ಮೇಘಾ ಶೆಟ್ಟಿ ಲೇಟೆಸ್ಟ್​​ ಫೋಟೋಶೂಟ್: ಬರ್ತಾ ಬರ್ತಾ ಸಿಕ್ಕಾಪಟ್ಟೆ ಚೇಂಜ್ ಆಗ್ತಿದ್ದೀರಾ ಎಂದ ಫ್ಯಾನ್ಸ್​!

First Published Dec 31, 2023, 2:30 AM IST

ಜೀ ಕನ್ನಡದ ಜೊತೆ ಜೊತೆಯಲಿ ಧಾರಾವಾಹಿಯಿಂದ ಖ್ಯಾತಿ ಗಳಿಸಿದ ನಟಿ ಮೇಘಾ ಶೆಟ್ಟಿ ಸ್ಯಾಂಡಲ್‌ವುಡ್ ಅಂಗಳ ದಾಟಿ ಈಗ ಬೇರೆ ಭಾಷೆಗಳಲ್ಲಿಯೂ ಬ್ಯೂಸಿಯಾಗಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿರುವ ನಟಿ ಇದೀಗ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಜೊತೆ ಜೊತೆಯಲ್ಲಿ ಧಾರಾವಾಹಿಯಿಂದ ಅನು ಸಿರಿಮನೆ ಅಂತಾನೇ ಮೇಘಾ ಶೆಟ್ಟಿ ಖ್ಯಾತಿ ಗಳಿಸಿದ್ದಾರೆ. ತಮ್ಮ ಅದ್ಭುತ ನಟನೆಯ ಮೂಲಕ ಜನರ ಮನಸ್ಸು ಗೆದ್ದಿದ್ದಾರೆ. ಅನುಗಾಗಿ ಎಷ್ಟೋ ಜನ ಧಾರಾವಾಹಿ ನೋಡ್ತಾ ಇದ್ದರು.

ನಟಿ ಮೇಘಾ ಶೆಟ್ಟಿ  ಇದೀಗ ಹೊಸ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಬ್ಲ್ಯಾಕ್ ಕಲರ್ ಪುಲ್ ಒವರ್ ಹಾಗೂ ಟೋನ್ ಜೀನ್ಸ್ ಧರಿಸಿ ಸಿಂಪಲ್ ಲುಕ್‌ನಲ್ಲಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.

ಮೇಘಾ ಶೆಟ್ಟಿ ಫೋಟೋ ನೋಡಿದ ನೆಟ್ಟಿಗರು ಸೂಪರ್ ಪಿಕ್, ಸೋ ಕ್ಯೂಟ್ ಬಂಗಾರ, ಮಿಲ್ಕಿ ಬ್ಯೂಟಿ, ಬರ್ತಾ ಬರ್ತಾ ಸಿಕ್ಕಾಪಟ್ಟೆ ಚೇಂಜ್ ಆಗ್ತಿದ್ದೀರಾ ಎಂದು ಭಿನ್ನ, ವಿಭಿನ್ನವಾಗಿ ಅಭಿಮಾನಿಗಳು ಕಾಮೆಂಟ್ ಹಾಕಿದ್ದಾರೆ.

ಸೆಲೆಬ್ರಿಟಿಗಳು ಏನೂ ಮಾಡಿದರೂ ದೊಡ್ಡ ಸುದ್ದಿ ಮತ್ತು ಯಾವ ಬಟ್ಟೆ ಹಾಕಿದರೂ ಅದಕ್ಕೆ ಕಾಮೆಂಟ್ ಮಾಡುವವರು ಇದ್ದೇ ಇರುತ್ತಾರೆ. ಹಾಗೆಯೇ ಮೇಘಾ ಶೆಟ್ಟಿ ಕೂಡ. ತಮ್ಮ ಫೋಟೋಗಳಿಗೆ ಜನರು ಏನೇ ಕಾಮೆಂಟ್ ಹಾಕಿದರೂ ತಾವು ಮಾತ್ರ ಬಿಂದಾಸ್ ಆಗಿ ಇರುತ್ತಾರೆ. 

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಮೇಘಾ, ಗಣೇಶ್ ಜೊತೆಗಿನ ತ್ರಿಬಲ್ ರೈಡಿಂಗ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಇತ್ತೀಚೆಗೆ ಅವರು ಕೈವ ಚಿತ್ರದಲ್ಲಿ ಸಲ್ಮಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಗ್ರಾಮಾಯಣ ಸಿನಿಮಾಗೆ ದೊಡ್ಮನೆ ಹುಡುಗ ವಿನಯ್ ರಾಜ್‌ಕುಮಾರ್‌ ಅವರಿಗೆ ಮೇಘಾ ಶೆಟ್ಟಿ ಜೋಡಿ ಆಗುತ್ತಿದ್ದು, ಸೋಷಿಯಲ್‌ ಮೀಡಿಯಾ ಇನ್‌ಸ್ಟಾಗ್ರಾಂನಲ್ಲಿ ಬರೋಬ್ಬರಿ 11 ಲಕ್ಷಕ್ಕೂ ಅಧಿಕ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. 

ಮೇಘಾ ಶೆಟ್ಟಿ ಅವರು ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಅಭಿಮಾನಿಗಳಿಗಾಗಿ ಫೋಟೋಗಳನ್ನು ಶೇರ್ ಮಾಡ್ತಾ ಇರ್ತಾರೆ. ಜನ ಅವುಗಳನ್ನು ಮೆಚ್ಚಿ ಕಾಮೆಂಟ್ ಹಾಕ್ತಾರೆ.

ನಟಿ ಮೇಘಾ ಶೆಟ್ಟಿ ಇನ್ನೂ ಒಳ್ಳೆ ಒಳ್ಳೆಯ ಸಿನಿಮಾಗಳನ್ನು ಮಾಡಲಿ ಎಂದು ಜನ ಹೇಳಿದ್ದಾರೆ. ಅಲ್ಲದೇ ಮೇಘಾ ಅವರಿಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ. ಸದ್ಯ ಸಿನಿಮಾ ಆಫರ್‌ಗಳು ಮೇಘಾ ಅವರನ್ನು ಹುಡುಕಿಕೊಂಡು ಬರುತ್ತಿವೆ.

click me!