ಲಂಗಾ ದಾವಣಿಯಲ್ಲಿ ಮಿಂಚಿದ ಪವಿತ್ರಾ ಗೌಡ ಪುತ್ರಿ; ತಾಯಿ ಬ್ಯುಸಿನೆಸ್‌ ಖುಷಿ ಕೈಯಲ್ಲಿ?

First Published | Aug 6, 2024, 4:16 PM IST

 ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಲಂಗಾ ದಾವಣಿಯಲ್ಲಿ ಮಿಂಚುತ್ತಿರುವ ಖುಷಿ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ರೆಡ್‌ ಕಾರ್ಪೆಟ್‌ ಲುಕ್‌.....

ಸ್ಯಾಂಡಲ್‌ವುಡ್‌ ನಟಿ ಹಾಗೂ ಫ್ಯಾಷನ್ ಡಿಸೈನರ್ ಪವಿತ್ರಾ ಗೌಡ ಸದ್ಯ ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೇಲೆ ಪರಪ್ಪನ ಅಗ್ರಹಾರ ಸೇರಿ 50 ದಿನ ಕಳೆದಿದೆ.

ಪವಿತ್ರಾ ಗೌಡ ತಾಯಿ, ಸಹೋದರ ಮತ್ತು ಪುತ್ರಿ ವಾರಕ್ಕೊಮ್ಮೆ ಪರಪ್ಪನ ಅಗ್ರಹಾರಕ್ಕೆ ಆಗಮಿಸುತ್ತಾರೆ. ಮೀಡಿಯಾ ಕಣ್ಣಿಗೆ ಈಗೀಗ ಕಾಣಿಸಿಕೊಳ್ಳುತ್ತಿರು ಖುಷಿ ಗೌಡ ಬಗ್ಗೆ ಜನರಿಗೆ ಕ್ಯೂರಿಯಾಸಿಟಿ. 

Tap to resize

ಸ್ಕೂಲ್‌ಗೆ ಹೋಗುತ್ತಿರುವ ಖುಷಿ ಗೌಡ  ಸದ್ಯ ದೊಡ್ಡ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ತಾಯಿ ನಡೆಸುತ್ತಿದ್ದ ಫ್ಯಾಷನ್‌ ಬೋಟಿಕ್‌ನ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. 

ಹೌದು! ಸೆಲೆಬ್ರಿಟಿಗಳಿಗೆ ಹಾಗೂ ಜನ ಸಮಾನ್ಯರಿಗೆ ಪವಿತ್ರಾ ಗೌಡ ಉಡುಪು ವಿನ್ಯಾಸ ಮಾಡುತ್ತಿದ್ದರು. ಸಾಕಷ್ಟು ಆರ್ಡರ್‌ ಕೊಟ್ಟಿರುವ ಬಟ್ಟೆಗಳು ಅಂಗಡಿಯಲ್ಲಿಯೇ ಇತ್ತು.

 ಆಷಾಡ ಮಾಸದಲ್ಲಿ ಸೇಲ್ ನಡೆಸಿದ ಖುಷಿ ಆನ್‌ಲೈನ್‌ ಮೂಲಕವೇ ಪ್ರಚಾರ ಮಾಡುತ್ತಿದ್ದರು. ರಾಜರಾಜೇಶ್ವರಿ ನಗರದ ನಿವಾಸದ ಬಳಿಯೇ ರೆಡ್‌ ಕಾರ್ಪೆಟ್‌ 777 ಶೋ ರೂಮ್‌ ಇದೆ.

ಪವಿತ್ರಾ ಗೌಡ ಮತ್ತು ಪುತ್ರಿ ಖುಷಿ ಗೌಡ ಈ ಹಿಂದೆ ಟ್ರೆಡಿಷನಲ್‌ ಲುಕ್‌ನಲ್ಲಿ ಫೋಟೋಶೂಟ್ ಮಾಡಿಸಿದ್ದರು. ಖುಷಿ ಲಂಗಾ ದಾವಣಿಯಲ್ಲಿ ಮಿಂಚಿದ್ದರು. ಈಗ ಫೋಟೋ ಸಖತ್ ವೈರಲ್ ಆಗುತ್ತಿದೆ.

ಚಿತ್ರರಂಗದಲ್ಲಿ ನಿನ್ನ ಭವಿಷ್ಯ ತುಂಬಾ ಚೆನ್ನಾಗಿದೆ ನಟಿಯಾಗಿ ಮಿಂಚುವ ಲುಕ್‌ ನಿನಗಿದೆ ಆದರೆ ದಯವಿಟ್ಟು ಜೀವನ ಹಾಳು ಮಾಡಿಕೊಳ್ಳಬೇಡ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

Latest Videos

click me!