Shubhamangala ಟ್ರೇಲರ್‌ ಬಿಡುಗಡೆ; ಮದುವೆ ಮನೆಯ ಮನರಂಜನೆ ಕಥೆಗಳು!

Published : Sep 21, 2022, 03:01 PM IST

ಮದುವೆ ಮನೆಯ ಮನರಂಜನೆ ಕತೆಗಳನ್ನು ಹೇಳುವ ಚಿತ್ರ ಶುಭಮಂಗಳ ಎಂದಿದ್ದಾರೆ ಮೇಘನಾ ಗಾಂವ್ಕರ್.   

PREV
16
Shubhamangala ಟ್ರೇಲರ್‌ ಬಿಡುಗಡೆ; ಮದುವೆ ಮನೆಯ ಮನರಂಜನೆ ಕಥೆಗಳು!
Shubhamangal

ಸಂತೋಷ್‌ ಗೋಪಾಲ್‌ ನಿರ್ದೇಶನದ, ಮೇಘನಾ ಗಾಂವ್ಕರ್‌, ಹಿತಾ ಚಂದ್ರಶೇಖರ್‌, ರಾಕೇಶ್‌ ಮಯ್ಯ, ದೀಪ್ತಿ ನಾಗೇಂದ್ರ, ಅರುಣ್‌ ಬಾಲಾಜಿ ನಟಿಸಿರುವ ‘ಶುಭಮಂಗಳ’ ಚಿತ್ರದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆ ಆಯಿತು. 

26

ಅಕ್ಟೋಬರ್‌ 14ರಂದು ತೆರೆಗೆ ಬರಲು ಸಜ್ಜಾಗಿದ್ದು, ಈ ಹಿನ್ನೆಲೆಯಲ್ಲಿ ಚಿತ್ರತಂಡ ಟ್ರೇಲರ್‌ ಬಿಡುಗಡೆ ಮಾಡಿದೆ. ಹೆಸರು, ಟೈಟಲ್‌ ಹಾಗೂ ಫಸ್ಟ್‌ ಲುಕ್‌ನಿಂದಲೇ ಗಮನ ಸೆಳೆದಿದ್ದ ಚಿತ್ರ, ಈಗ ಟ್ರೇಲರ್‌ ಮೂಲಕ ಭರವಸೆ ಮೂಡಿಸಿದೆ. 

36

 ‘ಮದುವೆ ಮನೆಯಲ್ಲಿ ನಡೆಯುವ ಕತೆ ಇದು. ಮದುವೆ ಮನೆಗೆ ಹೋದರೆ ಅಲ್ಲಿ ಎಮೋಷನ್‌, ಡ್ರಾಮಾ ಇರುತ್ತದೆ. ಈ ಚಿತ್ರದಲ್ಲಿ ಪ್ರತಿ ಪಾತ್ರಕ್ಕೂ ಮಹತ್ವ ಇದೆ. ಮದುವೆ ಕತೆ ಎಂದ ಕೂಡಲೇ ಮಹಿಳಾ ಪಾತ್ರಗಳಿಗೆ ಮಾತ್ರ ಮಹತ್ವ ಎಂದುಕೊಳ್ಳಬೇಡಿ.'

46

 'ಸಿನಿಮಾ ಎಲ್ಲರಿಗೂ ಇಷ್ಟವಾಗುತ್ತದೆ ಎಂದು ಭಾವಿಸಿದ್ದೇವೆ. ದಯವಿಟ್ಟು ಬೆಂಬಲ ಕೊಡಿ’ ಎಂದು ಮನವಿ ಮಾಡಿಕೊಂಡಿದ್ದು ನಿರ್ದೇಶಕ ಸಂತೋಷ್‌ ಗೋಪಾಲ್‌.

56

ಮೇಘನಾ ಗಾಂವ್ಕರ್‌ ಮಾತನಾಡಿ, ‘ಮದುವೆ ಮನೆಯಲ್ಲಿ ನಡೆಯುವ ಕತೆಗಳನ್ನು ಹಾಸ್ಯವಾಗಿ ನಿರೂಪಿಸಲಾಗಿದೆ. ಹೀಗಾಗಿ ಇದು ಮದುವೆ ಮನೆಯಲ್ಲಿ ನಡೆಯುವ ಮನರಂಜನೆಯ ನಾಟಕ’ ಎಂದರು. 

66

ಚಿತ್ರಕ್ಕೆ ಜೂಡಾ ಸ್ಯಾಂಡಿ ಸಂಗೀತ, ರಾಕೇಶ್‌ ಬಿ ರಾಜ್‌ ಕ್ಯಾಮೆರಾ ಹೊಣೆ ಹೊತ್ತಿದ್ದಾರೆ. ಸಂತೋಷ್‌ ಗೋಪಾಲ್‌ ಸಂಕಲನವೂ ಮಾಡಿದ್ದಾರೆ.

Read more Photos on
click me!

Recommended Stories