಿನಗರದಲ್ಲಿ  ಅನೇಕ ನಿರ್ದೇಶಕರು ಮತ್ತು ನಟಿಯರು ಜೋಡಿಯಾದ ಉದಾಹರಣೆಗಳು ಸಾಕಷ್ಟಿವೆ. ಪುಟ್ಟಣ್ಣ-ಆರತಿ, ನಟಿ ರಕ್ಷಿತಾ-ಪ್ರೇಮ್, ಪವನ್ ಒಡೆಯರ್‌-ಆಪೇಕ್ಷಾ ಪುರೋಹಿತ್ ಈ ಸಾಲಿಗೆ ಹೊಸದಾಗಿ ಈ ಜೋಡಿ ಸೇರ್ಪಡೆಯಾಗುತ್ತಾ ಅನ್ನೋದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.

Latest Videos

click me!