ತಾಯಿಯನ್ನೆ ಮೀರಿಸುವ ಲುಕ್; ಚಂದನವನದ ಸುಂದರಿಯರ ಮಕ್ಕಳಿವರು!

First Published | Jun 24, 2023, 5:10 PM IST

70ರ ದಶಕದಿಂದ ಮೊನ್ನೆ ಮೊನ್ನೆಯವರಿಗೂ ಕನ್ನಡ ಚಿತ್ರರಂಗವನ್ನಾಳಿದ ಹಲವು ನಟಿಯರ ಮಕ್ಕಳೂ ತಮ್ಮದೇ ರೀತಿಯಲ್ಲಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಮತ್ತೆ ಕೆಲವರು ಗುರುತಿಸಿಕೊಳ್ಳುತ್ತಿದ್ದಾರೆ.  ಆ ಸ್ಯಾಂಡಲ್‌ವುಡ್ ನಟಿಯರ ಹೆಣ್ಣು ಮಕ್ಕಳು ಹೇಗಿದ್ದಾರೆ. ಇಲ್ಲಿದೆ ನೋಡಿ ಗ್ಯಾಲರಿ. 

ಗೌರಿ ಜೊತೆ ಶ್ರುತಿ ಸೇರಿದಾಗ

ಸ್ಯಾಂಡಲ್‌ವುಡ್ ನಟಿ ಶ್ರುತಿ ನಿರ್ದೇಶಕ ಮಹೇಂದ್ರ ಅವರನ್ನು ವರಿಸಿ, ಹಲವು ವರ್ಷಗಳ ಕಾಲ ಸಂಸಾರ ನಡೆಸಿದ್ದರು. ಮಗಳು ಗೌರಿಗೂ ಅಮ್ಮನಾಗಿದ್ದಾರೆ. ಮಗಳಿಗಾಗಿ ರಾಮನಗರದ ಸಮೀಪ ಕೃಷಿ ಭೂಮಿ ಕೊಡಿಸಿ, ಪುಟ್ಟು ಮನೆಯನ್ನೂ ಕಟ್ಟಿ ಕೊಟ್ಟಿದ್ದಾರೆ. ಉತ್ತಮ ರೈತ ಮಹಿಳೆಯಾಗೋ ಕನಸಿದೆಯಂತೆ ಶ್ರುತಿಗೆ. 

ವಿಜಯಲಕ್ಷ್ಮಿ ಸಿಂಗ್‌ಗೆ ವೈಸಿರಿ ಸಾಥ್

ವಿಜಯಲಕ್ಷ್ಮಿ ಸಿಂಗ್ ಮತ್ತು ನಟ ಜೈ ಜಗದೀಶ್ ಕನ್ನಡ ಚಿತ್ರ ಜಗತ್ತಿಗೆ ಚಿರಪರಿಚಿತ ಹೆಸರು. ಇವರಿಗೆ ಮೂವರು ಮಕ್ಕಳಿದ್ದು ವೈಸೈರಿ ಮತ್ತು ವೈನಿಧ್ ಅವಳಿ ಮಕ್ಕಳು. ಮೊದಲ ಮಗಳು ವೈಭವಿ ಕೋತಿಗಳು ಸರ್ ಕೋತಿಗಳು ಚಿತ್ರದಲ್ಲಿ ಬಾಲ ಕಲಾವಿದೆಯಾಗಿ ನಟಿಸಿದ್ದರು. ತಾಯಿ ವಿಜಯಲಕ್ಷ್ಮಿ ಜೊತೆ ಮಗಳು ವೈಸಿರಿ.

Tap to resize

ವಾಣಿಶ್ರೀ ಮಗಳೊಂದಿಗೆ ಫುಲ್ ಖುಷಿ

ಕನ್ನಡ ಕಿರುತೆರೆ ಲೋಕದಲ್ಲಿ ಮಿಂಚಿದ ವಾಣಿಶ್ರೀಗೆ ಖುಷಿ ಎಂಬ ಮಗಳಿದ್ದಾಳೆ. ವಾಣಿಶ್ರಿ ಕನ್ನಡದ ಹಲವು ಸೀರಿಯಲ್ಸ್‌ನಲ್ಲಿ ನಟಿಸಿದ್ದಲ್ಲದೇ, ನಿರೂಪಕಿಯಾಗಿಯೂ ಮನೆ ಮಾತಾದವರು. ಮಗಳೊಂದಿಗೆ ವಿಭಿನ್ನ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಇವರು ಶೇರ್ ಮಾಡಿ ಕೊಳ್ಳುತ್ತಿರುತ್ತಾರೆ. 

ಅರ್ಜುನ್ ಸರ್ಜಾ ಪತ್ನಿ-ಮಗಳು

ಸ್ಯಾಂಡಲ್‌ವುಡ್‌ನಲ್ಲಿ ತಮ್ಮದೇ ಛಾಪು ಮೂಡಿಸಿದ ಅರ್ಜುನ್‌ ಸರ್ಜಾಗೆ ಐಶ್ವರ್ಯಾ ಸರ್ಜಾ ಎಂಬ ಮಗಳಿದ್ದಾರೆ. ತಾಯಿ ನಿವೇದಿತಾ ರಥ ಸಪ್ತಮಿ ಎಂಬ ಚಿತ್ರದಲ್ಲಿ ಶಿವರಾಜ್‌ಕುಮಾರ್ ಜೊತೆ ನಟಿಸಿ, ಹೆಸರು ಮಾಡಿದ್ದರು. ಆಶಾರಾಣಿ ಎಂಬ ಹೆಸರಿನಿಂದ ಹೆಸರು ಮಾಡಿದ್ದ ನಟಿ ಜೊತೆ ಮಗಳು ಐಶ್ವರ್ಯಾ. 

ಲಕ್ಷ್ಮಿ ಜೊತೆ ಐಶ್ವರ್ಯಾ

ಜೂಲಿ ಚಿತ್ರದಿಂದ ಜೂಲಿ ಲಕ್ಷ್ಮಿ ಎಂದೆ ಫೇಮಸ್ ಆದ ಲಕ್ಷ್ಮಿಗೆ ಐಶ್ವರ್ಯಾ ಎಂಬ ಮಗಳಿದ್ದಾರೆ. ಇತ್ತೀಚೆಗೆ ಒಂಟಿ ಬದುಕಿನ ಕರಾಳ ಸತ್ಯವನ್ನು ಹೇಳಿಕೊಂಡು ಸುದ್ದಿಯಾಗಿದ್ದರು. ಮೋಹನ್‌ಲಾಲ್‌ರಂಥ ಸೂಪರ್‌ಸ್ಟಾರ್‌ ಜೊತೆ ಹೀರೋಯಿನ್ ಆಗಿದ್ದ ಲಕ್ಷ್ಮಿ ಮಗಳು ಐಶ್ವರ್ಯಾ ಟಾಯ್ಲೆಟ್ ತೊಳೆಯೋ ಕೆಲಸವನ್ನಾದರೂ ಕೊಡಿ ಅಂತ ಗೋಗರೆಯುವ ಮಟ್ಟಕ್ಕೆ ಇಳಿದಿದ್ದರು. ಅವಕಾಶಗಳಿಂದ ವಂಚಿತರಾಗಿದ, ಬದುಕಿನಲ್ಲಿ ಬದುಕಿನ ಕಷ್ಟವನ್ನು ಹೇಳಿ ಕೊಂಡಿದ್ದರು. ಐಶ್ವರ್ಯಾ ಅಂತ ಹೆಸರಿಟ್ಟುಕೊಂಡು ಖ್ಯಾತ ನಟಿ ಜ್ಯೂಲಿ ಲಕ್ಷ್ಮಿ ಮಗಳಾಗಿದ್ದುಕೊಂಡು ನಟಿಗೆ ಬಂದೊದಗಿದ ಕಷ್ಟಕ್ಕೆ ಚಿತ್ರ ಪ್ರೇಮಿಗಳು ಮರುಗಿದ್ದರು.

ಮಗಳು ಅನಷ್ಕಾಳೊಂದಿಗೆ ರೋಜಾ

ಕನ್ನಡದ ಕಲಾವಿದ, ಗಡಿಬಿಡಿ ಗಂಡನಂಥ ಕನ್ನಡ ಚಿತ್ರಗಳಲ್ಲಿ ರವಿಚಂದ್ರನ್ ಜೊತೆ ನಟಿಸಿದ್ದಲ್ಲೇ, ದಕ್ಷಿಣ ಭಾರತದ ಹಲವು ಚಿತ್ರಗಳಲ್ಲಿ ಹೆಸರು ಮಾಡಿದ ರೋಜಾಗೆ ಅನುಷ್ಕಾ ಮಲ್ಲಿಕಾ ಎಂಬ ಮಗಳಿದ್ದಾಳೆ. 

ರಾಜಕಾರಣಿಯೂ ಆದ ರಂಬಾ ಜೊತೆ ಮಗಳು ಲಾನ್ಯಾ

ಸರ್ವರ್ ಸೋಮಣ್ಣ, ಕೆಂಪಯ್ಯ ಐಪಿಎಸ್, ಓ ಪ್ರೇಮವೇ, ಭಾವ ಭಾಮೈದ, ಸಾಹುಕಾರ, ಗಂಡುಗಲಿ ಕುಮಾರರಾಮ ಸೇರಿ ಕನ್ನಡ, ಹಿಂದಿ, ತಮಿಳು, ತೆಲಗು, ಮಲಯಾಳಂ ಚಿತ್ರಗಳಲ್ಲಿ ಮಂಚಿದ ನಟಿ ರಂಭಾಗೆ ಲಾನ್ಯಾ ಎಂಬ ಮಗಳಿದ್ದಾಳೆ. 

ಮಾಲಾಶ್ರೀ ಮಗಳು ಅನನ್ಯ

ತಮಿಳು ಚಿತ್ರರಂಗಕ್ಕೆ ಬಾಲ ನಟಿಯಾಗಿ ಕಾಲಿಟ್ಟ ಮಾಲಾಶ್ರೀ 90ರ ದಶಕದಲ್ಲಿ ಕನ್ನಡ ಚಿತ್ರರಂಗವನ್ನು ಆಳಿದವರು. ನಂಜುಂಡಿ ಕಲ್ಯಾಣ, ಗಜಪತಿ ಗರ್ವಭಂಗ, ಪ್ರೇಮ ಕೈದಿ, ರಾಜಾ ಕೆಂಪು ರೋಜಾ, ರಾಣಿ ಮಹಾರಾಣಿ, ಹೃದಯ ಹಾಡಿತು, ರಾಮಾಚಾರಿ ಸೇರಿ ಹಲವು ಚಿತ್ರಗಳಲ್ಲಿ ತಮ್ಮ ಕಲಾ ಪ್ರತಿಭೆ ತೋರಿದವರು. ಒಳಗೆ ಸೇರಿದರೆ ಗುಂಡು ಹುಡುಗಿಯಾಗುವಳು ಗಂಡು ಎಂಬ ಹಾಡಿಗೆ ಆ ಕಾಲದ ಪ್ರತಿಯೊಬ್ಬ ಪಡ್ಡೆ ಹುಡುಗನೂ ಫಿದಾ ಆಗಿದ್ದರು. ನಿರ್ಮಾಪಕರ ರಾಮು ಅವರ ಪತ್ನಿಯಾಗಿರುವ ಈ ನಟಿಗೆ ಅನನ್ಯಾ ಎಂಬ ಮಗಳಿದ್ದಾಳೆ. ಇದೀಗ ಈಕೆಯೂ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾಳೆ. 

'ಸೌಂದರ್ಯ'ದ ಖನಿ ಜಯಾಮಾಲಾ ಮಗಳು

ಮಲೆನಾಡ ಹೆಣ್ಣ ಮೈ ಬಣ್ಣ, ನಡು ಸಣ್ಣ ಎನ್ನುವ ಹಾಡು, ವಿಶೇಷ ಸೌಂದರ್ಯದಿಂದ ಪ್ರಸಿದ್ಧರಾದ 80ರ ದಶಕದ ನಟಿ ಜಯಾಮಾಲ ರಾಜಕಾರಣದಲ್ಲಿಯೂ ಗುರುತಿಸಿಕೊಂಡವರು. ಇವರಿಗೆ ಸೌಂದರ್ಯ ಎಂಬ ಮಗಳಿದ್ದಾರೆ. 

ನಿಂಬೆ ಹಣ್ಣಿನ ಬೆಡಗಿಯೊಂದಿಗೆ ಮಗಳು

ಪ್ರೇಮಲೋಕ ಎಂಬ ಚಿತ್ರದಲ್ಲಿ ರವಿಚಂದ್ರನ್ ಜೊತೆ ನಟಿಸಿದ ಜೂಹಿ ಚಾವ್ಲಾ ಕನ್ನಡಿಗರಿಗೂ ಹತ್ತಿರವಾದವರು. ಬಂದ್ಲು ಸರ್ ಓಹೋ, ನಿಂಬೆ ಹಣ್ಣಿನಂಥ ಹುಡುಗಿ ಬಂದ್ಲು ನೋಡು, ಏಯ್ ಗಂಗು ಬೈಕು ಕಲಿಸಿಕೊಡು ನಂಗೂ...ಎಂಬ ಕ್ರೇಜಿ ಸ್ಟಾರ್ ಹಾಗೂ ಹಂಸಲೇಖಾ ಕಾಂಬಿನೇಷನ್ ಹಾಡು, ಹದಿ ಹರೆಯದ ಹುಡುಗರನ್ನು ಹುಚ್ಚೆಬ್ಬಿಸುವ ಲವ್ ಸ್ಟೋರಿಯಿಂದ ಪ್ರೇಮಲೋಕ ಕನ್ನಡ ಸಿನಿ ಲೋಕದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿತ್ತು. ಈ ಚಿತ್ರದ ನಟಿ ಜೂಹಿ ಚಾವ್ಲಾಗೆ ಜಾನ್ವಿ ಮೆಹ್ತಾ ಎಂಬ ಮಗಳಿದ್ದಾರೆ

ಸುಧಾ ಬೆಳವಾಡಿ ಮಗಳು ಸಂಯುಕ್ತಾ ಪ್ರಾಣಿ ಪ್ರಿಯೆ

ಇದೀಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಲಕ್ಷಣ ಸೀರಿಯಲ್‌ನಲ್ಲಿ ಶಕುಂತಲಾ ದೇವಿ ಎಂಬ ಪಾತ್ರದ ಮೂಲಕ ಮನೆ ಮಾತಾಗಿರುವ ಸುಧಾ ಬೆಳವಾಡಿ ತಮ್ಮ ತಾಯಿ ಭಾರ್ಗವಿ ಹಾಗೂ ತಂದೆ ನಾಣಿ ಮೂಲಕವೂ ಕನ್ನಡಿಗರ ಹೃದಯಕ್ಕೆ ಹತ್ತಿರವಾದವರು. ಅದ್ಭುತ ನಟನೆಯಿಂದ ಕಲಾ ರಸಿಕರ ಹೃದಯ ಗೆದ್ದ ಈ ನಟಿಯ ಮಗಳೇ ಸಂಯುಕ್ತಾ ಹೊರ್ನಾಡು. ಪ್ರಾಣಿ ಪ್ರಿಯೆ ಆಗಿರುವ ಸಂಯುಕ್ತಾ ಕೆಲವು ಚಿತ್ರಗಳಲ್ಲಿಯೂ ನಟಿಸಿ, ನಟನೆಯಲ್ಲಿ ಸೈ ಎನಿಸಿಕೊಂಡಿದ್ದಾರೆ.

ಮೇಘನಾ ರಾಜ್ ಅಮ್ಮ ಪ್ರಮೀಳಾ ಜೋಷಾಯ್ ಜೊತೆ

ಸುಂದರ್ ರಾಜ್-ಪ್ರಮೀಳಾ ಜೋಷಾಯ್ ಮಗಳು ಮೇಘನಾ ರಾಜ್ ನಟ ಚಿರಂಜೀವಿ ಸರ್ಜಾ ಪತ್ನಿ. ಪತಿಯ ನಿಧನದ ನಂತರ ಇದೀಗ ಕಿರುತರೆ ಹಾಗೂ ಕೆಲವು ಚಿತ್ರಗಳ ಮೂಲಕ ಹೊಸ ಬದುಕು ಕಟ್ಟಿ ಕೊಳ್ಳುತ್ತಿರುವ ನಟಿಗೆ ರಾಯನ್ ರಾಜ್ ಎಂಬ ಮಗನಿದ್ದಾನೆ. ಇತ್ತೀಚೆಗೆ ಯು-ಟ್ಯೂಬ್ ಚಾನೆಲ್‌ವೊಂದನ್ನು ಆರಂಭಿಸಿದ್ದು, ಕನ್ನಡಿಗರು ಪ್ರೀತಿಯಿಂದ ನಟಿಯ ಕೆಲಸಕ್ಕೆ ಬೇಷ್ ಎನ್ನುತ್ತಿದ್ದಾರೆ.

ರಾಧಿಕಾ ಜೊತೆ ಐರಾ

ಯಶ್ ಜೊತೆಯೇ ನಟಿಸಿ ಮಿ.ಆ್ಯಂಡ್ ಮಿಸಸ್ ರಾಮಾಚಾರಿ ಸೇರಿ ಹಲವು ಚಿತ್ರಗಳನ್ನು ನೀಡಿರುವ ರಾಧಿಕಾ ಪಂಡಿತ್‌ಗೆ ಐರಾ ಎಂಬ ಮಗಳಿದ್ದಾರೆ. ಸ್ಯಾಂಡಲ್‌ವುಡ್ ರಾಕಿಂಗ್ ಕಪಲ್ ಎಂದೇ ಫೇಮಸ್ ಆದ ಈ ಜೋಡಿಗೆ ಯಥರ್ವ್ ಎಂಬ ಮಗನೂ ಇದ್ದಾನೆ. 

Latest Videos

click me!