ಬೀಪ್‌ ಪದಗಳನ್ನು ಬಳಸಿರುವ ಖಡಕ್ ಪೊಲೀಸ್‌ ಪ್ರಿಯಾ; ಭೀಮಾ ನಾಯಕಿಯಾ ರಿಯಲ್ ಗಂಡ ಇವರೇ ನೋಡಿ!

First Published | Aug 27, 2024, 9:40 AM IST

ನಟಿ ಮಾಲಾಶ್ರೀ ಆದ್ಮೇಲೆ ನೀವೇ ನೋಡಿ ನಮಗೆ ಖಡಕ್ ನಾಯಕಿ ಎಂದು ಪ್ರಿಯಾ ನಟನೆ ಮೆಚ್ಚಿಕೊಂಡ ಸಿನಿಮಾ ಪ್ರೇಮಿಗಳು......
 

ದುನಿಯಾ ವಿಜಯ್ ನಟನೆಯ ಭೀಮಾ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಕಂಡಿತ್ತು. ಚಿತ್ರದಲ್ಲಿ ಪ್ರತಿಯೊಂದು ಪಾತ್ರ ದೊಡ್ಡ ಇಂಪ್ಯಾಕ್ಟ್ ಮಾಡಿದೆ ಅದರಲ್ಲಿ...ಪ್ರಿಯಾ ಕೂಡ ಒಬ್ಬರು.

ಖಡಕ್ ಪೊಲೀಸ್ ಆಫೀಸರ್ ಗಿರೀಜಾ ಪಾತ್ರದಲ್ಲಿ ಮಿಂಚಿರುವ ಕಿರುತೆರೆ ನಟಿ ಹಾಗೂ ರಂಗಭೂಮಿ ಕಲಾವಿದೆ ಪ್ರಿಯಾ ಶತಮರ್ಶನ್ ತಮ್ಮ ಪಾತ್ರಕ್ಕೆ ಸಾಕಷ್ಟು ಮೆಚ್ಚುಗೆ ಗಳಿಸಿದ್ದಾರೆ.

Tap to resize

ಮೈಸೂರು ಮೂಲತಃ ಪ್ರಿಯಾ ಶತಮರ್ಶನ್‌ ಮದುವೆಯಾದ ನಂತರ 2015ರಲ್ಲಿ ಬೆಂಗಳೂರಿಗೆ ಕಾಲಿಟ್ಟು ಸಂಪೂರ್ಣವಾಗಿ ರಂಗಭೂಮಿಯಲ್ಲಿ ತೊಡಗಿಸಿಕೊಂಡರು.

ಪ್ರಿಯಾ ಮದುವೆಯಾಗಿರುವ ಹುಡುಗ ಅವಿನಾಶ್ ಶತಮರ್ಶನ್ ಎಂದು. ಪತಿ ಕೂಡ ರಂಗಭೂಮಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇಬ್ಬರು ಬಣ್ಣದ ಪ್ರಪಂಚದಲ್ಲಿ ಸಕ್ರಿಯರಾಗಿದ್ದಾರೆ. 

 ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಪ್ರಿಯಾ ಮತ್ತು ಅವಿನಾಶ್ ಸಾಕಷ್ಟು ರೊಮ್ಯಾಂಟಿಕ್ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ. 

ನಟಿ ಮಾಲಾಶ್ರೀ ಮಾತ್ರ ಪೊಲೀಸ್ ಪಾತ್ರಕ್ಕೆ ಸೂಕ್ತ ಎಂದು ಸಿನಿಮಾ ಪ್ರೇಮಿಗಳು ಹೇಳುತ್ತಿದ್ದರು ಆದರೆ ಈಗ ಗಿರೀಜಾ ಪಾತ್ರ ನೋಡಿದ ಮೇಲೆ ಪ್ರಿಯಾ ಶತಮರ್ಶನ್‌ ಕೈಗೆ ಸಿಕ್ಕಾಪಟ್ಟೆ ಆಫರ್‌ಗಳು ಬರುತ್ತಿದೆ. 
 

Latest Videos

click me!