ಮದುವೆಯ ನಂತರ ಸಿನಿಮಾಗಳಲ್ಲಿ ಆಸಕ್ತಿ ಬೆಳೆಸಿಕೊಂಡ ಪ್ರಗತಿ ಶೆಟ್ಟಿ, ನಂತರ ಫ್ಯಾಷನ್ ಡಿಸೈನಿಂಗ್ ಕೋರ್ಸ್ ಮಾಡಿ ಸ.ಹಿ.ಪ್ರಾ. ಶಾಲೆ, ಬೆಲ್ ಬಾಟಂ, ಕಥಾಸಂಗಮ, ರುದ್ರ ಪ್ರಯಾಗ, 777 ಚಾರ್ಲಿ, ಜೊತೆಗೆ ಕಾಂತಾರ ಸೇರಿ ಹಲವು ಸಿನಿಮಾಗಳಿಗೆ ಕಾಸ್ಟ್ಯೂಮ್ ಡಿಸೈನ್ (costume designer) ಮಾಡಿದ್ದಾರೆ. ಪತಿ ರಿಷಭ್ ಶೆಟ್ಟಿಯವರ ಹೆಚ್ಚಿನ ಸಿನಿಮಾಗಳಲ್ಲಿ ಜೊತೆಯಾಗಿ ದುಡಿಯುತ್ತಾ, ಗಂಡನಿಗೆ ಬೆಂಬಲ ನೀಡುತ್ತಾ ಬಂದಿದ್ದಾರೆ ಪ್ರಗತಿ ಶೆಟ್ಟಿ.