ಬೆಂಗಳೂರು(ಫೆ. 18) ಬಹುನಿರೀಕ್ಷಿತ ಪೊಗರು ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ. ನಾಯಕ ನಟ ಧ್ರುವ ಸರ್ಜಾ ಹೊಸದೊಂದು ದಾಖಲೆ ಬರೆಯಲು ಸಿದ್ಧತೆ ನಡೆಸಿದ್ದಾರೆ. ಅಭಿಮಾನಿಗಳಿಗೆ ನಾಯಕ ನಟನೇ ಕೆಂಪು ಹಾಸಿನ ಸ್ವಾಗತ ನೀಡಲಿದ್ದಾರೆ. ಅಭಿಮಾನಿಗಳಿಗೆ ಸಿನಿಮಾ ನೋಡದಲು ರೆಡ್ ಕಾರ್ಪೆಟ್ ಸ್ವಾಗತ ನೀಡಲು ಧ್ರುವ ಸರ್ಜಾ ಮುಂದಾಗಿದ್ದಾರೆ. ಇದು ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಮೊದಲಾಗಿದ್ದು ಪೊಗರು ಫೆ. 19ಕ್ಕೆ ಚಿತ್ರಮಂದಿರಗಳನ್ನು ತುಂಬಿಕೊಳ್ಳಲಿದೆ. ಅಭಿಮಾನಿಗಳು ನನ್ನ ವಿಐಪಿಗಳು ಎಂದು ಹೇಳಿದ್ದ ಧ್ರುವ ಸರ್ಜಾ ಅದರಂತೆ ನಡೆದುಕೊಳ್ಳುತ್ತಿದ್ದಾರೆ. ಕೊರೋನಾ ಕಾರಣಕ್ಕೆ ಚಿತ್ರಮಂದಿರಗಳು ಬಂದ್ ಆಗಿದ್ದು ನಿಧಾನಕ್ಕೆ ತೆರೆದುಕೊಂಡಿವೆ. ಕನ್ನಡದ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಅಭಿಮಾನಿಗಳಿಗೆ ಕೆಂಪು ಹಾಸಿನ ಸ್ವಾಗತ ಕೊಡಲು ಮುಂದಾದ ಧ್ರುವ Pogaru fan's gets special surprise from Star Dhruva Sarja