ಮಾಲ್ಡೀವ್ಸ್(ಫೆ. 18) ಲವ್ ಮಾಕ್ಟೇಲ್ ಜೋಡಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಮಾಲ್ಡೀವ್ಸ್ ನಿಂದ ಪೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಅಭಿಮಾನಿಗಳು ಸಹ ದಂಪತಿಗೆ ಮಧುಚಂದ್ರ ದ ಶುಭಾಶಯ ಹೇಳಿದ್ದಾರೆ. ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಅವರು ಫೆಬ್ರವರಿ 14ರಂದು ಸಪ್ತಪದಿ ತುಳಿದಿದ್ದಾರೆ. ದಂಪತಿ ಲವ್ ಮಾಕ್ಟೇಲ್ -2 ಚಿತ್ರದ ನಡುವೆ ಬಿಡುವು ಮಾಡಿಕೊಂಡಿದ್ದಾರೆ. ಕೊರೋನಾ ಕಾರಣ ಥಿಯೇಟರ್ ಲಭ್ಯವಿಲ್ಲದೆ ಲವ್ ಮಾಕ್ಟೇಲ್ ಒಟಿಟಿಯಲ್ಲಿ ಬಿಡುಗಡೆಯಾಗಿ ಜನ ಮೆಚ್ಚುಗೆ ಗಳಿಸಿಕೊಂಡಿತ್ತು. ಭಾಗ ಎರಡರ ಮೇಲೆ ಸಹಜವಾಗಿಯೇ ನಿರೀಕ್ಷೆ ಹೆಚ್ಚಾಗಿದೆ. ಜೋಡಿಯ ಫೋಟೋಕ್ಕೆ ಕ್ಯೂಟೆಸ್ಟ್ ಕಪಲ್ ಎಂದು ಅಭಿಮಾನಿಗಳು ಕೊಂಡಾಡಿದ್ದಾರೆ. Newlyweds Milana Nagaraj and Darling Krishna in Maldives for honeymoon photos ಮಧುಚಂದ್ರಕ್ಕಾಗಿ ಮಾಲ್ಡೀವ್ಸ್ಗೆ ಹಾರಿದ ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್