ಪರಿಸ್ಥಿತಿ ಎಷ್ಟೇ ಕೆಟ್ಟದಾಗಿರಲಿ ಗಟ್ಟಿಯಾಗಿರು ಎಂದಿದ್ದಾಳೆ ಅಮ್ಮ; ಪವಿತ್ರ ಗೌಡ ಪುತ್ರಿ ಭಾವುಕ ಪೋಸ್ಟ್‌

First Published | Aug 13, 2024, 9:40 AM IST

ತಾಯಿಯನ್ನು ಅಪ್ಪಿಕೊಂಡಿರುವ ಫೋಟೋ ಅಪ್ಲೋಡ್ ಮಾಡಿದ ಖುಷಿ. ಕಾಮೆಂಟ್ ಸೆಕ್ಷನ್ ಆಫ್‌ ಮಾಡಿದ ಪುಟ್ಟಾಣಿ.....
 

 ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೇಲೆ ನಟಿ ಪವಿತ್ರಾ ಗೌಡ, ದರ್ಶನ್ ಸೇರಿಂದತೆ 17  ಮಂದಿ ಜೈಲು ವಾಸದಲ್ಲಿದ್ದಾರೆ. 

 ಸುಮಾರು 55ದಕ್ಕೂ ಹೆಚ್ಚು ದಿನಗಳಿಂದ ಪರಪ್ಪನ ಅಗ್ರಹಾರದಲ್ಲಿ ಇರುವ ಪವಿತ್ರಾ ಗೌಡರನ್ನು ಆಗಾಗ ಪುತ್ರಿ ನೋಡಲು ಅಜ್ಜಿ ಜೊತೆ ಆಗಮಿಸುತ್ತಾರೆ. 

Tap to resize

ಕಾಶ್ಮೀರ ಪ್ರವಾಸ ಮಾಡಿದಾಗ ತಾಯಿಯನ್ನು ತಬ್ಬಿಕೊಂಡಿರುವ ಫೋಟೋ ಅಪ್ಲೋಡ್ ಮಾಡಿ ಬರೆದಿರುವ ಸಾಲುಗಳು ವೈರಲ್ ಆಗುತ್ತಿದೆ. ಕಾಮೆಂಟ್ಸ್ ಆಫ್ ಮಾಡಿದ್ದಾರೆ.

ಆಕೆ ನನ್ನ ಮೋಟಿವೇಷನ್, ಪರಿಸ್ಥಿತಿ ಹೇಗೆ ಇರಲಿ ಗಟ್ಟಿಯಾಗಿ ನಿಲ್ಲಬೇಕು ಅನ್ನೋದನ್ನು ಕಲಿಸಿಕೊಟ್ಟಿದ್ದು ನೀನು, ಆಕೆ ಸದಾ ಓಪನ್ ಆಗಿ ಯೋಜಿಸುತ್ತಿದ್ದಳು ಹಾಗೂ ಪ್ರತಿಯೊಂದರಲ್ಲಿ ನನ್ನನ್ನು ಸಪೋರ್ಟ್ ಮಾಡುತ್ತಿದ್ದಳು ಎಂದು ಖುಷಿ ಬರೆದುಕೊಂಡಿದ್ದಾರೆ.

ಬಿಲಿಯನ್‌ನಲ್ಲಿ ಆಕೆ ಒಬ್ಬಳು. ನಾನು ಜೀವನದಲ್ಲಿ ಎಂದೂ ಆಕೆಯಂತೆ ವ್ಯಕ್ತಿ ಸಿಗುವುದಿಲ್ಲ. ನಿಜಕ್ಕೂ ಆಕೆಯನ್ನು ತಾಯಿಯಾಗಿ ಪಡೆಯುವುದಕ್ಕೆ ನಾನು ಪುಣ್ಯ ಮಾಡಿದ್ದೆ. ಐ ಲವ್ ಯು ಸೋ ಮಚ್ ಮಮ್ಮಾ ಎಂದಿದ್ದಾಳೆ ಖುಷಿ.

ಪವಿತ್ರ ಗೌಡ ಸ್ಥಾಪಿಸಿರುವ ಫ್ಯಾಷನ್ ಬೋಟಿಕ್ ರೆಡ್ ಕಾರ್ಪೆಟ್‌ 777 ಸ್ಟುಡಿಯೋವನ್ನು ಸದ್ಯ ಪುತ್ರಿ ಮ್ಯಾನೇಜ್ ಮಾಡುತ್ತಿದ್ದಾಳೆ. ಚಿಕ್ಕ ವಯಸ್ಸಿಗೆ ಅಂಗಡಿಯ ಜವಾಬ್ದಾರಿ ಹೊತ್ತಿದ್ದಾಳೆ. 

Latest Videos

click me!