ನಟನೆ ಬಿಟ್ಟು ಸ್ಪೋರ್ಟ್ಸ್ ಅಖಾಡಕ್ಕಿಳಿದ್ರ ನಿಶ್ವಿಕಾ ನಾಯ್ಡು? Viral Photo ಹಿಂದಿನ ಗುಟ್ಟೇನು?

Published : Jun 09, 2026, 04:15 PM IST

Nishvika Naidu: ಚಂದನವನದ ಸಿಕ್ಸ್ ಪ್ಯಾಕ್ ಸುಂದರಿ ನಟಿ ನಿಶ್ವಿಕಾ ನಾಯ್ಡು ಅವರ ಕೆಲವೊಂದು ಫೋಟೊಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ತೀರಾ ವೈರಲ್ ಆಗುತ್ತಿದೆ. ಇದನ್ನು ನೋಡಿದ್ರೆ ನಟಿ ನಟನೆ ಬಿಟ್ಟು ಸ್ಪೋರ್ಟ್ಸ್ ಕಡೆ ಮುಖ ಮಾಡಿದ್ರೇನೋ ಎಂದು ಜನ ಕೇಳ್ತಿದ್ದಾರೆ. 

PREV
16
ನಿಶ್ವಿಕಾ ನಾಯ್ಡು

ಚಂದನವನದಲ್ಲಿ ಮಿಂಚುತ್ತಿರುವ ಸಿಕ್ಸ್ ಪ್ಯಾಕ್ ಸುಂದರಿ ನಿಶ್ವಿಕಾ ನಾಯ್ಡು, ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಲ್ಲಿ ಅಷ್ಟಾಗಿ ಕಾಣಿಸುತ್ತಿಲ್ಲ, ಇದೀಗ ಅವರು ಪೋಸ್ಟ್ ಮಾಡಿರುವ ಫೋಟೊಗಳನ್ನು ನೋಡಿದ್ರೆ, ನಟಿ ಸಿನಿಮಾರಂಗವನ್ನೆ ಬಿಟ್ಟಿದ್ದಾರೇನೋ ಅನಿಸ್ತಿದೆ.

26
ಅಷ್ಟಕ್ಕೂ ಅವರು ಹಂಚಿಕೊಂಡಿರುವ ಫೋಟೊ ಏನು?

ಸದಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನಿಶ್ವಿಕಾ ನಾಯ್ಡು, ಇದೀಗ ಸ್ಪೋರ್ಟ್ಸ್ ಕಾಸ್ಟ್ಯೂಮ್ ಧರಿಸಿ, ಬ್ಯಾಟ್ ಹಿಡಿದು ಪಿಕಲ್ ಬಾಲ್ ಆಡುತ್ತಾ ಪೋಸ್ ನೀಡುತ್ತಿರುವ ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ.

36
ತುಂಡುಡುಗೆಯಲ್ಲಿ ಬೋಲ್ಡ್ ಲುಕ್

ನಿಶ್ವಿಕಾ ನಾಯ್ಡು ಪಿಂಕ್ ಬಣ್ಣದ ಮಿನಿ ಸ್ಕರ್ಟ್, ಮೇಲೊಂದು ಟ್ಯೂಬ್ ಟಾಪ್ ಅದರ ಮೇಲ್ ಟ್ರಾನ್ಸ್ಪರೆಂಟ್ ಜಾಕೆಟ್ ಧರಿಸಿ ಪಿಕಲ್ ಬಾಲ್ ಕೋರ್ಟಲ್ಲಿ ಬ್ಯಾಟ್ ಹಿಡಿದು ಆಡುವಂತೆ ಪೋಸ್ ಕೊಟ್ಟಿದ್ದಾರೆ. ನಟಿಯ ಬೋಲ್ಡ್ ಹಾಗೂ ಬ್ಯೂಟಿಫುಲ್ ಲುಕ್ ಇದೀಗ ವೈರಲ್ ಆಗುತ್ತಿದೆ.

46
ಮಸ್ತ್ ಮಲೈಕಾ ಅಂದಕ್ಕೆ ಫ್ಯಾನ್ಸ್ ಫಿದಾ

ಇನ್ನು ನಟಿಯ ಈ ಲುಕ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದು, ಅವರ ಫಿಟ್ನೆಸ್, ಸ್ಟೈಲ್, ಬೋಲ್ಡ್ ಅವತಾರ ಕಂಡು, ಮೇಡಂ ಹೀಗೆಲ್ಲಾ ಕಾಣಿಸ್ಕೋಬೇಡಿ, ನಮ್ ಕಣ್ಣೇ ಬಿದ್ದೋಗುತ್ತೆ, ಮಸ್ತ್ ಮಲೈಕಾ ನೀನು ಸೂಪರ್ ಎಂದು ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ.

56
ಫಿಟ್ನೆಸ್ ಜೊತೆ ರಾಜಿ ಮಾಡಿಕೊಳ್ಳದ ನಟಿ

ನಿಶ್ವಿಕಾ ನಾಯ್ಡು ತಮ್ಮ ಫಿಟ್ನೆಸ್ ಜೊತೆ ಎಂದಿಗೂ ರಾಜಿ ಮಾಡಿಕೊಳ್ಳೋದಿಲ್ಲ. ಪ್ರತಿದಿನ ಜಿಮ್ ವರ್ಕ್ ಔಟ್ ಮಾಡುವ ಬೆಡಗಿ, ತಮ್ಮ ವರ್ಕ್ ಔಟ್ ಫೋಟೊ, ವಿಡೀಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ನಟಿಯ ಸಿಕ್ಸ್ ಪ್ಯಾಕ್, ಬೈ ಸೆಪ್ ಆಬ್ಸ್ ಎಲ್ಲಾ ನೋಡಿದ್ರೆ, ಇವರ ಫಿಟ್ನೆಸ್ ಹೇಗಿದೆ ಅನ್ನೋದು ಗೊತ್ತಾಗುತ್ತವೆ..

66
ಸಿನಿಮಾಗಳಿಂದ ದೂರ ಇರೋದು ಯಾಕೆ?

ನಿಶ್ವಿಕಾ ನಾಯ್ಡು ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಲ್ಲಿ ಅಭಿನಯಿಸೋದೆ ಕಡಿಮೆಯಾಗಿದೆ. ಹಲವು ಸಿನಿಮಾಗಳಲ್ಲಿ ಸ್ಪೆಷಲ್ ಸಾಂಗ್ ಗಳಿಗಷ್ಟೇ ನಟಿ ಸೀಮಿತವಾದಂತಿದೆ. ಇತ್ತೀಚೆಗೆ ಬಂದ ಕಿಚ್ಚ ಸುದೀಪ್ ಅಭಿನಯದ ಹಾಗೂ ನಿಶ್ವಿಕಾ ಹೆಜ್ಜೆ ಹಾಕಿದಂತಹ ಮಸ್ತ್ ಮಲೈಕಾ ಹಾಡು ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಇದೀಗ ನಟಿ ಸ್ಪೋರ್ಟ್ ಆಡೋದು ನೋಡಿದ್ರೆ ಇವರು ನಟನೆ ಬಿಟ್ಟು ಸಂಪೂರ್ಣವಾಗಿ ಸ್ಪೋರ್ಸ್ ನಲ್ಲಿ ತಮ್ಮನ್ನು ತೊಡಗಿಸಿಕೊಂಡಂತೆ ಕಾಣಿಸುತ್ತಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories