ನಟಿ ಮೇಘನಾ ರಾಜ್ ಸದ್ಯ ಮಗನ ಆರೈಕೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಜೊತೆಗೆ ಚಿತ್ರದಲ್ಲಿಯೂ ಆ್ಯಕ್ಟೀವ್ ಆಗಿದ್ದಾರೆ. ಮಗ ರಾಯನ್ ಸರ್ಜಾ ಹೊಟ್ಟೆಯಲ್ಲಿ ಇರುವಾಗಲೇ ಮೇಘನಾ ಅವರು ಪತಿ ಚಿರು ಸರ್ಜಾ ಅವರನ್ನು ಕಳೆದುಕೊಂಡಿರುವುದು ಎಲ್ಲರಿಗೂ ತಿಳಿದದ್ದೇ.
28
ರಾಯನ್ ಪಾಲನೆಯಲ್ಲಿ ಮೇಘನಾ ರಾಜ್
ಅವರು ಅಗಲಿದ ಮೇಲೆ ಕುಟುಂಬಕ್ಕೆ ಬೆಳಕಾಗಿ ಬಂದಿದ್ದು ರಾಯನ್. ಮೇಘನಾ ಹೊಟ್ಟೆಯಲ್ಲಿ ಚಿರು ಹುಟ್ಟಿ ಬರಬೇಕು ಎಂಬ ಅಸಂಖ್ಯ ಅಭಿಮಾನಿಗಳ ಆಸೆ ಈಡೇರಿತ್ತು. 2020ರ ಜೂನ್ನಲ್ಲಿ ಚಿರು ಅವರು ನಿಧನರಾದರು. ಅಂದಿನಿಂದ ಇಂದಿನವರೆಗೂ ಮೇಘನಾ ರಾಜ್ ಇನ್ನೊಂದು ಮದುವೆಯಾಗಬೇಕು ಎನ್ನುವುದು ಅವರ ಬಹುತೇಕ ಅಭಿಮಾನಿಗಳ ಮಾತು.
38
ಚಿರು ನಿಧನರಾಗಿ ಐದು ವರ್ಷ
ಚಿರು ನಿಧನರಾಗಿ ಐದು ವರ್ಷ ಕಳೆದರೂ, ಮೇಘನಾ ಇದುವರೆಗೆ ತಮ್ಮ ಮತ್ತೊಂದು ಮದುವೆಯ ಬಗ್ಗೆ ಏನೂ ಹೇಳಿರಲಿಲ್ಲ. ಇವರ ಮದುವೆ ಕುರಿತು ಹರಡಿದ್ದ ಗಾಸಿಪ್ಗಳಿಗೆ ನೋವಿನಿಂದ ನಟಿ ಉತ್ತರ ಕೊಟ್ಟಿದ್ದು ಇದೆ. ಆದರೆ ಇದೀಗ ಮೊದಲ ಬಾರಿಗೆ ಮೇಘನಾ ರಾಜ್ ಮತ್ತೊಂದು ಪ್ರೀತಿ ಕಂಡುಕೊಳ್ಳುವ ಬಗ್ಗೆ ಮನದಾಳದ ಮಾತನ್ನು ತೆರೆದಿಟ್ಟಿದ್ದಾರೆ.
ರೇಡಿಯೋಸಿಟಿ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ, ಮೇಘನಾ ಅವರು, ಮತ್ತೊಂದು ಪ್ರೀತಿ ಕಂಡುಕೊಳ್ಳುವ ಬಗ್ಗೆ ಸದ್ಯ ಏನೂ ಮನಸ್ಸಿನಲ್ಲಿ ಇಲ್ಲ. ಬಹುಶಃ ಅದು ಮುಂದೆ ಬಂದರೂ ಬರಬಹುದು ಎಂದಿದ್ದಾರೆ.
58
ಮದುವೆಯ ಬಗ್ಗೆ ನಟಿ ಮೇಘನಾ ರಾಜ್ ಹೇಳಿದ್ದೇನು?
ಈ ಬಗ್ಗೆ ತುಂಬಾ ಮಂದಿ ನನ್ನ ಬಳಿ ಮಾತನಾಡುತ್ತಾರೆ. ಮತ್ತೊಂದು ಮದುವೆಯ ವಿಷಯದ ಬಗ್ಗೆ ಪ್ರಸ್ತಾಪ ಮಾಡುತ್ತಾರೆ. ಆದರೆ ಸದ್ಯ ಇನ್ನೊಂದು ಲವ್ ಬಗ್ಗೆ ನಾನು ಮಾನಸಿಕವಾಗಿ ರೆಡಿಯಾಗಿಲ್ಲ. ಹಾಗೆಂದು ಅದು ಆಗುವುದೇ ಇಲ್ಲವೆಂದೇನಲ್ಲ. ಮುಂದೊಮ್ಮೆ ಏನಾದರೂ ಈ ರೀತಿ ಚಾನ್ಸ್ ಬಂದರೆ, ಆ ಕ್ಷಣದಲ್ಲಿ ಏನು ನಿರ್ಧಾರ ಮಾಡಬೇಕು ಎನ್ನುವುದನ್ನು ಯೋಚನೆ ಮಾಡುತ್ತೇನೆ ಎನ್ನುವ ಮೂಲಕ, ಇನ್ನೊಂದು ಮದುವೆಯಾಗುವ ಸೂಚನೆ ಕೊಟ್ಟಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಪತಿಯನ್ನು ಕಳೆದುಕೊಂಡಿರುವ ಮೇಘನಾ ಅವರ ಬಾಳಲ್ಲಿ ಮತ್ತೊಮ್ಮೆ ಪ್ರೀತಿ ಮೂಡಿಬರಲಿ ಎನ್ನುವುದು ಅವರ ಅಭಿಮಾನಿಗಳ ಆಶಯ.
68
ಮದುವೆಯ ಬಗ್ಗೆ ಹಿಂದೆಯೂ ಮಾತನಾಡಿದ್ದ ನಟಿ
ಈ ಹಿಂದೆ ಕೂಡ ಮದುವೆಯ ಕುರಿತು ಬಂದ ಗಾಳಿ ಸುದ್ದಿಗೆ ನೊಂದುಕೊಂಡು ಮಾತನಾಡಿದ್ದ ನಟಿ, “ನನ್ನ ರಾಯನ್‌ಗೆ ಅಪ್ಪ ಇದ್ದಾರೆ, ರಾಯನ್‌ಗೆ ಚಿರಂಜೀವಿ ಸರ್ಜಾನೇ ಅಪ್ಪ. ನನಗೆ ಎರಡನೇ ಮದುವೆ ಬಗ್ಗೆ ಯೋಚನೆ ಬಂದಿಲ್ಲ ಅಂತ ಹೇಳಿದ್ದರೆ ಅದು ಸುಳ್ಳು ಆಗುವುದು. ನನ್ನ ಮಗನನ್ನು ನೋಡಿದಾಗ, ಅವನು ಪ್ರತೀ ದಿನವೂ ಅಪ್ಪನ ಬಗ್ಗೆ ಮಾತನಾಡುತ್ತಾನೆ.
78
ಚಿರು ನೆನೆಪಿಸಿಕೊಂಡ ಮೇಘನಾ ರಾಜ್
ಅಪ್ಪ ಅಂದ್ರೆ ಚಿರು ಅಂತ ಅವನಿಗೆ ಗೊತ್ತಿದೆ. ಚಿರು ಹಾಡುಗಳನ್ನು ನೋಡುತ್ತಾನೆ. ಆದರೆ ಫಿಸಿಕಲ್ ಆಗಿ ಚಿರಂಜೀವಿ ಸರ್ಜಾರನ್ನು, ಮಗ ನೋಡಿಲ್ಲ. ಆದ್ರೆ ಅಪ್ಪ ಎನ್ನೋರು ಇದ್ದಾರೆ ಅನ್ನೋದು ಅವನಿಗೆ ಗೊತ್ತಿದೆ. ಆದರೆ ರಾಯನ್‌ಗೆ ಫಿಸಿಕಲ್ ಆಗಿ ತಂದೆ ಫಿಗರ್ ಇದ್ದರೆ ಚೆನ್ನ ಅಂತ ಕೆಲ ಬಾರಿ ಅನಿಸುತ್ತದೆ” ಎಂದಿದ್ದರು.
88
ಮದುವೆಯ ಬಗ್ಗೆ ಮಾತನಾಡಿದ್ದ ಅಪ್ಪ-ಟಮ್ಮ
“ನನ್ನ ಜೀವನಕ್ಕೆ ಸಂಗಾತಿಯಾಗಿ ಯಾರು ಬರಬಹುದು ಅಂತ ಐಡಿಯಾ ಇಲ್ಲ. ನನ್ನ ಲೈಫ್‌ನಲ್ಲಿ ಯಾರು ಬರಬೇಕು ಅಂತ, ಯಾರು ಬಂದ್ರೆ ಸರಿ ಅಂತ ಚಿರುಗೆ ಅನಿಸಿದ್ರೆ, ಅದು ನನ್ನ ಜೀವನಕ್ಕೆ ಒಳ್ಳೆಯ ನಿರ್ಧಾರ ಅಂತ ಅನಿಸಿದ್ರೆ ಅದು ನಿಜವಾಗಿಯೂ ಆಗುತ್ತದೆ” ಎಂದು ಅವರು ಹೇಳಿದ್ದರು. ಅಂದಹಾಗೆ ನಟಿ ಪ್ರಮೀಳಾ ಜೋಶಾಯ್, ಸುಂದರ್ ರಾಜ್ ದಂಪತಿ ಕೂಡ ಮಗಳಿಗೆ ಇನ್ನೊಂದು ಮದುವೆ ಆಗಬೇಕು, ಅವಳಿಗೆ ಸಂಗಾತಿ ಬೇಕು ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.