'ವಾರ್ತೆಗಳು... ಓದುತ್ತಿರುವವರು ಶಂಕರ್ ನಾಗ್': ಈ ಬಾರಿ ಸಂಗೀತ ನಿರ್ದೇಶಕನಾದ ನಾಗಶೇಖರ್‌

Published : Aug 05, 2025, 12:33 PM IST

ನಾಗಶೇಖರ್‌ ಅವರನ್ನು ಸಂಗೀತ ನಿರ್ದೇಶಕನನ್ನಾಗಿ ಮಾಡುತ್ತಿರುವ ಚಿತ್ರದ ಹೆಸರು ‘ವಾರ್ತೆಗಳು... ಓದುತ್ತಿರುವವರು ಶಂಕರ್‌ ನಾಗ್‌’. ಇದೇ ಮೊದಲ ಬಾರಿಗೆ ಸಂಗೀತ ನಿರ್ದೇಶಕರಾಗಿರುವ ನಾಗಶೇಖರ್‌ ಅವರ ನಟನೆಯ ಈ ಹೊಸ ಚಿತ್ರ.

PREV
15

ನಿರ್ದೇಶಕ ನಾಗಶೇಖರ್‌ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಈ ಬಾರಿ ಅವರು ನಿರ್ಮಾಣ ಹಾಗೂ ನಟನೆ ಜೊತೆಗೆ ಸಂಗೀತ ನಿರ್ದೇಶಕರಾಗಿಯೂ ಗುರುತಿಸಿಕೊಳ್ಳುವುದಕ್ಕೆ ಹೊರಟಿದ್ದಾರೆ.

25

ನಾಗಶೇಖರ್‌ ಅವರನ್ನು ಸಂಗೀತ ನಿರ್ದೇಶಕನನ್ನಾಗಿ ಮಾಡುತ್ತಿರುವ ಚಿತ್ರದ ಹೆಸರು ‘ವಾರ್ತೆಗಳು... ಓದುತ್ತಿರುವವರು ಶಂಕರ್‌ ನಾಗ್‌’. ಇದೇ ಮೊದಲ ಬಾರಿಗೆ ಸಂಗೀತ ನಿರ್ದೇಶಕರಾಗಿರುವ ನಾಗಶೇಖರ್‌ ಅವರ ನಟನೆಯ ಈ ಹೊಸ ಚಿತ್ರಕ್ಕೆ ಆಗಸ್ಟ್‌ 15ರಂದು ಮುಹೂರ್ತ ಮಾಡಿ, ಚಿತ್ರೀಕರಣಕ್ಕೆ ಚಾಲನೆ ನೀಡಲಿದ್ದಾರೆ.

35

ಇನ್ನೂ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿರುವುದು ಜಿಯಾ ಉಲ್ಲಾ ಖಾನ್‌ ಎಂಬುವವರು. ನಾಗಶೇಖರ್‌, ಈ ಬಾರಿಯೂ ಹೊಸ ರೀತಿಯ ಪ್ರಯತ್ನದೊಂದಿಗೆ ಸಿನಿಮಾ ಆರಂಭಿಸುತ್ತಿದ್ದೇವೆ. ಇದು ಮ್ಯೂಸಿಕಲ್‌ ಹಿನ್ನೆಲೆಯಲ್ಲಿ ಸಾಗುವ ಕತೆಯ ಸಿನಿಮಾ.

45

ನಮ್ಮ ದೇಶದ ಒಂದು ಸಣ್ಣ ನಗರ ಅಥವಾ ಪಟ್ಟಣದಲ್ಲಿ ನೋಡುವ ಸಾಮಾಜಿಕ ಸಮಸ್ಯೆ ಸುತ್ತಾ ಈ ಸಿನಿಮಾ ಸಾಗುತ್ತದೆ. ಸಾಮಾಜಿಕ ಸಮಸ್ಯೆಯೊಂದನ್ನು ಪ್ರತಿಬಿಂಬಿಸಲು ಮತ್ತು ಅದರ ಬಗ್ಗೆ ಮಾತನಾಡುವುದಕ್ಕೆ ಸಂಗೀತ ಹೇಗೆ ಬೆನ್ನೆಲುಬಾಗಿ ನಿಲ್ಲುತ್ತದೆ ಎಂಬುದನ್ನು ಹೇಳುವ ಪ್ರಯತ್ನ ಈ ಚಿತ್ರದ್ದು.

55

ನನ್ನ ನೆಚ್ಚಿನ ನಟ ಶಂಕರ್‌ನಾಗ್‌ ಅವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಚಿತ್ರದ ಶೀರ್ಷಿಕೆಯಲ್ಲಿ ಅವರ ಹೆಸರು ಇಡಲಾಗಿದೆ. ಮತ್ತು ಅದು ಕತೆಗೂ ಪೂರಕವಾಗಿಯೂ ಇದೆ ಎನ್ನುತ್ತಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories