ಸ್ಪಂದನಾ ವಿಜಯ್‌ರಾಘವೇಂದ್ರ ಅಗಲಿ ಇಂದಿಗೆ 1 ವರ್ಷ; ಲವ್ ಯು ಚಿನ್ನ ಎಂದ ಚಿನ್ನಾರಿ ಮುತ್ತ!

First Published | Aug 6, 2024, 3:36 PM IST

ಪತ್ನಿ ನೆನೆದು ಫೋಸ್ಟ್‌ ಹಂಚಿಕೊಂಡ ವಿಜಯ್ ರಾಘವೇಂದ್ರ. ಲವ್ ಯು ಚಿನ್ನ ಎಂದು ಬರೆದುಕೊಂಡ ಚಿನ್ನಾರಿ ಮುತ್ತ....

ಸ್ಯಾಂಡಲ್‌ವುಡ್‌ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನರಾಗಿ ಇಂದಿಗೆ ಒಂದು ವರ್ಷ ಕಳೆದಿದೆ. 

ಸ್ನೇಹಿತರು ಮತ್ತು ಕುಟುಂಬಸ್ಥರ ಜೊತೆ ಬ್ಯಾಂಕಾಕ್‌ಗೆ ಪ್ರಯಾಣ ಮಾಡಿದ ಸ್ಪಂದನಾರ ಆರೋಗ್ಯದಲ್ಲಿ ಏರು ಪೇರು ಕಂಡು ಬಂದಿತ್ತು.

Tap to resize

ಸ್ಪಂದನಾ ಮೃತದೇಹವನ್ನು ಬೆಂಗಳೂರಿಗೆ ತರುವುದು ತುಂಬಾನೇ ಕಷ್ಟವಾಗಿತ್ತು. ಸ್ಪಂದನಾ ಅಗಲಿದ ದಿನವೂ ಮುಖದಲ್ಲಿ ಮಗು ಹಾಗೆ ಇತ್ತು.

 'ಚಿನ್ನ...ಮೌನದಲ್ಲಿ ಅರಳಿದ ನಗು ನಿನ್ನದು. ನೀ ನಡೆದ ಹಾದಿಯಲ್ಲಿ ನೆನಪಿನ ಬೆಳಕು ನನ್ನದು' ಎಂದು ವಿಜಯ್ ರಾಘವೇಂದ್ರ ಬರೆದುಕೊಂಡಿದ್ದಾರೆ. 

ಸ್ಪಂದನಾ ಬಾಲ್ಯದಿಂದ ಮಗನ ಜೊತೆ ಕ್ಲಿಕ್ ಮಾಡಿರುವ ಫೋಟೋವನ್ನು ಶೌರ್ಯ ಹಂಚಿಕೊಂಡು ಒಂದು ವರ್ಷ ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. 

ಆಗಸ್ಟ್‌ 6ರಂದು ಸ್ಪಂದನಾ ಅಗಲಿದ ದಿನ. ಪ್ರತಿ ತಿಂಗಳು 6ನೇ ತಾರೀಖು ವಿಜಯ್ ರಾಘವೇಂದ್ರ, ಶೌರ್ಯ, ಸಹೋದರ ಮತ್ತು ಸ್ನೇಹಿತರು ಫೋಟೋ ಅಪ್ಲೋಡ್ ಮಾಡುತ್ತಿದ್ದರು. 

Latest Videos

click me!