ಈ ರೀತಿಯೂ ಸೀರೆ ಉಡ್ಬೋದಾ? ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿದ ಪಾರುಲ್ ಯಾದವ್ ಬೋಲ್ಡ್ ಲುಕ್

ಪ್ಯಾರ್ ಗೆ ಆಗ್ಬಿಟ್ಟೈತೆ ಎಂದು ಕುಣಿದು ರಂಜಿಸಿದ ಬೆಡಗಿ ಪಾರುಲ್ ಯಾದವ್ ಸೀರೆಯಲ್ಲೂ ಸಖತ್ ಹಾಟ್ ಆಗಿ ಪೋಸ್ ಕೊಟ್ಟಿದ್ದು, ನಟಿಯ ಲುಕ್ ಗೆ ಫ್ಯಾನ್ಸ್ ಸುಸ್ತಾಗಿದ್ದಾರೆ. 
 

ಪ್ಯಾರ್ ಗೆ ಆಗ್ಬಿಟೈತೆ ಎಂದು ಹುಡುಗರ ಹೃದಯ ಕದ್ದ ಬೆಡಗಿ, ಜೆಸ್ಸಿ ಸಿನಿಮಾದಲ್ಲಿ ಡಾ. ನಂದಿಯಾಗಿ ಕನ್ನಡಿಗರ ಮನಸು ಗೆದ್ದ ಹುಡುಗಿ ಪಾರುಲ್ ಯಾದವ್ (Parul Yadav) ಈವಾಗ ಸಿನಿಮಾಗಳಿಂದ ದೂರವೇ ಉಳಿದಿದ್ದಾರೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಸಿಕ್ಕಾಪಟ್ಟೆ ಬ್ಯುಸಿ ಈ ಬೆಡಗಿ. 
 

ಕೋಮಲ್ ಕುಮಾರ್ ಅಭಿನಯದ ಗೋವಿಂದಾಯ ನಮಃ ಸಿನಿಮಾ ಮೂಲಕ ಮಿಂಚಿದ ನಟಿ ಪಾರುಲ್ ಯಾದವ್, ನಂತರ ಕಿಚ್ಚ ಸುದೀಪ್ ಜೊತೆ ಬಚ್ಚನ್, ಧನಂಜಯ್ ಜೊತೆ ಜೆಸ್ಸಿ, ಉಪ್ಪಿ2, ಆಟಗಾರ, ಕಿಲ್ಲಿಂಗ್ ವೀರಪ್ಪನ್ ಸಿನಿಮಾಗಳಲ್ಲಿ ನಟಿಸಿದ ಪಾರುಲ್, ಕನ್ನಡದ ಜೊತೆಗೆ ತಮಿಳು, ಮಲಯಾಲಂ, ಹಿಂದಿ ಸಿನಿಮಾಗಳಲ್ಲೂ ನಟಿಸಿದ್ದಾರೆ. 
 


ಸದ್ಯ ಸೋಶಿಯಲ್ ಮೀಡಿಯಾದಲ್ಲಿ (social media) ಪಾರುಲ್ ತಿಂಗಳ ಹಿಂದೆ ತಮ್ಮ ಇನ್’ಸ್ಟಾಗ್ರಾಂ ಪೇಜ್ ನಲ್ಲಿ ಪೋಸ್ಟ್ ಮಾಡಿದಂತಹ ಸೀರೆ ಫೋಟೊ ವೈರಲ್ ಆಗ್ತಿದೆ. ಇದು ಮತ್ತೆ ವೈರಲ್ ಆಗೋಕೆ ಕಾರಣ, ಪಾರುಲ್ ಸೀರೆಯುಟ್ಟ ರೀತಿ, ತುಂಬಾನೆ ಹಾಟ್ ಮತ್ತು ಬೋಲ್ಡ್ ಆಗಿದೆ ಅಂತಾನೆ ಹೇಳಬಹುದು. 
 

ಪಾರುಲ್ ಸೋಶಿಯಲ್ ಮೀಡಿಯಾ ಫೋಟೊಗಳು ಯಾವಾಗ್ಲೂ ಸಾಕಷ್ಟು ಬೋಲ್ಡ್ ಆಗಿಯೇ ಇರುತ್ತೆ. ಈ ಬಾರಿ ನಟಿ ಕಪ್ಪು ಬಣ್ಣದ ಸೀರೆಯುಟ್ಟು ಪೋಸ್ ನೀಡಿದ್ದಾರೆ. ಇದು ಡಿಸೈನರ್ ಮಾಡಿಸಿದಂತಹ ಸೀರೆಯಾಗಿದ್ದು,  ಎಷ್ಟೊಂದು ಬೋಲ್ಡ್ ಆಗಿದೆ ಅಂದ್ರೆ ನಟಿಯ ಮೈಮಾಟ ಎಲ್ಲವೂ ಪ್ರದರ್ಶನಕ್ಕಿಟ್ಟಂತಿದೆ. 
 

ಹೌದು ಸೊಂಟದಿಂದ ತುಸು ಕೆಳಗೆ ಜಾರಿಸಿದಂತೆ ಸೀರೆಯುಟ್ಟಿರುವ ನಟಿ, ಸೆರಗನ್ನು ದೇಹಕ್ಕೆ ಮುಚ್ಚಿಕೊಳ್ಳದೇ ಅದನ್ನ ಲೂಸ್ ಆಗಿ ಬಿಟ್ಟು, ದುಪಟ್ಟಾದಂತೆ ಒಂದು ಬದಿಗೆ ಹಾಕಿದ್ದಾರೆ, ಇದಕ್ಕೆ ಮ್ಯಾಚ್ ಆಗುವಂತಹ ಬ್ರೇಸರ್ ಸ್ಟೈಲ್ ಬ್ಲೌಸ್ ಧರಿಸಿದ್ದು, ಇದರ ಜೊತೆಗೆ ಕಿಲ್ಲರ್ ಲುಕ್ ನೀಡಿದ್ದು ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. 
 

ಕಳೆದ ತಿಂಗಳು ನಡೆದಂತಹ, ಅವಾರ್ಡ್ ಫಂಕ್ಷನ್‌ ಒಂದಕ್ಕೆ ಪಾರುಲ್ ಇಷ್ಟೊಂದು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಫ್ಯಾಷನ್, ಗ್ಲಾಮರ್ ಜಗತ್ತಿರೋವಾಗ, ಇಷ್ಟೊಂದು ಗ್ಲಾಮರಸ್ ಆಗದೇ ಇದ್ರೆ ಹೇಗೆ ಅಲ್ವಾ? ನಟಿಯ ಸಪೂರ ಸುಂದರ ದೇಹ ನೋಡಿಯೇ ಪಡ್ಡೆಗಳು ಫಿದಾ ಆಗಿದ್ದಾರೆ. 
 

ಇನ್ನು ನಟಿಯ ಬ್ಲ್ಯಾಕ್ ಬೋಲ್ಡ್ ಸೀರೆ ಲುಕ್ ನೋಡಿ ಅಭಿಮಾನಿಗಳು ಕಿಲ್ಲರ್ ಲುಕ್, ಪೆಂಟಾಸ್ಟಿಕ್ ಲುಕ್, ಸೆಕ್ಸಿ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ ಅಲ್ಲದೇ, ದೇವರು ತುಂಬಾನೆ ಪುರುಸೋತ್ತಲ್ಲಿ, ಇಷ್ಟೊಂದು ಅದನ್ನವನ್ನ ನಿರ್ಮಿಸಿ ಕಳುಹಿಸಿದ್ದಾನೆನೋ ಅಂತಾನು ಅಭಿಮಾನಿಗಳು ಹೇಳಿದ್ದಾರೆ. 
 

Latest Videos

click me!