ಇತ್ತೀಚೆಗಷ್ಟೆ‘ಏಕ್‌ಲವ್‌ಯಾ’ ಹಾಗೂ ‘777 ಚಾರ್ಲಿ’ ಚಿತ್ರಗಳ ಶೂಟಿಂಗ್ ಮುಗಿಸಿ ಬಂದಿದ್ದವು.
undefined
ಈಗ ನಟ ಪುನೀತ್ ರಾಜ್‌ಕುಮಾರ್ ಅಭಿನಯದ, ಚೇತನ್ ಕುಮಾರ್ ನಿರ್ದೇಶನದ ‘ಜೇಮ್ಸ್’ ಚಿತ್ರದ ಸರದಿ
undefined
ಫೆ.28ರಿಂದ ಕಾಶ್ಮೀರದ ಸುಂದರ ತಾಣಗಳಲ್ಲಿ ಹಾಡು ಮತ್ತು ಸಾಹಸ ದೃಶ್ಯಗಳ ಚಿತ್ರೀಕರಣಕ್ಕೆ ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.
undefined
ನೃತ್ಯ ನಿರ್ದೇಶನಕ್ಕೆ ಎ ಹರ್ಷ, ಸಾಹಸ ದೃಶ್ಯಗಳ ನಿರ್ದೇಶನಕ್ಕೆ ವಿಜಯ್ ಚಿತ್ರತಂಡದ ಜತೆ ಕೈ ಜೋಡಿಸುತ್ತಿದ್ದಾರೆ.
undefined
ಈಗಾಗಲೇ ಚಿತ್ರತಂಡ ಕಾಶ್ಮೀರ ಕಡೆ ಪ್ರಯಾಣ ಬೆಳೆಸಿದೆ. ಆಸ್ಪತ್ರೆಗೆ ದಾಖಲಾಗಿರುವ ರಾಘವೇಂದ್ರ ರಾಜ್‌ಕುಮಾರ್ ಆಸ್ಪತ್ರೆಯಿಂದ ಡಿಸ್ಚಾಜ್‌ರ್ ಆದ ಮೇಲೆ ಪುನೀತ್ ರಾಜ್‌ಕುಮಾರ್ ಕೂಡ ‘ಜೇಮ್ಸ್’ ಚಿತ್ರತಂಡ ಸೇರಿಕೊಳ್ಳಲಿದ್ದಾರೆ ಎನ್ನಲಾಗಿದೆ.
undefined
ಪ್ರಿಯಾ ಆನಂದ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಅನುಪ್ರಭಾಕರ್ ಹಾಗೂ ತೆಲುಗಿನ ಶ್ರೀಕಾಂತ್ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಕಿಶೋರ್ ಪತ್ತಿಕೊಂಡ ನಿರ್ಮಾಣದ ಚಿತ್ರವಿದು.
undefined