ಈ ಕೊರೋನಾ ಕಾಲಘಟ್ಟದಲ್ಲಿ ಓಟಿಟಿ ಪ್ಲಾಟ್‌ಾರ್ಮ್‌ಗಳನ್ನು ನೋಡುತ್ತಿರುವವರ ಸಂಖ್ಯೆ ಏಕ್‌ದಮ್ ಜಾಸ್ತಿಯಾಗಿದೆ ಎಂದು ಒಂದು ವರದಿ ಹೇಳುತ್ತಿದೆ. ಅದಕ್ಕೆ ತಕ್ಕಂತೆ ಅಮೆಜಾನ್ ಪ್ರೈಮ್ ಮಕ್ಕಳ ಸಿನಿಮಾ, ಅನಿಮೇಷನ್ ಇತ್ಯಾದಿಗಳನ್ನು ಉಚಿತವಾಗಿ ನೀಡುವ ನಿರ್‘ಾರ ಮಾಡಿದೆ. ಎಲ್ಲಾ ಓಟಿಟಿ ಪ್ಲಾಟ್‌ಾರ್ಮ್‌ಗಳಿಗೂ ‘ಾರಿ ಬೇಡಿಕೆ ಬಂದಿದೆ. ವಾರಕ್ಕೆ ಒಂದು ಸಿನಿಮಾ ನೋಡದ ಮಂದಿ ಈಗ ದಿನಕ್ಕೆ ಎರಡೆರಡು ಸಿನಿಮಾ ನೋಡುವಂತಹ ಪರಿಸ್ಥಿತಿಯನ್ನು ಕೊರೋನಾ ತಂದಿಟ್ಟಿದೆ. ಇಂಥಾ ಹೊತ್ತಲ್ಲಿ ಮನೆಯಲ್ಲೇ ಕುಳಿತು ಯಾವ ಕನ್ನಡ ಸಿನಿಮಾ ನೋಡಬಹುದು ಎಂಬ ಪಟ್ಟಿ ಇಲ್ಲಿದೆ. ಇದಲ್ಲದೆಯೂ ಅನೇಕ ಸಿನಿಮಾಗಳಿವೆ. ಹುಡುಕುತ್ತಾ ಹೋದಂತೆ ಬೆರಳ ತುದಿಯಲ್ಲಿ ಸಿಕ್ಕಿಬಿಡುತ್ತದೆ.