ನನಗೆ ತುಂಬಾ ಮೋಸ ಮಾಡಿದ್ದಾರೆ, ಎರಡು ವರ್ಷಕ್ಕೆ ಡಿವೋರ್ಸ್ ಬ್ರೇಕಪ್ ಆಗುತ್ತೆ: ರಾಗಿಣಿ ದ್ವಿವೇದಿ ಬೇಸರ

Published : Aug 26, 2024, 10:56 AM IST

ಮದುವೆ ಬಗ್ಗೆ ಮೌನ ಮುರಿದ ತುಪ್ಪದ ಹುಡುಗಿ. ಎರಡು ಮೂರು ವರ್ಷಕ್ಕೆ ಡಿವೋರ್ಸ್ ಬ್ರೇಕಪ್ ಆಗುತ್ತಿದೆ.....

PREV
17
ನನಗೆ ತುಂಬಾ ಮೋಸ ಮಾಡಿದ್ದಾರೆ, ಎರಡು ವರ್ಷಕ್ಕೆ ಡಿವೋರ್ಸ್ ಬ್ರೇಕಪ್ ಆಗುತ್ತೆ: ರಾಗಿಣಿ ದ್ವಿವೇದಿ ಬೇಸರ

ಸ್ಯಾಂಡಲ್‌ವುಡ್‌ ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ಯಾಕೆ ಇನ್ನೂ ಸಿಂಗಲ್? ಮದುವೆ ಆಗುವ ವಯಸ್ಸು ಆಗಿದೆ ಅಲ್ವಾ? ಎಂದು ಪ್ರಶ್ನೆ ಮಾಡುತ್ತಿದ್ದವರಿಗೆ ಉತ್ತರ ಕೊಟ್ಟ ನಟಿ...

27

 ಮದುವೆಯಾಗಿ ಮಕ್ಕಳು ಮಾಡಿಕೊಳ್ಳುವುದು ಒಂದು ಬ್ಯೂಟಿಫುಲ್ ಲೈಫ್. ಎಲ್ಲರೂ ಮದುವೆಯಾಗುತ್ತಿದ್ದಾರೆ ನಾನು ಮದುವೆಯಾಗಬೇಕು ಬಾಯ್‌ಫ್ರೆಂಡ್ ಹುಡುಕಿಕೊಳ್ಳಬೇಕು ಮಕ್ಕಳ ಮಾಡಿಕೊಳ್ಳಬೇಕು ಎಂದು ಮತ್ತೊಬ್ಬರ ಪ್ರೆಶರ್‌ಗೆ ನಾವು ಮುಂದುವರೆಯಬಾರದು.

37

ಏಕೆಂದರೆ ಈಗ ಖುಷಿಯಿಂದ ಮುಂದುವರೆದು ಎರಡು ವರ್ಷ ಆದ್ಮೇಲೆ ಬ್ರೇಕಪ್ ಅಥವಾ ಡಿವೋರ್ಸ್ ತೆಗೆದುಕೊಳ್ಳುವುದು ಸರಿ ಅಲ್ಲ. ಖುಷಿ ಇಲ್ಲದೆ ಜಾಗದಲ್ಲಿ ನನಗೆ ಇರುವುದಕ್ಕೆ ಇಷ್ಟವಿಲ್ಲ.

47

ಒಳ್ಳೆ ಪಾರ್ಟನರ್‌ ಸಿಕ್ಕರೂ ಕೆಲವೊಮ್ಮೆ ಸಂಸಾರ ಚೆನ್ನಾಗಿ ನಡೆಯುವುದಿಲ್ಲ ಹೀಗಾಗಿ ಪ್ರತಿಯೊಂದು ನ್ಯಾಚುರ್‌ ಆಗಿ ನಡೆಯಬೇಕು. ಒಂದೊಂದು ಸಲ ಮೂರ್ನಾಲ್ಕು ಮದುವೆಗಳು ಬ್ಯಾಕ್ ಟು ಬ್ಯಾಕ್‌ ಬಂದರೆ ಆಗ ತುಂಬಾ ಪ್ರೆಶರ್ ಫೀಲ್ ಆಗುತ್ತದೆ...

57

ಓ ನೀನೊಬ್ಬಳೆ ಇನ್ನೂ ಸಿಂಗಲ್ ಹುಡುಗಿ ಇರುವುದು ನಿನ್ನ ಮದುವೆ ಯಾವಾಗ ಎಂದು ಪ್ರತಿಯೊಬ್ಬರೂ ಪ್ರಶ್ನೆ ಮಾಡುತ್ತಾರೆ. ದಯವಿಟ್ಟು ಬಿಟ್ಟು ಬಿಡಿ ಎಲ್ಲರೂ ಫ್ಯಾಮಿಲಿ ಮಾಡಿಕೊಂಡು ಇದ್ದಾರೆ ನಾನು ಆದರೂ ಸಿಂಗಲ್ ಆಗಿ ಇರಬೇಕು...ಸಿಂಗಲ್ ಆಂಡ್ ಹಾಟ್ ವ್ಯಕ್ತಿಗಳು ಇರಲಿ ಬಿಡಿ ಅಂತ ಹೇಳುತ್ತೀನಿ. 

67

 ಈಗ ನಾನು ಖುಷಿಯಾಗಿದ್ದೀನಿ ನೆಮ್ಮದಿಯಾಗಿದ್ದೀನಿ ಹಾಟ್ ಆಗಿದ್ದೀನಿ ಈಗ ಲೈಫ್‌ ಎಂಜಾಯ್ ಮಾಡಬೇಕು ಅಂತಿರುವೆ ಆದರೆ ಎಲ್ಲರೂ ಮದುವೆ ಆಗಿ ಅಂತಿದ್ದಾರೆ ಎಂದು ರ್ಯಾಪಿಲ್ ರಶ್ಮಿ ಯೂಟ್ಯೂಬ್ ಚಾನೆಲ್‌ನಲ್ಲಿ ರಾಗಿಣಿ ಮಾತನಾಡಿದ್ದಾರೆ. 

77

ನಾನು ಒಳ್ಳೆ ಮನಸ್ಸು ಇರುವ ಹುಡುಗಿ ನನಗೆ ಮೋಸ ಮಾಡಿದರೆ ಖಂಡಿತಾ ನೋವಾಗುತ್ತದೆ. ನನ್ನ ಹತ್ತಿರದವರೇ ನನಗೆ ಮೋಸ ಮಾಡಿದ್ದಾರೆ ನನಗೆ ಜನರು ಸುಲಭವಾಗಿ ಮೋಸ ಮಾಡುತ್ತಾರೆ. 

Read more Photos on
click me!

Recommended Stories