ದುಬಾರಿ ರೇಶ್ಮೆ ಸೀರೆಯಲ್ಲಿ ಮಿಂಚಿದ ನಿಖಿಲ್ ಕುಮಾರಸ್ವಾಮಿ ಪತ್ನಿ; ಕತ್ತಲಿರೋ ವಜ್ರದ ಬೆಲೆ ಕೇಳಿದ ನೆಟ್ಟಿಗರು!

ಹೊಸ ಲುಕ್‌ನಲ್ಲಿ ಮಿಂಚಿದ ರೇವತಿ ನಿಖಿಲ್. ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡಿ ಎಂದು ಡಿಮ್ಯಾಂಡ್ ಮಾಡಿದ ನೆಟ್ಟಿಗರು.... 

ಕನ್ನಡ ಚಿತ್ರರಂಗದ ಯುವರಾಜ ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿ (Revathi Nikhil) ಕೂಡ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಜನಪ್ರಿಯತೆ ಪಡೆದಿದ್ದಾರೆ.

ನಿಶ್ಚಿತಾರ್ಥದ ಬಳಿಕ ನಿಖಿಲ್ ಕುಮಾರ್ ರೇವತಿ ಜೊತೆ ಹಂಚಿಕೊಳ್ಳುತ್ತಿದ್ದ ಫೋಟೋಗಳು ಸಖತ್ ವೈರಲ್ ಆಗಿತ್ತು, ಅಲ್ಲಿಂದ ಫ್ಯಾನ್ ಬೇಸ್ ಹುಟ್ಟಿಕೊಂಡಿತ್ತು. 


ಪ್ಲವರ್ ಪ್ರಿಂಟ್ ಇರುವ ರೇಶ್ಮೆ ಸೀರೆಯಲ್ಲಿ ರೇವತಿ ಮಿಂಚಿದ್ದಾರೆ. ಇದಕ್ಕೆ ಸಿಕ್ಕಾಪಟ್ಟೆ ಡಿಸೈನ್ ಮಾಡಿಸಿರುವ ಬ್ಲೌಸ್ ಧರಿಸಿ ಮೇಕಪ್ ಮಾಡಿಸಿಕೊಂಡಿದ್ದಾರೆ.

ಮೇಕಪ್ ಸ್ಟೋರಿಸ್ ಬೈ ಅಂಜಲಿ ಎಂಬುವವರು ರೇವತಿಗೆ ಸಿಂಪಲ್ ಲುಕ್ ಮೇಕಪ್ ಮಾಡಿದ್ದಾರೆ. ರೇವತಿ ಮದುವೆಗೂ ಇವರೇ ಮೇಕಪ್ ಮಾಡಿದ್ದು.

ಸಾಮಾಜಿಕ ಜಾಲತಾಣದಲ್ಲಿ ಈ ಮೇಕಪ್ ಲುಕ್ ವೈರಲ್ ಆಗುತ್ತಿದೆ. ಮೇಡಂ ನಿಖಿಲ್ ಅಣ್ಣನಿಗೆ ನೀವೇ ಹೀರೋಯಿನ್ ಆಗಿ ಎಂಟ್ರಿ ಕೊಟ್ಟು ಬಿಡಿ ಎಂದು ಕಾಮೆಂಟ್ ಮಾಡಿದ್ದಾರೆ.

 ಇನ್ನು ಈ ಸೀರೆ ಲುಕ್‌ಗೆ ಕೈಗಳಿಗೆ ಎರಡು ಡೈಮೆಂಡ್ ಸ್ಟೋನ್ ಬಳೆಗಳು, ಡೈಮೆಂಡ್ ಸ್ಟೋನ್‌ ಸರ ಮತ್ತು ಕಿವಿ ಓಲೆ ಧರಿಸಿ ಮಾಂಗಲ್ಯ ಚೇನ್ ಧರಿಸಿದ್ದಾರೆ. ನೆಟ್ಟಿಗರು ವಜ್ರದ ಸೆಟ್‌ ಮೇಲೆ ಕಣ್ಣಿದೆ. 

Latest Videos

click me!