ಬಿಡುಗಡೆ ಹೊತ್ತಲ್ಲೇ Toxic ಸಿನಿಮಾಗೆ ಸಂಕಷ್ಟ; ದೇವದೂತರ ಮುಂದೆ ಅಶ್ಲೀಲ ಚಿತ್ರೀಕರಣ, ಕ್ಷಮೆಗೆ ಒತ್ತಾಯ

Published : Feb 11, 2026, 10:40 AM IST

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ಟ್ರೈಲರ್‌ನಲ್ಲಿನ ದೃಶ್ಯವೊಂದು ಕ್ರೈಸ್ತ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಿ ರಾಷ್ಟ್ರೀಯ ಕ್ರೈಸ್ತರ ಒಕ್ಕೂಟವು ದೂರು ದಾಖಲಿಸಿದೆ. ಆ ದೃಶ್ಯಗಳನ್ನು ತೆಗೆದುಹಾಕಬೇಕೆಂದು ಆಗ್ರಹಿಸಲಾಗಿದೆ. 

PREV
16
ಟಾಕ್ಸಿಕ್ ಸಿನಿಮಾ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಈ ಸಂದರ್ಭದಲ್ಲಿಯೇ ಚಿತ್ರದ ವಿರುದ್ಧ ಕ್ರೈಸ್ತ ಸಮುದಾಯದಿಂದ ದೂರು ದಾಖಲಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ದಾಖಲಿಸಲಾಗಿದೆ.

26
ಕ್ರೈಸ್ತ ಸಮುದಾಯ

National christian federation(NCF) ದೂರು ಸಲ್ಲಿಕೆ ಮಾಡಿದ್ದು, ದೇವದೂತರ ಮುಂದೆ ಅಶ್ಲೀಲ ಚಿತ್ರೀಕರಿಸಿದ್ದಾರೆ. ಇದರಿಂದ ಕ್ರೈಸ್ತ ಸಮುದಾಯದ ಜನರ ಭಾವನೆಗಳಿಗೆ ಧಕ್ಕೆಯುಂಟಾಗಿದೆ. ಯೂಟ್ಯೂಬ್ ಪೋಸ್ಟ್ ತೆಗೆಯಬೇಕು, ದೃಶ್ಯಗಳನ್ನ ತೆಗೆಯಬೇಕು ಎಂದು ಎನ್‌ಸಿಎಫ್ ಆಗ್ರಹಿಸಿದೆ.

36
ಸಿನಿಮಾ ಟ್ರೈಲರ್‌

ಬಿಡುಗಡೆಯಾದ ಸಿನಿಮಾ ಟ್ರೈಲರ್‌ನಲ್ಲಿ ದೇವದೂತ ಸಂತ ಮಿಕಯೇಲ್ ಅವರ ವಿಗ್ರಹ ಬಳಕೆ ಮಾಡಲಾಗಿದೆ. ಇದೇ ದೇವದೂತರ ವಿಗ್ರಹದ ಮುಂದೆಯೇ ಅಶ್ಲೀಲ ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಟಾಕ್ಸಿಕ್ ಸಿನಿಮಾದಲ್ಲಿ ಕ್ರೈಸ್ತರಿಗೆ ಮುಜುಗರ ಹಾಗೂ ಧರ್ಮಕ್ಕೆ ಅಪಮಾನವಾಗಿದೆ. ಕೂಡಲೇ ಸಿನಿಮಾ ತಂಡ ದೃಶ್ಯಗಳನ್ನ ತೆಗೆದು ಕ್ರೈಸ್ತರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಲಾಗಿದೆ.

46
ರಾಷ್ಟ್ರೀಯ ಕ್ರೈಸ್ತರ ಒಕ್ಜೂಟ

ಈ ಸಂಬಂಧ ರಾಷ್ಟ್ರೀಯ ಕ್ರೈಸ್ತರ ಒಕ್ಜೂಟದ ಅಧ್ಯಕ್ಷ ಪ್ರದೀಪ್ ಕುಮಾರ್ ಎಂಬವರು, ಚಲನಚಿತ್ರ ವಾಣಿಜ್ಯ ಮಂಡಳಿ, ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹಸಚಿವರು, ಸೆನ್ಸರ್ ಬೋರ್ಡ್‌ಗೆ ದೂರು ಸಲ್ಲಿಕೆ ಮಾಡಿದ್ದಾರೆ. ಟಾಕ್ಸಿಕ್ ಸಿನಿಮಾ ಮಾರ್ಚ್ 19ರಂದು ಬಿಡುಗಡೆಯಾಗಲಿದೆ.

56
40 ಕೋಟಿ ರೂಪಾಯಿ ಅಡ್ವಾನ್ಸ್ ವ್ಯವಹಾರ

‘ಟಾಕ್ಸಿಕ್’ ಚಿತ್ರದ ಆಂಧ್ರಪ್ರದೇಶ ಮತ್ತು ತೆಲಂಗಾಣ ವಿತರಣಾ ಹಕ್ಕುಗಳನ್ನು ಪಿವಿಆರ್‌ ಐನಾಕ್ಸ್‌ ಸಂಸ್ಥೆ ಪಡೆದುಕೊಂಡಿದೆ. ಈ ಒಪ್ಪಂದದಲ್ಲಿ 40 ಕೋಟಿ ರೂಪಾಯಿ ಅಡ್ವಾನ್ಸ್ ವ್ಯವಹಾರವಾಗಿದೆ ಎನ್ನಲಾಗಿದೆ. ಪಿವಿಆರ್‌ ಐನಾಕ್ಸ್‌ ಆಂಧ್ರ ಮತ್ತು ತೆಲಂಗಾಣದ ಬಹುತೇಕ ಪಟ್ಟಣಗಳ ವಿತರಣೆ ಹಕ್ಕನ್ನು ಸ್ಥಳೀಯ ವಿತರಕರಿಗೆ ಮಾರಿ, ಸಿಟಿ ಸೆಂಟರ್‌ಗಳ ವಿತರಣೆಯನ್ನು ತನ್ನ ಬಳಿಯೇ ಇಟ್ಟುಕೊಳ್ಳುವ ಸಾಧ್ಯತೆಯಿದೆ.

ಇದನ್ನೂ ಓದಿ: ತೆಲುಗು ನೆಲದಲ್ಲಿ ಹೊಸ ದಾಖಲೆ ಬರೆದ ಕನ್ನಡಿಗ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ; ಭಾರೀ ಮೊತ್ತಕ್ಕೆ ಮಾರಾಟ!

66
ದೇಶದ ಅತಿದೊಡ್ಡ ಮಲ್ಟಿಪ್ಲೆಕ್ಸ್‌ ಚೈನ್‌

ಮೇಲ್ನೋಟಕ್ಕೆ ಈ ಒಪ್ಪಂದವು ಕೇವಲ ತೆಲುಗು ಮಾರುಕಟ್ಟೆಯ ವ್ಯವಹಾರದಂತೆ ಕಂಡರೂ, ರಾಷ್ಟ್ರೀಯ ಮಟ್ಟದಲ್ಲಿ ಇದೊಂದು ಮಹತ್ವದ ಬೆಳವಣಿಗೆಯಾಗಿದೆ. ಪಿವಿಆರ್‌ ಐನಾಕ್ಸ್‌ ದೇಶದ ಅತಿದೊಡ್ಡ ಮಲ್ಟಿಪ್ಲೆಕ್ಸ್‌ ಚೈನ್‌ ಆಗಿದ್ದು, ಈ ಒಪ್ಪಂದದಿಂದಾಗಿ ‘ಟಾಕ್ಸಿಕ್’ ಚಿತ್ರಕ್ಕೆ ಹಿಂದಿ ಮಾರುಕಟ್ಟೆ ಹಾಗೂ ಬೆಂಗಳೂರಿನಂತಹ ಮುಖ್ಯ ನಗರಗಳಲ್ಲಿ ಹೆಚ್ಚಿನ ಸ್ಕ್ರೀನ್‌ಗಳು ಸಿಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಟಾಕ್ಸಿಕ್ ಟೀಸರ್ ಮ್ಯಾಜಿಕ್: ಯಾರದು ಟಾಕ್ಸಿಕ್ ರಂಭೆ? ಆ ಗುಟ್ಟು ಬಿಚ್ಚಿಟ್ಟ ಫ್ಯಾನ್ಸ್‌ಗೆ ಹಾಲಿವುಡ್ ಗೊಂಬೆ ನಟಾಲಿಯಾ!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories