Hamsalekha Direction: ಸಿನಿಮಾ ನಿರ್ದೇಶನಕ್ಕಿಳಿದ ಹಂಸಲೇಖ; ಸಿಎಂ ಮನೆ ಕೃಷ್ಣದಲ್ಲೇ ಮುಹೂರ್ತ! ಸಿದ್ದರಾಮಯ್ಯರಿಂದ ಚಾಲನೆ!

Published : Jun 20, 2025, 05:50 PM ISTUpdated : Jun 20, 2025, 05:53 PM IST

ಕನ್ನಡ ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕರಾಗಿ ಬಹಳಷ್ಟು ಪ್ರಸಿದ್ಧರಾಗಿರುವ ಹಂಸಲೇಖಾ ಅವರು ಇದೀಗ ಸಿನಿಮಾ ನಿರ್ದೇಶನಕ್ಕೆ ಸಜ್ಜಾಗಿದ್ದಾರೆ. 

PREV
15

ಚಿತ್ರ ಸಾಹಿತಿ ಆಗಿ ಸಿನಿಮಾ ರಂಗಕ್ಕೆ ಬಂದಿರುವ ಹಂಸಲೇಖ ಅವರು ಇದಕ್ಕೂ ಮೊದಲು ಮಗ ಅಲಂಕಾರ್ ಅವರನ್ನು ನಟರನ್ನಾಗಿ ಮಾಡಲು ಪ್ರಯತ್ನ ಪಟ್ಟಿದ್ದರು. 'ಸುಗ್ಗಿ' ಹೆಸರಿನ ಚಿತ್ರವನ್ನು ನಿರ್ಮಾಣ ಮಾಡಿ ಮಗನನ್ನು ಹೀರೋ ಮಾಡಲು ಟ್ರೈ ಮಾಡಿದ್ದ ಹಂಸಲೇಖಾ ಅವರು ಆ ಚಿತ್ರವನ್ನು ಕಂಪ್ಲೀಟ್ ಮಾಡಿ ಬಿಡುಗಡೆ ಮಾಡಲಿಲ್ಲ.

25

ಈಗ ಸಂಗೀತ ನಿರ್ದೇಶಕರಾಗಿ ಹೆಸರು ಮಾಡಿದ್ರು. 37 ವರ್ಷದಿಂದ ಸಂಗೀತ ನಿರ್ದೇಶಕರಾಗಿರೋ ಹಂಸಲೇಖ, ಈಗ ಬಡ್ತಿ ಪಡೆದಿದ್ದಾರೆ. ಗೀತ ಸಾಹಿತಿ, ಸಂಭಾಷಣೆಕಾರ, ಸಂಗೀತಗಾರನಾಗಿಯೂ ಗುರುತಿಸಿಕೊಂಡಿದ್ದು 500 ಆಲ್ಬಮ್‌ಗೆ ಹಾಡು ಬರೆದಿದ್ದಾರೆ. ರವಿಚಂದ್ರನ್‌, ಹಂಸಲೇಖ ಕಾಂಬಿನೇಶನ್‌ ಸಿನಿಮಾಗಳು ಸೂಪರ್‌ ಹಿಟ್‌ ಆಗಿವೆ. 

35

ನಿರ್ದೇಶನ ಮಾಡೋಕೆ ಅಂತ ಸಿನಿಮಾ ರಂಗಕ್ಕೆ ಬಂದವರು ಹಂಸಲೇಖ, ಆಮೇಲೆ ಸಂಗೀತ ನಿರ್ದೇಶಕರಾದರು. ಈ ಹಿಂದೆ ರಾಹುಚಂದ್ರ ಸಿನಿಮಾ ನಿರ್ದೇಶನ ಮಾಡಿದ ನಂತರ ಸುಗ್ಗಿ ಅನ್ನೋ ಸಿನಿಮಾ ಅನೌನ್ಸ್ ಮಾಡಿದ್ದರು.

45

ಬಳಿಕ ಶಾಕುಂತಲೆ ಅನ್ನೋ ಸಿನಿಮಾ ನಿರ್ದೇಶನ ಮಾಡೋದಾಗಿ ಹೇಳಿದ್ದರು. ಆದರೆ ಈ ಮೂರು ಸಿನಿಮಾ ತೆರೆ ಮೇಲೆ ಬರಲೇ ಇಲ್ಲ. ಈಗ ದಶಕಗಳ ಕನಸನ್ನ ಈಡೇರಿಸಿಕೊಳ್ಳಲು ಸಜ್ಜಾಗಿದ್ದಾರೆ. 23 ನೇ ತಾರೀಖು ಈ ಸಿನಿಮಾದ ಮಹೂರ್ತ ನಡೆಯಲಿದೆಯಂತೆ. ಸಿನಿಮಾದ ಟೈಟಲ್ Ok ಎಂದು ಇಡಲಾಗಿದೆ.

55

ಸಿಎಂ ಹೌಸ್ ಕೃಷ್ಣಾದಲ್ಲಿ ಸಿನಿಮಾ ಮಹೂರ್ತ ನಡೆಯಲಿದೆ.ಸಿನಿಮಾ ತಂಡದಲ್ಲಿ ಯಾರೆಲ್ಲಾ ಇರುತ್ತಾರೆ ಅನ್ನೋ ಬಗ್ಗೆ ಸದ್ಯದಲ್ಲೇ ಅನೌನ್ಸ್ ಮಾಡಲಿದ್ದಾರೆ. ಅಂದಹಾಗೆ ಹಂಸಲೇಖ ಸಿನಿಮಾಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.

Read more Photos on
click me!

Recommended Stories