ತಾರ ಹೊಸ ಮನೆ ಗೃಹ ಪ್ರವೇಶ: ಸಂಭ್ರಮದಲ್ಲಿ ಮಿಂಚಿದ ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳು

Published : Jun 21, 2024, 02:35 PM ISTUpdated : Jun 21, 2024, 02:58 PM IST

ಸ್ಯಾಂಡಲ್ ವುಡ್ ನಟಿ ಹಾಗೂ ಕಿರುತೆರೆಯಲ್ಲಿ ನಮ್ಮಮ್ಮ ಸೂಪರ್ ಸ್ಟಾರ್, ರಾಜಾರಾಣಿ ಶೋಗಳಲ್ಲಿ ತೀರ್ಪುಗಾರರಾಗಿ ಮಿಂಚಿದ ನಟಿ ತಾರಾ ಅನುರಾಧ ಹೊಸದಾಗಿ ಮನೆ ನಿರ್ಮಿಸಿದ್ದು, ಇತ್ತೀಚೆಗಷ್ಟೇ ಹೊಸ ಮನೆ ಗೃಹಪ್ರವೇಶ ಮಾಡಿದ್ದಾರೆ.   

PREV
17
ತಾರ ಹೊಸ ಮನೆ ಗೃಹ ಪ್ರವೇಶ: ಸಂಭ್ರಮದಲ್ಲಿ ಮಿಂಚಿದ ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳು

ಹಲವು ದಶಕಗಳಿಂದ ಕನ್ನಡ ಸಿನಿಮಾರಂಗದಲ್ಲಿ ಮಿಂಚುತ್ತಿರುವ ಮತ್ತು ಸದ್ಯ ಕನ್ನಡ ರಿಯಾಲಿಟಿ ಶೋಗಳಾದ ನಮ್ಮಮ್ಮ ಸೂಪರ್ ಸ್ಟಾರ್ ಮತ್ತು ರಾಜಾ ರಾಣಿ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಮಿಂಚುತ್ತಿರುವ ನಟಿ ತಾರಾ ಅನುರಾಧಾ (Thara) ಇದೀಗ ಹೊಸ ಮನೆಗೆ ಕಾಲಿಟ್ಟ ಸಂಭ್ರಮದಲ್ಲಿದ್ದಾರೆ. 
 

27

ನಟಿ ತಾರ ತಮ್ಮ ಕನಸಿನ ಮನೆಗೆ ಕಾಲಿಟ್ಟಿದ್ದು, ಇತ್ತೀಚೆಗಷ್ಟೇ ಗೃಹಪ್ರವೇಶ (House worming ceremony) ಮಾಡಿಸಿದ್ದಾರೆ. ಈ ಸಂಭ್ರಮದಲ್ಲಿ ಕಿರುತೆರೆ ಸೆಲೆಬ್ರಿಟಿಗಳು, ನಟಿಯರು, ಅಲ್ಲದೇ ನಮ್ಮಮ್ಮ ಸೂಪರ್ ಸ್ಟಾರ್ ತಾರೆಯರು ಭಾಗಿಯಾಗಿ ಸಂಭ್ರಮಿಸಿದ್ದಾರೆ. 
 

37

ಹೊಸ ಮನೆಗೆ ಗೃಹಪ್ರವೇಶ ಸಮಾರಂಭ ಅದ್ಧೂರಿಯಾಗಿ ನಡೆದಿದ್ದು, ತಾರಾ ಮನೆಗೆ ಸೃಜನ್ ಲೋಕೇಶ್, ಅನುಪಮಾ ಗೌಡ (Anupama Gowda) , ನೇಹಾ ಗೌಡ , ಮುರುಗಾನಂದ, ಇಶಿತಾ ದಂಪತಿ ಭಾಗಿಯಾಗಿ ಶುಭ ಕೋರಿದ್ದಾರೆ. ಅಲ್ಲದೇ ನಮ್ಮಮ್ಮ ಸೂಪರ್ ಸ್ಟಾರ್ , ರಾಜಾ ರಾಣಿ ಸ್ಪರ್ಧಿಗಳು ಭಾಗಿಯಾಗಿದ್ದಾರೆ. 
 

47

ಕಿರುತೆರೆ, ಹಿರಿತೆರೆಯ ಹಲವು ಸೆಲೆಬ್ರಿಟಿಗಳು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತಾರಾ ಹೊಸ ಮನೆ ಗೃಹಪ್ರವೇಶದ ಫೋಟೋಗಳನ್ನು ಶೇರ್ ಮಾಡುವ ಮೂಲಕ ನಟಿಗೆ ಶುಭ ಕೋರಿದ್ದಾರೆ. ಆ ಸುಂದರ ಫೋಟೋಗಳು ಇಲ್ಲಿವೆ. 
 

57

ನಟಿ ತಾರಾ ಇಂದಿಗೂ ಕನ್ನಡ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಇತ್ತೀಚೆಗೆ ಕೋಟಿ ಸಿನಿಮಾದಲ್ಲಿ ಡಾಲಿ ಧನಂಜಯ್ ಜೊತೆ ಹಿರಿಯ ನಟಿ ತಾರಾ ನಟಿಸಿದ್ದರು. ಈ ತಾಯಿ ಮತ್ತು ಮಗನ ಕಾಂಬಿನೇಶನ್ ಜನ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದಾರೆ. 
 

67

ತಮಿಳು ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅನುರಾಧಾ (Anuradha), ಬಳಿಕ ತಮ್ಮ ರಂಗನಾಮ ತಾರಾ ಹೆಸರಿನಿಂದ ಖ್ಯಾತಿ ಪಡೆದರು. ಬಳಿಕ 1985 ರಲ್ಲಿ ತುಳಸಿ ದಳ ಎನ್ನುವ ಕನ್ನಡ ಸಿನಿಮಾದಲ್ಲಿ ನಟಿಸುವ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ತಾರಾ, ಕಳೆದ 40 ವರ್ಷಗಳಿಂದ ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ಕೊಟ್ಟಿದ್ದಾರೆ, ಜೊತೆಗೆ ತಮಿಳು, ತೆಲುಗು ಸಿನಿಮಾದಲ್ಲೂ ನಟಿಸಿದ್ದಾರೆ. 
 

77

ಹಸೀನಾ ಚಿತ್ರಕ್ಕಾಗಿ ತಾರಾ ಅವರಿಗೆ ರಾಷ್ಟ್ರೀಯ ಪ್ರಶಸ್ತಿ (National Award) ಕೂಡ ಲಭ್ಯವಾಗಿತ್ತು. ಇವರು ನಟನೆ ಅಲ್ಲದೇ ರಾಜಕೀಯದಲ್ಲೂ ಗುರುತಿಸಿಕೊಂಡಿದ್ದರು. 2009 ರಲ್ಲಿ ಬಿಜೆಪಿ ವಿಧಾನ ಪರಿಷತ್ ಸದಸ್ಯರಾದ್ದರು.
 

Read more Photos on
click me!

Recommended Stories