ಮ್ಯಾರೇಜ್ ಫಿಕ್ಸ್ ಆಯ್ತು ಎನ್ನುತ್ತಾ ಗಣೇಶ್ ಜೊತೆಗಿನ ಫೋಟೋ ಹಂಚಿಕೊಂಡ ಶರಣ್ಯ ಶೆಟ್ಟಿ

Published : May 26, 2024, 03:58 PM IST

ಕಿರುತೆರೆ ಮತ್ತು ಸ್ಯಾಂಡಲ್ ವುಡ್ ನಲ್ಲಿ ಮಿಂಚಿದ ನಟಿ ಶರಣ್ಯ ಶೆಟ್ಟಿ ನಟ ಗಣೇಶ್ ಜೊತೆಗಿನ ಫೋಟೋ ಶೇರ್ ಮಾಡಿ ಮ್ಯಾರೇಜ್ ಫಿಕ್ಸ್ ಎಂದಿದ್ದಾರೆ.   

PREV
17
ಮ್ಯಾರೇಜ್ ಫಿಕ್ಸ್ ಆಯ್ತು ಎನ್ನುತ್ತಾ ಗಣೇಶ್ ಜೊತೆಗಿನ ಫೋಟೋ ಹಂಚಿಕೊಂಡ ಶರಣ್ಯ ಶೆಟ್ಟಿ

ಗಟ್ಟಿಮೇಳ (Gattimela) ಸೀರಿಯಲ್ ನಲ್ಲಿ ಸಾಹಿತ್ಯ ಆಗಿ ನಟಿಸುವ ಮೂಲಕ ಜನಪ್ರಿಯತೆ ಪಡೆದುಕೊಂಡ ನಟಿ ಶರಣ್ಯ ಶೆಟ್ಟಿ, ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಸೋಶಿಯಲ್ ಮಿಡಿಯಾದಲ್ಲೂ ಇವರು ಸಿಕ್ಕಾಪಟ್ಟೆ ಫೇಮಸ್. 
 

27

ಸೋಶಿಯಲ್ ಮೀಡಿಯಾದ ಟ್ರೋಲ್ ಪೇಜ್ ಗಳು ಸದಾ ಶರಣ್ಯ ಶೆಟ್ಟಿಯವರ (Sharanya Shetty) ಅಂದ ಚೆಂದವನ್ನೇ ಗುಣಗಾನ ಮಾಡುತ್ತಿರುತ್ತವೆ. ಅಲ್ಲದೇ ಶರಣ್ಯ ಶೆಟ್ಟಿಯವರಿಗೆ ಸಿಕ್ಕಾಪಟ್ಟೆ ಫ್ಯಾನ್ಸ್ ಕೂಡ ಇದ್ದಾರೆ. ಹಲವು ಯುವಕರ ಕ್ರಶ್ ಕೂಡ ಹೌದು ಈ ಮಂಗಳೂರು ಬೆಡಗಿ. 
 

37

ಈ ಹಿಂದೆ ರಕ್ಷಿತ್ ಶೆಟ್ಟಿಯವರನ್ನು (Rakshith Shetty) ಮದುವೆಯಾಗೋದಾಗಿ ಸುದ್ದಿಯಾಗಿದ್ದ ನಟಿ ಇದೀಗಾ ತಾವೇ ಮದುವೆ ಫೋಟೋ ಹಂಚಿಕೊಂಡಿದ್ದಾರೆ. ಅದು ಸಹ ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ. ಫೋಟೋ ಹಂಚಿಕೊಂಡು, ಮೈ ಮ್ಯಾರೇಜ್ ಫಿಕ್ಸ್, ರೆಡಿ ಟು ಟೇಕ್ ರಿಸ್ಕ್ ಎಂದು ಬರೆದುಕೊಂಡಿದ್ದಾರೆ. 
 

47

ಶರಣ್ಯ ಶೆಟ್ಟಿ ಗೋಲ್ಡನ್ ಬಣ್ಣದ ಸೀರೆಯಲ್ಲಿ ಮಿಂಚುತ್ತಿದ್ದರೆ, ಗಣೇಶ್ (Golden Star Ganesh) ಪಂಚೆ, ಶರ್ಟ್ ಧರಿಸಿ ಮದುಮಗನಂತೆ ಕಾಣಿಸುತ್ತಿದ್ದಾರೆ. ಇದೆಲ್ಲವೂ ಕೃಷ್ಣಂ ಪ್ರಣಯ ಸಖಿ ಸಿನಿಮಾದ ಶೂಟಿಂಗ್ ಫೋಟೋ ಆಗಿದೆ. 
 

57

ಶರಣ್ಯ ಫೋಟೋ ನೋಡಿ ಹಲವು ಜನ ಕಾಮೆಂಟ್ ಮಾಡಿದ್ದು, ಇರಿ ಶಿಲ್ಪಾ ಮೇಡಂ ಗೆ ಹೇಳುತ್ತೀನಿ ಎಂದಿದ್ದಾರೆ. ಮತ್ತೊಬ್ಬರು ಹೀಗೆ ಹೆಚ್ಚು ಹೆಚ್ಚು ಕನ್ನಡ ಸಿನಿಮಾಗಳಲ್ಲಿ, ಕನ್ನಡ ನಟಿಯರಿಗೆ ಅವಕಾಶ ಸಿಗಬೇಕು ಎಂದು ಹೇಳಿಕೊಂಡಿದ್ದಾರೆ. 
 

67

ಕಿರುತೆರೆಯಿಂದ ಜರ್ನಿ ಆರಂಭಿಸಿದ ಶರಣ್ಯ ಶೆಟ್ಟಿ 1980 ಸಿನಿಮಾ ಮೂಲಕ ಹಿರಿತೆರೆಗೆ ಕಾಲಿಟ್ಟಿದ್ದು, ಆ ಸಿನಿಮಾಕ್ಕಾಗಿ ಸೈಮಾ ಬೆಸ್ಟ್ ಡೆಬ್ಯೂಡಂಟ್ ಅವಾರ್ಡ್ ಕೂಡ ಪಡೆದಿದ್ದರು. ನಂತರ ಅಭಿಷೇಕ್ ದಾಸ್ ಜೊತೆ ನಗುವಿನ ಹೂಗಳ ಮೇಲೆ ಎನ್ನುವ ಸಿನಿಮಾದಲ್ಲೂ ನಟಿಸಿದ್ದರು. 
 

77

ಇದೀಗ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಮಾಳವಿಕ ನಾಯರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವ ಕೃಷ್ಣಂ ಪ್ರಣಯ ಸಖಿ (Krishnam Pranaya Sakhi) ಸಿನಿಮಾದಲ್ಲೂ ಸಹ ನಟಿಸುತ್ತಿದ್ದಾರೆ. ಸಿನಿಮಾ ಮುಂದಿನ ತಿಂಗಳು ರಿಲೀಸ್ ಆಗಲಿದೆ. ಸಿನಿಮಾದ ಮೈ ಮ್ಯಾರೇಜ್ ಫಿಕ್ಸ್ ಹಾಡು ರಿಲೀಸ್ ಆಗಿದ್ದು, ಸದ್ದು ಮಾಡುತ್ತಿದೆ. 
 

Read more Photos on
click me!

Recommended Stories