‘ಕುಲದಲ್ಲಿ ಕೀಳ್ಯಾವುದೋ’ ಸಿನಿಮಾ ಮೂಲಕ ಕಿರುತೆರೆಯಿಂದ ಬೆಳ್ಳಿತೆರೆಗೆ ಹಾರಿದ ಮೌನ ಗುಡ್ಡಮನೆ

Published : Nov 13, 2024, 02:44 PM ISTUpdated : Nov 13, 2024, 03:22 PM IST

ರಾಮಾಚಾರಿ ಸೀರಿಯಲ್ ಮೂಲಕ ಮನೆಮಾತಾಗಿರುವ ಬೆಡಗಿ ಚಾರಿ ಆಲಿಯಾಸ್ ಮೌನ ಗುಡ್ಡೆಮನೆ ಇದೀಗ ಚಂದನವನದಲ್ಲಿ ಮಿಂಚೋದಕ್ಕೆ ರೆಡಿ ಆಗಿದ್ದಾರೆ.   

PREV
17
‘ಕುಲದಲ್ಲಿ ಕೀಳ್ಯಾವುದೋ’ ಸಿನಿಮಾ ಮೂಲಕ ಕಿರುತೆರೆಯಿಂದ ಬೆಳ್ಳಿತೆರೆಗೆ ಹಾರಿದ ಮೌನ ಗುಡ್ಡಮನೆ

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ರಾಮಾಚಾರಿಯಲ್ಲಿ (Ramachari serial) ಚಾರು ಪಾತ್ರದ ಮೂಲಕ ಜನಮನ ಗೆದ್ದ ನಟಿ ಮೌನ ಗುಡ್ಡೆಮನೆ, ಸೊಕ್ಕಿನ ಹುಡುಗಿಯಾಗಿ ಎಂಟ್ರಿ ಕೊಟ್ಟು, ನಾರಾಯಣಾಚಾರ್ಯರ ಮನೆಯವರನ್ನು ಕಾಪಾಡಲು ಸದಾ ಸಿದ್ಧವಾಗಿರುವ ಸೊಸೆಯಾಗುವವರೆಗೂ ವಿಭಿನ್ನ ಅಭಿನಯದ ಮೂಲಕ ಮೌನ ವೀಕ್ಷಕರ ಮನಗೆದ್ದಿದ್ದಾರೆ. 
 

27

ಕಿರುತೆರೆಯಲ್ಲಿ ಈಗಾಗಲೇ ಮೋಡಿ ಮಾಡಿರುವ ಬೆಡಗಿ ಇದೀಗ ಬೆಳ್ಳಿತೆರೆಗೆ ಹಾರಿದ್ದಾರೆ. ಹೌದು, ಮೌನ ಗುಡ್ಡೆಮನೆ (Mouna Guddemane) ಹೊಸ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ‘ಕುಲದಲ್ಲಿ ಕೀಳ್ಯಾವುದೋ’ ಸಿನಿಮಾ ಮೂಲಕ ಮೌನ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡೋದಕ್ಕೆ ರೆಡಿಯಾಗಿದ್ದಾರೆ. 
 

37

ತಮ್ಮ ಮೊದಲ ಸಿನಿಮಾ 'ಕುಲದಲ್ಲಿ ಕೀಳ್ಯಾವುದೋ’ (Kuladalli Kilyavudo) ಪೋಸ್ಟರ್ ನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಮೌನ, ನನ್ನ ಕನಸುಗಳು ನಿಜವಾಗಲು ನಿಮ್ಮ ಆಶೀರ್ವಾದ ಮತ್ತು ಪ್ರೀತಿ ಬೇಕು. ನನ್ನ ಮೊದಲ ಸಿನಿ ಪ್ರಯಾಣಕ್ಕೆ ಬೆಂಬಲ ನೀಡಿ ಎಂದು ಬರೆದುಕೊಂಡಿದ್ದಾರೆ. 

47

ಯೋಗರಾಜ್ ಸಿನಿಮಾಸ್ ಅರ್ಪಿಸುವ, ಪರ್ಲ್ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಸಂತೋಷ್ ಕುಮಾರ್ ಎ. ಕೆ & ವಿದ್ಯಾ ಸಿನಿಮಾ ನಿರ್ಮಾಣ ಮಡುತ್ತಿದ್ದು,  ಕೆ.ರಾಮನಾರಾಯಣ್ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರ್ ಮನು ನಾಯಕನಾಗಿ ನಟಿಸುತ್ತಿದ್ದಾರೆ. 
 

57

ಯೋಗರಾಜ್ ಭಟ್ ಹಾಗೂ ಇಸ್ಲಾಮುದ್ದೀನ್ ಅವರು ಚಿತ್ರಕ್ಕೆ ಕಥೆ ಬರೆದಿದ್ದು, ಗೀತರಚನೆಕಾರರಾಗಿ, ನಿರ್ದೇಶಕರಾಗಿ ಜನಪ್ರಿಯರಾಗಿರುವ ಕೆ.ರಾಮನಾರಾಯಣ್ ನಿರ್ದೇಶನ ಮಾಡುತ್ತಿದ್ದಾರೆ. ಯೋಗರಾಜ್ ಭಟ್ ಹಾಗೂ ಜಯಂತ್ ಕಾಯ್ಕಿಣಿ ಅವರು ಚಿತ್ರದ ಹಾಡುಗಳನ್ನು ಬರೆದಿದ್ದು ಮನೋಮೂರ್ತಿ ಸಂಗೀತ ನೀಡುತ್ತಿದ್ದಾರೆ.
 

67

ಸದ್ಯ  ಮೌನ ಗುಡ್ಡೆಮನೆ ರಾಮಾಚಾರಿ ಧಾರಾವಾಹಿಯಲ್ಲಿ ಸಹ ಬ್ಯುಸಿಯಾಗಿದ್ದಾರೆ. ಸಿನಿಮಾ ಶೂಟಿಂಗ್ ಜೊತೆ ಜೊತೆಗೆ ಸೀರಿಯಲ್ ಶೂಟಿಂಗ್ ಕೂಡ ಮಾಡುತ್ತಿದ್ದಾರೆ. ಸಿನಿಮಾ ಬಳಿಕ ನಟಿ, ಸೀರಿಯಲ್ ನಲ್ಲಿ ಮುಂದುವರೆಯುವರೇ ಎನ್ನುವ ಬಗ್ಗೆ ಮಾಹಿತಿ ಇಲ್ಲ. 
 

77

ಇನ್ನು ಮೌನ ತಮ್ಮ ಸೋಶಿಯಲ್ ಮೀಡೀಯಾದಲ್ಲಿ ಪೋಸ್ಟರ್ ಹಂಚಿಕೊಳ್ಳುತ್ತಿದ್ದಂತೆ, ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಮೊದಲ ಚಿತ್ರಕ್ಕೆ ಅಭಿಮಾನಿಗಳು ಹಾಗೂ ಸ್ನೇಹಿತರು ಶುಭ ಕೋರಿದ್ದಾರೆ. ನಿಮ್ಮನ್ನು ಆದಷ್ಟು ಬೇಗ ಬಿಗ್ ಸ್ಕ್ರೀನ್ ನಲ್ಲಿ ನೋಡೋದಕ್ಕೆ ಕಾಯ್ತ ಇದ್ದೀವಿ ಎಂದು ಸಹ ಹೇಳಿದ್ದಾರೆ. 

Read more Photos on
click me!

Recommended Stories