Photos of 90s Heroines: ಒಂದು ಕಾಲದಲ್ಲಿ ಹುಡುಗರ ಹೃದಯವನ್ನೇ ಗೆದ್ದಿದ್ದ ನಟಿಯರು ಈಗ ಹೇಗಿದ್ದಾರೆ ನೋಡಿ

Published : Jun 10, 2025, 09:04 PM ISTUpdated : Jun 10, 2025, 09:05 PM IST

90ರ ದಶಕದಲ್ಲಿ ತಮ್ಮ ನಟನೆಯ ಮೂಲಕ ಮೋಡಿ ಮಾಡಿದ ಬೆಡಗಿಯರು ಈವಾಗ ವಯಸ್ಸಾದ ಮೇಲೆ ಹೇಗಾಗಿದ್ದಾರೆ ಇಲ್ಲಿದೆ ಫೋಟೊಗಳು.

PREV
19

90 ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ (Sandalwood) ಅದೆಷ್ಟೊ ನಟಿಮಣಿಯರು ಮಿಂಚಿದ್ದರು. ಅವರಲ್ಲಿ ಹೆಚ್ಚಿನ ನಟಿಯರು ಪರಭಾಷೆಯವರೇ ಆಗಿದ್ದಾರೆ. ಅಂದು ಮಿಂಚಿದ ನಟಿಯರು ಇವತ್ತು ಹೇಗಾಗಿದ್ದಾರೆ ಅನ್ನೋದನ್ನು ನೋಡೋಣ.

29

ರೇವತಿ (Revathi)

ರೇವತಿ ತಮಿಳು, ತೆಲುಗು, ಹಿಂದಿಯ ಜನಪ್ರಿಯ ನಟಿ ಆ ಕಾಲದಲ್ಲಿ ಆಕೆಯ ಸೌಂದರ್ಯಕ್ಕೆ ಮನಸೋಲದವರು ಇಲ್ಲವಾಗಿತ್ತು. ಕನ್ನಡದಲ್ಲಿ ಇವರು ನಿಶ್ಯಬ್ಧ, ಇದು ಸಾಧ್ಯ ಸಿನಿಮಾದಲ್ಲಿ ನಟಿಸಿದ್ದರು.

39

ಸುಹಾಸಿನಿ(Suhasini)

ಬೆಂಕಿಯಲ್ಲಿ ಅರಳಿದ ಹೂವು, ಬಂಧನ, ಅಮೃತವರ್ಷಿಣಿ, ಮೂತಿನ ಹಾರ, ಸುಪ್ರಭಾತದಂತಹ ಹಿಟ್ ಸಿನಿಮಾಗಳನ್ನು ನೀಡಿದ್ದ ಹೂವಿನಂತಹ ನಗುವುಳ್ಳ ಸುಂದರಿ ಸುಹಾಸಿನಿ, ಇವತ್ತು ಕೂಡ ಹಾಗೇ ಇದ್ದಾರೆ. ಅದೇ ಹೂನಗುವನ್ನು ಹೊಂದಿದ್ದಾರೆ.

49

ಖುಷ್ಬು (Khushbu)

ರಣಧೀರ, ಯುಗಪುರುಷ, ಅಂಜದ ಗಂಡು, ಪ್ರೇಮಾಗ್ನಿ ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರ ಮನಗೆದ್ದ ನಟಿ ಖುಷ್ಬು ಆವಾಗ ಹೇಗಿದ್ರು, ಈವಾಗ ಹೇಗಾಗಿದ್ದಾರೆ ಅನ್ನೋದನ್ನು ನೀವೇ ನೋಡಬಹುದು.

59

ಜಯಪ್ರದ (Jayaprada)

ಓ ಪ್ರಿಯತಮ ಎಂದು ಪ್ರಿಯತಮನನ್ನು ಕರೆದ ಚೆಂದುಳ್ಳಿ ಚೆಲುವೆ ಜಯಪ್ರದರನ್ನು ಮರೆಯೋದಾದರು ಹೇಗೆ ಅಲ್ವಾ? ಇವತ್ತು ರಾಜಕೀಯದಲ್ಲಿ ಮಿಂಚುತ್ತಿರುವ ಚೆಲುವೆಯ ಚಾರ್ಮ್ ಇನ್ನೂ ಹಾಗೆ ಇದೆ.

69

ಸರಿತಾ (Saritha)

ಮುಗಿಲ ಮಲ್ಲಿಗೆ, ಎರಡು ರೇಖೆಗಳು, ಚಲಿಸುವ ಮೋಡಗಳು, ಹೊಸ ಬೆಳಕು, ಕಾಮನ ಬಿಲ್ಲು ಸೇರಿ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದ ಸರಿತಾ ಇವತ್ತು ತುಂಬಾನೆ ಬದಲಾಗಿದ್ದಾರೆ.

79

ರಾಧಿಕಾ ಸರತ್ ಕುಮಾರ್ (Radhika Sarat Kumar)

ರಾಧಿಕಾ ಸರತ್ ಕುಮಾರ್ ಸಹ ಕನ್ನಡದಲ್ಲಿ ಪ್ರಚಂಡ ಕುಳ್ಳ, ಜೀವನ ಚಕ್ರ, ಸತ್ಯಂ, ಶಿವಂ, ಸುಂದರಂ ಮತ್ತು ನಾಗಿಣಿ ಸಿನಿಮಾದಲ್ಲಿ ನಟಿಸಿದ್ದರು. ಇಂದು ಇವರು ಹೇಗಿದ್ದಾರೆ ನೋಡಿ.

89

ಅಂಬಿಕಾ (Ambika)

ಚಳಿ ಚಳಿ ತಾಳೆನು ಈ ಚಳಿಯ ಹಾಡಿನ ಮೂಲಕ ಪಡ್ಡೆ ಹುಡುಗರಿಗೆ ಚಳಿ ಹಿಡಿಸಿದ ಚೆಲುವೆ ಕನ್ನಡದ ಹಲವು ಸಿನಿಮಾಗಳಲ್ಲೂ, ಧಾರಾವಾಹಿಗಳಲ್ಲೂ ನಟಿಸಿದ್ದಾರೆ. ಸದ್ಯ ಕನ್ನಡದ ದೃಷ್ಟಿ ಬೊಟ್ಟು ಸೀರಿಯಲ್ ನಲ್ಲಿ ನಟಿಸುತ್ತಿದ್ದರು.

99

ಭಾನುಪ್ರಿಯ (Bhanupriya)

ರಸಿಕ, ಸಿಂಹಾದ್ರಿಯ ಸಿಂಹ, ಛತ್ರಪತಿ, ಕದಂಬ, ದೇವರ ಮಗ ಸಿನಿಮಾದಲ್ಲಿ ಭಾನುಪ್ರಿಯ ನಟಿಸಿದ್ದರು. ಮಲ್ನಾಡ್ ಅಡಿಕೆ ಮೈಸೂರ್ ವೀಳ್ಯದೆಲೆ ಹಾಡನ್ನು ಮರೆಯೋದಕ್ಕೆ ಸಾಧ್ಯಾನೆ? ಆದರೆ ಅವತ್ತು ಕಂಡ ಭಾನುಪ್ರಿಯಾಗೂ ಇವತ್ತಿನ ಭಾನುಪ್ರಿಯಾಗೂ ತುಂಬಾನೆ ವ್ಯತ್ಯಾಸ ಇದೆ.

Read more Photos on
click me!

Recommended Stories