ಸ್ಯಾಂಡಲ್‌ವುಡ್‌ನ ಜನಪ್ರಿಯ ನಟಿ, ಅಪ್ಪಟ ಕನ್ನಡತಿ ಎಂದೇ ಖ್ಯಾತಿ ಪಡೆದಿರುವ ಅದಿತಿ ಪ್ರಭುದೇವ (Adithi prabhudeva) ಅವರ ಪತಿ ಯಶಸ್ ಪಾಟ್ಲಾ ಇಂದು ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು. ನಟಿ ತನ್ನ ಪತಿಗೆ ತುಂಬಾನೆ ರೊಮ್ಯಾಂಟಿಕ್ ಆಗಿ ವಿಶ್ ಮಾಡಿದ್ದಾರೆ.
210
ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ನಟಿ ಅದಿತಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಗಂಡನ ಜೊತೆಗಿನ ಒಂದಷ್ಟು ಮುದ್ದಾದ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಹುಟ್ಟಹಬ್ಬದ ಹಾರ್ಧಿಕ ಶುಭಾಶಯಗಳನ್ನ ತಿಳಿಸಿದ್ದಾರೆ.
310
ಪ್ರೀತಿಯ ಯಶು (Yashas Patla), ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ನೀವೊಬ್ಬ ನಿಷ್ಕಲ್ಮಶ ಮನಸ್ಸಿನ ವ್ಯಕ್ತಿತ್ವದವರು. ಮೌನಕ್ಕೂ ಅರ್ಥವಿದೆ ಎಂದು ತಿಳಿಸಿಕೊಟ್ಟ ಪ್ರೀತಿಯ ಗೆಳೆಯ ನೀವು. ನನ್ನ ಬದುಕಿನ ಶಕ್ತಿ ನೀವು. ಆ ದೇವರು ಪ್ರಪಂಚದ ಎಲ್ಲಾ ಸುಖವನ್ನು ,ನೆಮ್ಮದಿಯನ್ನು ನಿಮಗೆ ನೀಡಲಿ ಕಂದ ಎಂದು ಪ್ರೀತಿಯಿಂದ ಹಾರೈಸಿದ್ದಾರೆ.
410
ಹಾಗೆಯೇ ನಾವಿಬ್ರೂ ಯಾವಾಗ್ಲೂ ಹೀಗೆ ಒಟ್ಟಿಗೆ , ಕಷ್ಟ ಸುಖಗಳಲ್ಲಿ ಒಂದಾಗಿ, ಜೊತೆಯಾಗಿ ಬೆಳೆದು ಸಾಧನೆ , ನೆಮ್ಮದಿಯತ್ತ ಹೆಜ್ಜೆ ಹಾಕೋಣ. ಎಲ್ಲದಕ್ಕೂ ಥ್ಯಾಂಕ್ಯೂ ಸೋ ಮಚ್. ಹ್ಯಾಪಿ ಬರ್ತ್ ಡೇ ಎಂದು ತಮ್ಮ ಕನಸುಗಳನ್ನು ಸಹ ಬರೆದುಕೊಂಡಿದ್ದಾರೆ.
510
ಅಷ್ಟೇ ಅಲ್ಲ ನಿಮಗೆ ನೆನಪಿದೆಯಾ ..ಕಳೆದ ವರ್ಷ ಇದೇ ದಿವಸ ನೀವು ತಂದೆಯಾಗುವ ಸುದ್ದಿಯನ್ನು ನೀಡಿದೆ. ಈ ವರ್ಷ ನಾವು ಇಬ್ಬರಲ್ಲ ಮೂವರು. ಈ ವರ್ಷದ ನಿಮ್ಮ ಹುಟ್ಟುಹಬ್ಬಕ್ಕೆ ನಮ್ಮ ಮಗಳೇ ನಾನು ನಿಮಗೆ ನೀಡಿರುವ ಮುದ್ದಾದ ಉಡುಗೊರೆ.. ಏನಂತೀರಾ? ಎಂದು ಪ್ರಶ್ನೆಯನ್ನು ಸಹ ಕೇಳಿದ್ದಾರೆ.
610
ಅದಿತಿ ಪ್ರಭುದೇವ ಬರ್ತ್ ಡೇ ಪೋಸ್ಟ್ (Birthday post) ನೋಡಿ, ಅಭಿಮಾನಿಗಳು ಸಹ ತಮ್ಮ ನೆಚ್ಚಿನ ನಟಿಯ ಪತಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ. ಮುದ್ದಾದ ಜೋಡಿ ಯಾವಾಗ್ಲೂ ನಗು ನಗುತ್ತಾ ಇರಿ ಎಂದು ವಿಶ್ ಮಾಡಿದ್ದಾರೆ.
710
ಚಂದನವನದ ಸುಂದರಿ ಅದಿತಿ ಪ್ರಭುದೇವ 2022ರಲ್ಲಿ ಉದ್ಯಮಿ ಯಶಸ್ಸು ಚಂದ್ರಕಾಂತ್ ಪಟ್ಲಾ ಅವರನ್ನು ವಿವಾಹವಾಗಿದ್ದರು. ಜೊತೆಗೆ ಈ ವರ್ಷದ ಯುಗಾದಿ ಹಬ್ಬದ ಸಂದರ್ಭದಲ್ಲಿ ಹೆಣ್ಣು ಮಗುವಿಗೆ ತಾಯಿಯಾಗಿದ್ದಾರೆ, ನಮ್ಮ ಮನೆಗೆ ಮಹಾಲಕ್ಷ್ಮೀಯ ಆಗಮನವಾಗಿ ಎನ್ನುವ ಮೂಲಕ ನಟಿ ತಾಯಿಯಾದ ಸಂಭ್ರಮವನ್ನು ಹಂಚಿಕೊಂಡಿದ್ದರು.
810
ನಾಗಕನ್ನಿಕೆ ಸೀರಿಯಲ್ ಮೂಲಕ ಜನಪ್ರಿಯತೆ ಪಡೆದ ಅದುತಿ ಪ್ರಭುದೇವ, ನಟ ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡಿಗರ ಮೆಚ್ಚಿನ ನಟಿಯರ ಲಿಸ್ಟ್ ನಲ್ಲಿ ಸೇರಿಕೊಂಡರು. ಇವರ ಶಾನೆ ಟಾಪಾಗವ್ಳೆ ಹಾಡು ಇಂದಿಗೂ ಜನರ ಫೇವರಿಟ್.
910
ಮದುವೆಯ ನಂತರವೂ ಸಿನಿಮಾದಲ್ಲಿ ಮುಂದುವರೆದಿರುವ ನಟಿ, ಗರ್ಭಿಣಿಯಾದ ಬಳಿಕ ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದರು. ಆದರೆ ಇದೀಗ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ರಾಜಾ ರಾಣಿ ರೀಲೋಡೆಡ್ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ.
1010
ನಟಿ ಅದಿತಿ ಪ್ರಭುದೇವ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಈಗಾಗಲೇ ಮಾಫಿಯಾ ಶೂಟಿಂಗ್ ಮುಗಿದಿದ್ದು, ಛೂ ಮಂಥರ್, ದಿಲ್ಮಾರ್ ಮತ್ತು ಅಂದೊಂದಿತ್ತು ಕಾಲ ಸಿನಿಮಾಗಳಲ್ಲೂ ಅದಿತಿ ನಟಿಸುತ್ತಿದ್ದಾರೆ. ಈ ಸಿನಿಮಾಗಳು ಮುಂದಿನ ವರ್ಷ ಬಿಡುಗಡೆ ಸಾಧ್ಯತೆ ಇದೆ.