ನೀಲಿ ಸೀರೆಯಲ್ಲಿ ಮೇಘಾ ಶೆಟ್ಟಿ: ಅನು ಸಿರಿಮನೆ ಅಂದ-ಚಂದ ನೋಡಿ ಕೆಣಕುತಿದೆ ನಿನ್ನ ಕಣ್ಣೋಟ ಎಂದು ಹಾಡಿದ ಫ್ಯಾನ್ಸ್

First Published | Aug 22, 2024, 8:58 PM IST

ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಕನ್ನಡಿಗರ ಮನಗೆದ್ದ ಚೆಲುವೆ ಮೇಘಾ ಶೆಟ್ಟಿ ಆಗಾಗ ರೀಲ್ಸ್‌ ಮಾಡುವುದರ ಮೂಲಕ ಸುದ್ದಿಯಾಗುತ್ತಲೇ ಇರುತ್ತಾರೆ. ಅಷ್ಟೇ ಅಲ್ಲದೇ ಹಲವು ಸಿನಿಮಾಗಳಲ್ಲಿಯೂ ಬ್ಯುಸಿಯಾಗಿದ್ದು, ಇದೀಗ ಸೀರೆಯುಟ್ಟು ಮಿಂಚಿದ್ದಾರೆ.
 

ಚಂದನವನದಲ್ಲಿ ಸಿನಿಮಾ ಕೆಲಸಗಳ ಮಧ್ಯೆ ಬ್ಯುಸಿಯಾಗಿರುವ ನಟಿ ಮೇಘಾ ಶೆಟ್ಟಿ ಹಾಟ್ ಫೋಟೋ, ಫಿಟ್ನೆಸ್ ವಿಡಿಯೋ ಮೂಲಕ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಫೋಟೋಸ್‌ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಲಂಗ ದಾವಣಿ ಲುಕ್‌ನಲ್ಲಿ, ಕೆಲವೊಮ್ಮೆ ಮಾರ್ಡನ್ ಫೋಟೋಗಳನ್ನು ಹಂಚಿಕೊಳ್ಳುವ ಮೇಘಾ ಶೆಟ್ಟಿ, ಫಿಟ್‌ನೆಸ್, ಆರೋಗ್ಯ, ಸೌಂದರ್ಯದ ಕಡೆಗೆ ಹೆಚ್ಚು ಗಮನ ಹರಿಸುತ್ತಾರೆ. ಹೀಗಾಗಿ ಅವರು ಜಿಮ್‌ನಲ್ಲಿ ಪ್ರತಿ ದಿನವು ವರಕೌಟ್ ಮಾಡುತ್ತಾರೆ. ಜೊತೆಗೆ ಆ ಕುರಿತ ಫೋಟೋ, ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ.

Tap to resize

ಮೇಘಾ ಶೆಟ್ಟಿ ಇದೀಗ ಸಾಂಪ್ರದಾಯಿಕ ಶೈಲಿಯಲ್ಲಿ ನೀಲಿ ಸೀರೆಯುಟ್ಟು ಫೋಟೋಶೂಟ್ ಮಾಡಿಸಿದ್ದಾರೆ. ಜೊತೆಗೆ ಅವರು ತೊಟ್ಟ ನೆಕ್ಲೇಸ್, ಕಿವಿಯೊಲೆ, ಸರಳವಾದ ಮೇಕಪ್‌ ಸಖತ್ ಹೈಲೈಟ್ ಆಗಿದೆ.

ಮೇಘಾ ಶೆಟ್ಟಿ ಪೋಸ್ಟ್‌ಗೆ 93 ಸಾವಿರಕ್ಕೂ ಹೆಚ್ಚು ಲೈಕ್ಸ್‌ಗಳು ಬಂದಿದ್ದು, ನೂರಾರು ಕಮೆಂಟ್‌ಗಳು ಬಂದಿವೆ. ನೋಡುತಿದ್ದರೆ ಕಣ್ಣಿನ ರೆಪ್ಪೆ ಅಲುಗಾಡುತಿಲ್ಲ, ನಿಮ್ಮ ಅಂದವನ್ನು ನೋಡಿ ನಿಮ್ಮ ಪ್ರತಿಬಿಂಬವೇ ನಾಚುವಂತಾಗಿದೆ, ಏನು ಬೆಂಕಿ ಕಣ್ಣು, ಕೆಣಕುತಿದೆ ನಿನ್ನ ಕಣ್ಣೋಟ ಅಂತೆಲ್ಲ ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ.

ಹಲವು ವರ್ಷಗಳ ಕಾಲ ಸಿನಿ ಪ್ರೇಕ್ಷಕರನ್ನು ರಂಜಿಸಿರುವ ಮೇಘಾ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅನು ಸಿರಿಮನೆ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದರು. ಇವರ ನಟನೆಗೆ ಫ್ಯಾನ್ಸ್‌ ಸಖತ್ ಫಿದಾ ಆಗಿದ್ದರು. ಇತ್ತೀಚೆಗೆ ಮೇಘಾ ಮರಾಠಿ ಭಾಷೆಗೂ ಎಂಟ್ರಿ ಕೊಟ್ಟಿದ್ದಾರೆ.
 

ಸಿನಿಮಾ, ನಟನೆ, ಜಾಹೀರಾತು ಜೊತೆಗೆ ಆಗಾಗ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯವಾಗಿರುವ ಮೇಘಾ ಇತ್ತೀಚೆಗೆ ಜಿಮ್‌ನಲ್ಲಿ ಬೆವರಿಳಿಸುವ ಫೋಟೋಗಳನ್ನು ಹಂಚಿಕೊಂಡಿದ್ದರು.

ಕಿರುತೆರೆಯಿಂದ ಬೆಳ್ಳಿತೆರೆಗೆ ಕಾಲಿಟ್ಟ ಮೇಘಾ ಶೆಟ್ಟಿ, ಗೋಲ್ಡನ್ ಸ್ಟಾರ್ ಗಣೇಶ್ ಜತೆ ತ್ರಿಬಲ್ ರೈಡಿಂಗ್, ಡಾಲಿಂಗ್ ಕೃಷ್ಣ ಜೊತೆ ದಿಲ್ ಪಸಂದ್, ಧನ್ವಿರ್ ಜತೆ ಕೈವ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇನ್ನು ಪ್ರಜ್ವಲ್ ದೇವರಾಜ್ ನಟನೆಯ ಚೀತಾ ಚಿತ್ರಕ್ಕೂ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ.

Latest Videos

click me!