Kannada Films: ಕನ್ನಡ ಸಿನಿಮಾಗಳಲ್ಲಿ ಧೂಳೆಬ್ಬಿಸಿದ ಪರ ಭಾಷೆಯ ಸ್ಟಾರ್ ನಟರು

Published : Jun 11, 2025, 05:33 PM IST

ಅಕ್ಷಯ್ ಕುಮಾರ್, ಮೋಹನ್ ಲಾಲ್, ಮಮ್ಮೂಟಿಯಿಂದ ಹಿಡಿದು ಪಂಕಜ್ ತ್ರಿಪಾಟಿ, ನಾಸಿರುದ್ದೀನ್ ಶಾವರೆಗೂ ಈ ಎಲ್ಲಾ ನಟರು ಕನ್ನಡ ಚಿತ್ರದಲ್ಲಿ ನಟಿಸಿದ್ದಾರೆ. 

PREV
111

ಅಮೃತಧಾರೆ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ನಟಿಸಿದ್ದು, ಕೆಜಿಎಫ್ ನಲ್ಲಿ ಸಂಜಯ್ ದತ್ತ್, ಸಿಪಾಯಿ ಸಿನಿಮಾದಲ್ಲಿ ಚಿರಂಜೀವಿ ನಟಿಸಿದ್ದು ನಿಮಗೆ ಗೊತ್ತಿದೆ. ಇವರಲ್ಲದೇ ಬೇರೆ ಯಾವ ಭಾಷೆಯ ಸ್ಟಾರ್ ನಟರು (other language star actors) ಕನ್ನಡ ಸಿನಿಮಾದಲ್ಲಿ ನಟಿಸಿದ್ದರು ನೋಡೋಣ.

211

ಅಮಿತಾಬ್ ಬಚ್ಚನ್ ಅವರು ರಮ್ಯಾ ಮತ್ತು ಧ್ಯಾನ್ ನಟಿಸಿದ ಸೂಪರ್ ಹಿಟ್ ಸಿನಿಮಾ ಅಮೃತಧಾರೆಯಲ್ಲಿ ಕೆಲವು ಸೆಕೆಂಡುಗಳ ಕಾಲ ನಟಿಸಿದ್ದರು.

ಜಾಕಿಶ್ರಾಫ್ ಅವರು ಕೇರ್ ಆಫ್ ಫೂಟ್ ಪಾತ್ ಮತ್ತು ಅಣ್ಣಾಬಾಂಡ್ ಸಿನಿಮಾದಲ್ಲಿ ನಟಿಸಿದ್ದರು.

311

ಅಮ್ರೀಶ್ ಪುರಿ ಅವರು ಸಿಂಹದ ಮರಿ ಸೈನ್ಯ ಹಾಗೂ ಗಂಡ ಭೇರುಂಡ ಸಿನಿಮಾದಲ್ಲಿ ನಟಿಸಿದ್ದರು.

ಓಂ ಪುರಿಯವರು ಎಕೆ 47 ಹಾಗೂ ಧ್ರುವ ಸಿನಿಮಾದಲ್ಲಿ ಘರ್ಜಿಸಿದ್ದರು.

411

ತಮ್ಮ ನೈಜ್ಯ ಅಭಿನಯದ ಮೂಲಕ ಮನ ಗೆಲ್ಲುತ್ತಿರುವ ಪಂಕಜ್ ತ್ರಿಪಾಟಿಯವರು ಶಿವಣ್ಣ ಅಭಿನಯದ ಚಿಗುರಿದ ಕನಸು ಸಿನಿಮಾದಲ್ಲಿ ನಟಿಸಿದ್ದರು.

ನಟ ನಾಸಿರುದ್ದೀನ್ ಶಾ ತಬ್ಬಲಿಯು ನೀನಾದೆ ಮಗನೆ ಸಿನಿಮಾದಲ್ಲಿ ನಟಿಸಿದ್ದರು.

511

ಮೋಹನ್ ಲಾಲ್ ಅವರು ಲವ್ ಹಾಗೂ ಮೈತ್ರಿ ಸಿನಿಮಾಗಳಲ್ಲಿ ನಟಿಸಿದ್ದರು.

ಮಮ್ಮೂಟಿಯವರು ಕೂಡ ಕನ್ನಡದಲ್ಲಿ ನಟಿಸಿದ್ದು ಆ ಸಿನಿಮಾ ಹೆಸರು ಶಿಕಾರಿ.

611

ರಜನಿಕಾಂತ್ ಅವರು ಕರ್ನಾಟಕದವರೇ, ಆದರೆ ಈ ತಮಿಳಿನ ಸೂಪರ್ ಸ್ಟಾರ್ ಕಥಾ ಸಂಗಮ ಹಾಗೂ ಸಹೋದರರ ಸವಾಲ್ ಸಿನಿಮಾದಲ್ಲಿ ನಟಿಸಿದ್ದರು.

ಕಮಲ್ ಹಾಸನ್ ಅವರು ರಾಮ ಶಾಮ ಭಾಮ, ಕೋಕಿಲ ಹಾಗೂ ಬೆಂಕಿಯಲ್ಲಿ ಅರಳಿದ ಹೂವು ಸಿನಿಮಾದಲ್ಲಿ ಅಭಿನಯಿಸಿದ್ದರು.

711

ಅನಿಲ್ ಕಪೂರ್ ಅವರು ಹೀರೋ ಆಗಿದ್ದೇ ಕನ್ನಡದ ಪಲ್ಲವಿ ಅನುಪಲ್ಲವಿ ಸಿನಿಮಾ ಮೂಲಕ ಅಂತಾನೆ ಹೇಳಬಹುದು.

ಇನ್ನು ಅಕ್ಷಯ್ ಕುಮಾರ್ ಅವರು ವಿಷ್ಣು ವಿಜಯ ಸಿನಿಮಾದಲ್ಲಿ ವಿಷ್ಣುವರ್ಧನ್ ಜೊತೆಗೆ ನಟಿಸಿದ್ದರು.

811

ಅನುಪಮ್ ಖೇರ್ ಘೋಸ್ಟ್ ಸಿನಿಮಾದಲ್ಲಿ ನಟ ಶಿವರಾಜ್ ಕುಮಾರ್ ಜೊತೆ ನಟಿಸಿದ್ದರು.

ಬಾಬಿ ಸಿಂಹ ಅವರು ರಕ್ಷಿತ್ ಶೆಟ್ಟಿ ಅವರ 777 ಚಾರ್ಲಿ ಸಿನಿಮಾದಲ್ಲಿ ಗೆಸ್ಟ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದರು.

911

ಮಿಥುನ್ ಚಕ್ರವರ್ತಿ ವಿಲನ್ ಸಿನಿಮಾದಲ್ಲಿ ಸುದೀಪ್ ಹಾಗೂ ಶಿವರಾಜ್ ಕುಮಾರ್ ಜೊತೆ ಕಾಣಿಸಿಕೊಂಡರೆ, ಸಂಜಯ್ ದತ್ ಅವರು ಕೆಜಿಎಫ್ ಚಾಪ್ಟರ್ 2 ನಲ್ಲಿ ನಟಿಸಿದ್ದರು.

1011

ಸುನೀಲ್ ಶೆಟ್ಟಿಯವರು ಕಿಚ್ಚ ಸುದೀಪ್ ಜೊತೆ ಪೈಲ್ವಾನ್ ಸಿನಿಮಾದಲ್ಲಿ ನಟಿಸಿದ್ದರು. ಅದೇ ರೀತಿ ವಿವೇಕ್ ಓಬೆರಾಯ್ ಅವರು ಶಿವರಾಜ್ ಕುಮಾರ್ ಅಭಿನಯದ ರುಸ್ತುಂ ಸಿನಿಮಾದಲ್ಲಿ ನಟಿಸಿದ್ದರು.

1111

ತೆಲುಗು ಸೂಪರ್ ಸ್ಟಾರ್ ಚಿರಂಜೀವಿ ಅವರು ಸಿಪಾಯಿ ಸಿನಿಮಾದಲ್ಲಿ ನಟಿಸಿದ್ರೆ, ಬಾಲಿವುಡ್ ನಟ ಅಫ್ತಾಬ್ ಶಿವದಾಸಿನಿ ಕೋಟಿಗೊಬ್ಬ 3 ಸಿನಿಮಾದಲ್ಲಿ ಸುದೀಪ್ ಜೊತೆ ತೆರೆ ಹಂಚಿಕೊಂಡಿದ್ದರು.

Read more Photos on
click me!

Recommended Stories