Ashwini Puneeth rajkumar: ಅಪ್ಪು ನಿವಾಸಕ್ಕೆ ಭೇಟಿ ಮಾಡಿದ ನಿರ್ಮಲಾನಂದ ಸ್ವಾಮೀಜಿ!

Suvarna News   | Asianet News
Published : Dec 02, 2021, 04:13 PM IST

ನಟ ಪುನೀತ್ ರಾಜ್‌ಕುಮಾರ್ ಅವರ ಬೆಂಗಳೂರಿನ ಸದಾಶಿವ ನಗರದ ನಿವಾಸಕ್ಕೆ ಆದಿ ಚುಂಚನಗಿರಿ ಮಠಾಧೀಶರಾದ ನಿರ್ಮಲಾನಂದ ಸ್ವಾಮೀಜಿಗಳು ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. 

PREV
16
Ashwini Puneeth rajkumar: ಅಪ್ಪು ನಿವಾಸಕ್ಕೆ ಭೇಟಿ ಮಾಡಿದ ನಿರ್ಮಲಾನಂದ ಸ್ವಾಮೀಜಿ!

ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅಗಲಿ ಒಂದು ತಿಂಗಳು ಕಳೆದಿದೆ. ಅಪ್ಪು ನಿವಾಸಕ್ಕೆ ಈಗಲೂ ಚಿತ್ರರಂಗದವರು, ಸ್ವಾಮೀಜಿಗಳು ಮತ್ತು ರಾಜಕಾರಣಿಗಳು ಭೇಟಿ ನೀಡಿ ಸಾಂತ್ವಾನ ಹೇಳುತ್ತಿದ್ದಾರೆ. 

26

ಇಂದು ನಿರ್ಮಲಾನಂದ ಸ್ವಾಮೀಜಿ (Nirmalananda swamiji) ಮತ್ತು ಆರೋಗ್ಯ ಸಚಿವ ಡಾ.ಸುಧಾಕರ್ (Dr. Sudhakar) ಅವರು ಪುನೀತ್ ನಿವಾಸಕ್ಕೆ ಭೇಟಿ ನೀಡಿದ್ದಾರೆ. 

36

'ರಾಜ್‌ಕುಮಾರ್ ಮತ್ತು ಆದಿ ಚುಂಚನಗಿರಿ ಮಠಕ್ಕೆ ಆವಿನಾನುಭಾವ ಸಂಬಂಧ ಇತ್ತು. ಪುನೀತ್ ರಾಜ್‌ಕುಮಾರ್ ಅಗಲಿಗೆ ಬಳಿಕ ಅವರ ಮನೆಗೆ ಬರಲು ಸಾಧ್ಯವಾಗಿರಲಿಲ್ಲ. ಅವರ ಪತ್ನಿ ಅಶ್ವಿನಿ ಅವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದೇವೆ,' ಎಂದು ನಿರ್ಮಲಾನಂದ ಸ್ವಾಮೀಜಿ ಮಾತನಾಡಿದ್ದಾರೆ. 

46

ಈ ವೇಳೆ ನಟ ರಾಘವೇಂದ್ರ ರಾಜ್‌ಕುಮಾರ್ (Raghavendra Rajkumar), ಅವರ ಪುತ್ರ ಯುವರಾಜ್‌ಕುಮಾರ್ (Yuva Rajkumar) ಮತ್ತು ಅಶ್ವಿನಿ ಅವರ ತಾಯಿ ಕೂಡ ಇದ್ದರು. 

56

'ಮೊಟ್ಟ ಮೊದಲು ತಮ್ಮನ್ನು ಕಲೆಗಾಗಿ ಮುಡಿಪಾಗಿಟ್ಟು, ಸರ್ವರ ಮನಸ್ಸಿಗೆ ಆನಂದ ತಂದುಕೊಟ್ಟಂಥವರು. ಈ ಸಂದರ್ಭದಲ್ಲಿ ಭಗವಂತ ಚಿರಶಾಂತಿಯನ್ನು ಅವರ ಆತ್ಮಕ್ಕೆ ಕೊಡಲಿ,' ಎಂದು ಅಪ್ಪು ಅಂತಿಮ ದರ್ಶನ ಪಡೆಯುವ ಸಮಯದಲ್ಲಿ ಸ್ವಾಮೀಜಿಗಳು ಮಾತನಾಡಿದ್ದರು. 

66

ಪುನೀತ್ ಅಗಲಿ ಒಂದು ತಿಂಗಳಾದರೂ ಸಮಾಧಿ ಪೂಜೆ ಸಲ್ಲಿಸಲು ದಿನ ನಿತ್ಯ  25 ಸಾವಿರಕ್ಕೂ ಹೆಚ್ಚು ಜನರು ಆಗಮಿಸುತ್ತಿದ್ದಾರೆ. ಊರು ಊರುಗಳಿಂದ ಸೈಕಲ್‌ ಮತ್ತು ಮ್ಯಾರಥಾನ್ ಮೂಲಕ ಬಂದು ತಮ್ಮ ನಮನ ಸಲ್ಲಿಸುತ್ತಿದ್ದಾರೆ. ಇದಕ್ಕೆ ರಾಘವೇಂದ್ರ ರಾಜ್‌ಕುಮಾರ್ ಧನ್ಯವಾದಗಳನ್ನು ತಿಳಿಸಿದ್ದಾರೆ.

Read more Photos on
click me!

Recommended Stories