Rachita Ram ಮಾತಿಗೆ ಅಪ್ಪು ಫ್ಯಾನ್ಸ್​ ಫುಲ್​ ಗರಂ! ಅಷ್ಟಕ್ಕೂ ಅಂಥದ್ದೇನು ಹೇಳಿದ್ರು ನಟಿ?

Published : Oct 06, 2025, 12:47 PM IST

ನಟಿ ರಚಿತಾ ರಾಮ್ ತಮ್ಮ 33ನೇ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಆಚರಿಸಿಕೊಂಡರು. ಈ ಸಂದರ್ಭದಲ್ಲಿ, 'ಬದುಕಿರುವಾಗಲೇ ನನಗೆ ಹೆಸರು, ಪ್ರಶಸ್ತಿ ಬರುತ್ತಿದೆ' ಎಂದು ಅವರು ನೀಡಿದ ಹೇಳಿಕೆಯು ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. 

PREV
16
Dimple Queen 33ನೇ ಹುಟ್ಟುಹಬ್ಬ

ಮೊನ್ನೆ ಅಂದರೆ ಅಕ್ಟೋಬರ್​ 3 ನಟಿ ಡಿಂಪಲ್​ ಕ್ವೀನ್​ ರಚಿತಾ ರಾಮ್​ (Dimple Queen Rachita Ram) ಹುಟ್ಟುಹಬ್ಬ ಸಂಭ್ರಮ. 33 ವರ್ಷದ ಹುಟ್ಟುಹಬ್ಬವನ್ನು ರಚಿತಾ ರಾಮ್​ ಅವರು ತಮ್ಮ ಅಭಿಮಾನಿಗಳ ಎದುರು ಆಚರಿಸಿಕೊಂಡರು. ಇದೇ ಮೊದಲ ಬಾರಿಗೆ ಪಾಲಕರ ಜೊತೆಯೂ ಹುಟ್ಟುಹಬ್ಬ ಆಚರಿಸಿಕೊಳ್ತಿರೋದಾಗಿ ನಟಿ ಹೇಳಿದರು. ಈ ಸಂದರ್ಭದಲ್ಲಿ ರಚಿತಾ ಹಲವಾರು ವಿಷಯಗಳ ಬಗ್ಗೆ ಮಾತನಾಡಿದರು.

26
ಇನ್​ಸ್ಟಾಗ್ರಾಮ್​ನಲ್ಲಿ ಮಾಹಿತಿ

ತಮ್ಮ ಹುಟ್ಟುಹಬ್ಬದ ಕುರಿತು ನಟಿ ಮೊದಲೇ ಇನ್​ಸ್ಟಾಗ್ರಾಮ್​ನಲ್ಲಿ ಮಾಹಿತಿ ನೀಡಿದ್ದರು. ಎಲ್ಲರಿಗೂ ನಮಸ್ಕಾರ, ನನ್ನ ಬದುಕಿನಲ್ಲಿ ನೀವು ತೋರಿದ ಪ್ರೀತಿ, ಪ್ರೋತ್ಸಾಹ, ಕಾಳಜಿ ಹಾಗೂ ನನ್ನ ಪ್ರತಿಯೊಂದು ಹಂತದಲ್ಲಿ ನನ್ನ ಜೊತೆ ನಿಂತು ಬೆಂಬಲಿಸಿದ ನಿಮ್ಮೆಲ್ಲರಿಗೂ ನಾನು ಸದಾ ಋಣಿಯಾಗಿದ್ದೇನೆ. ಅಭಿಮಾನಿಗಳ ಒತ್ತಾಯ ಹಾಗೂ ನನ್ನ ಕುಟುಂಬದ ಒತ್ತಾಯದ ಮೇರೆಗೆ, ಅಕ್ಟೋಬರ್​ 3ರಂದು ನನ್ನ ಮನೆಯ ಬಳಿ ನಿಮ್ಮೆಲ್ಲರೊಂದಿಗೆ ಈ ವಿಶೇಷ ದಿನವನ್ನು ಹಂಚಿಕೊಳ್ಳಲು ನಾನು ಕಾಯುತ್ತಿದ್ದೆನೆ. ಇದು ಕೇವಲ ಹುಟ್ಟುಹಬ್ಬದ ಆಚರಣೆ ಅಲ್ಲ, ಇದು ನಮ್ಮ ಸಂಬಂಧದ ಸಂಭ್ರಮ, ನಿಮ್ಮ ಪ್ರೀತಿಯ ರಚ್ಚು ಎಂದು ಬರೆದುಕೊಂಡಿದ್ದರು.

36
ಭಾವುಕರಾದ ರಚಿತಾ ರಾಮ್​

ಇದರಿಂದ ಹಲವಾರು ಅಭಿಮಾನಿಗಳು ಇವರ ಮನೆಯ ಮುಂದೆ ಜಮಾಯಿಸಿದ್ದರು. ಹಲವರು ನಟಿಗೆ ಆತ್ಮೀಯವಾಗಿ ಸನ್ಮಾನಿಸಿದರು. ಹಲವು ಬಿರುದುಗಳ ಮೂಲಕ ನಟಿಯನ್ನು ಶ್ಲಾಘಿಸಿದರು. ಜನರ ಇಷ್ಟೊಂದು ಪ್ರೀತಿಯನ್ನು ನೋಡಿದ ರಚಿತಾ ರಾಮ್​ ಭಾವುಕರಾಗಿ ಕೆಲವೊಂದು ಮಾತುಗಳನ್ನು ಆಡಿದರು. ಆದರೆ ಅದು ಈಗ ನಟ ಪುನೀತ್​ ರಾಜ್​ಕುಮಾರ್ (Puneet Rajkumar) ಅವರ ಅಭಿಮಾನಿಗಳನ್ನು ಕೆರಳಿಸಿದೆ.

46
ಪುನೀತ್​ ರಾಜ್​ ಫ್ಯಾನ್ಸ್​ ಗರಂ

ಅಪ್ಪು ಫ್ಯಾನ್ಸ್​ ರಚಿತಾ ರಾಮ್​ ವಿರುದ್ಧ ಕೆಂಡ ಕಾರುತ್ತಿದ್ದಾರೆ. ಅಷ್ಟಕ್ಕೂ ರಚಿತಾ ರಾಮ್​ ಅವರು ಯಾರ ಹೆಸರನ್ನೂ ಹೇಳದೇ ಒಂದು ವಾಕ್ಯ ಹೇಳಿದ್ದೇ ಅಷ್ಟೊಂದು ಸಿಟ್ಟಿಗೆ ಕಾರಣವಾಗಿದೆ. 'ಇವತ್ತು ಇದನ್ನು ನಾನು mension ಮಾಡಬಾರದು. ಆದರೂ ಹೇಳುತ್ತಿದ್ದೇನೆ' ಎನ್ನುತ್ತಲೇ ನಟಿ, ನಮ್ಮ ಜೀವ ಹೋದ್ಮೇಲೆ ಅವಾರ್ಡ್ಸ್ ಬರುತ್ತೆ, ನಮಗೆ ಒಂದು ಕಿರೀಟ ಇಡುತ್ತಾರೆ, ಹೆಸರು ಬರುತ್ತೆ. ಆದರೆ ನನ್ನ ಪುಣ್ಯ. ನನಗೆ ಬದುಕಿರುವಾಗಲೇ ಹೆಸರು ಬರುತ್ತಿದೆ. ಈ ಬಗ್ಗೆ ಖುಷಿ ಇದೆ’ ಎಂದಿದ್ದಾರೆ.

56
ಅಪ್ಪು ಟಾರ್ಗೆಟ್​ ಮಾಡಿದ್ರಂತೆ ನಟಿ!

ಇತ್ತೀಚಿಗೆ ನಿಧನರಾದ ಕೆಲವು ಸೆಲೆಬ್ರಿಟಿಗಳನ್ನು ನೆನಪಿಸಿಕೊಂಡು ನಟಿ ಈ ಮಾತನ್ನು ಹೇಳಿದ್ದಾರೆ. ಆದರೆ ರಚಿತಾ ರಾಮ್​ ಅವರು ಅಪ್ಪು ಅವರನ್ನೇ ಟಾರ್ಗೆಟ್​ ಮಾಡಿಕೊಂಡು ಈ ವಿಷಯ ಹೇಳಿದ್ದಾರೆ ಎನ್ನುವುದು ಅಪ್ಪು ಫ್ಯಾನ್ಸ್​ ಅಭಿಮತ. ಆದ್ದರಿಂದ ರಚಿತಾ ರಾಮ್​ಗೆ ತೀವ್ರ ಟ್ರೋಲ್​ ಮಾಡುತ್ತಿದ್ದಾರೆ. ಅಪ್ಪು ಬಾಸ್​ ಈ ಅವಾರ್ಡ್​ ತೆಗೆದುಕೊಂಡಾಗ ನೀವು ಹುಟ್ಟೇ ಇರಲಿಲ್ಲ, ನಾಲಿಗೆ ಮೇಲೆ ಹಿಡಿತ ಇರಲಿ ಎಂದೆಲ್ಲಾ ಟೀಕಿಸುತ್ತಿದ್ದಾರೆ.

66
ನಟಿಯ ಪರವಾಗಿ ಬ್ಯಾಟಿಂಗ್​

ಆದರೆ ಕೆಲವರು ಮಾತ್ರ, ನಟಿ ಎಲ್ಲಿಯೂ ಪುನೀತ್​ ಅವರ ಹೆಸರನ್ನು ತೆಗೆದುಕೊಂಡಿಲ್ಲ. ಯಾಕೆ ಸುಮ್ಮನೇ ಹಾಗೆ ಮಾತನಾಡುತ್ತೀರಿ ಎಂದು ಪ್ರಶ್ನಿಸುತ್ತಿದ್ದಾರೆ. ವಿಷ್ಣುವರ್ಧನ್​ ಸೇರಿದಂತೆ ಕೆಲವು ನಟರಿಗೂ ಹೀಗೆಯೇ ಆಗಿದೆ. ಅದನ್ನೇ ನಟಿ ಹೇಳಿದ್ದಾರೆ. ಸುಮ್ಮನೇ ಯಾಕೆ ಇದನ್ನೇ ದೊಡ್ಡದು ಮಾಡುತ್ತೀರಿ ಎಂದು ನಟಿಯ ಪರವಾಗಿ ಬ್ಯಾಟ್​ ಬೀಸಿದ್ದಾರೆ ಅವರ ಫ್ಯಾನ್ಸ್​

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories