ಕನ್ನಡ ಚಿತ್ರರಂಗದ ಕ್ಯೂಟ್ ಹುಡುಗಿ ಐಶಾನಿ ಶೆಟ್ಟಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದ್ದಾರೆ. ನಟನೆಯಿಂದ ದೂರ ಉಳಿಯುತ್ತಾರ ಅನ್ನೋ ಪ್ರಶ್ನೆಗೆ ಇಲ್ಲಿದೆ ಉತ್ತರ.....
'ಪ್ರತಿಯೊಬ್ಬ ಕಲಾವಿದನಿಗೂ ತಾನು ಬೇರೆ ಬೇರೆ ಪಾತ್ರಗಳಲ್ಲಿ ನಟಿಸಬೇಕೆಂಬ ಆಸೆ ಇರುತ್ತದೆ. ಅಂತೆಯೇ ನನಗೂ ಕೂಡ ವಿಭಿನ್ನ ಪಾತ್ರಗಳಲ್ಲಿ ನಟಿಸುವ ಆಸೆ ಇದೆ.
ನನಗೆ ಒಂದೇ ರೀತಿಯ ಪಾತ್ರಗಳ ಆಫರ್ ಮಾಡಲು ಆರಂಭಿಸಿದ್ದಾರೆ ಹೀಗಾಗಿ ಅಯ್ಕೆ ಮಾಡುವುದು ಕಷ್ಟವಾಗಿದೆ. ಹಾಗಾಗಿ ನಿರ್ದೇಶನದ ಕಡೆ ಮುಖ ಮಾಡಿದ್ದೀನಿ
ನಮ್ಮೂರಿನ ಕಥೆಯನ್ನು ಹೇಳಿ ವಿಭಿನ್ನ ಪಾತ್ರಗಳನ್ನು ಸೃಷ್ಟಿಯ ಹೊಸ ಯೋಜನೆಯನ್ನು ಹಾಕಿಕೊಂಡಿದ್ದೇನೆ. ನಿರ್ದೇಶನ ಮಾಡಬೇಕು ಎಂದು ಮೊದಲಿನಿಂದಲೇ ಇತ್ತು.
ಇತ್ತೀಚಿಗೆ ಒಂದಷ್ಟು ಹಿತೈಷಿಗಳು ಈ ವಿಚಾರವಾಗಿ ತುಂಬಾ ಉತ್ತೇಜನ ನೀಡಿದ್ದಾರೆ. ಹಾಗಾಗಿ ಈ ಕೆಲಸಕ್ಕೆ ಕೈ ಹಾಕಿದ್ದೇನೆ ಎಂದು ಐಶಾನಿ ಶೆಟ್ಟಿ ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.
'ನನಗೆ ನಮ್ಮೂರಿನ ಕತೆ, ಜನರನ್ನು ಪಾತ್ರಗಳ ಮೂಲಕ ತೆರೆ ಮೇಲೆ ತರುವ ಆಸೆ ಇದೆ. ಈ ನನ್ನ ಹೊಸ ಸಿನಿಮಾ ಕಥೆ ಫೈನಲ್ ಡ್ರಾಫ್ಟ್ ರೆಡಿಯಾಗಿದೆ'
'ನಾನೇ ಇದರಲ್ಲಿ ಮುಖ್ಯ ಪಾತ್ರಧಾರಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಕಥೆಗೆ ನಾಯಕ ಅಥವಾ ನಾಯಕಿ ಇಲ್ಲ. ಕಥೆಯೇ ಮುಖ್ಯ ವಸ್ತು' ಎಂದಿದ್ದಾರೆ ಐಶಾನಿ.
Vaishnavi Chandrashekar