ಸ್ಯಾಂಡಲ್‌ವುಡ್ ಕನಸಿನ ರಾಣಿ ಮಾಲಾಶ್ರೀ (Malashree) ಮತ್ತು ಮಗಳು ಆರಾಧನಾ ರಾಮ್ ಈ ವರ್ಷ ದೀಪಾವಳಿ ಅದ್ಧೂರಿಯಾಗಿ ಆಚರಿಸಿದ್ದಾರೆ.
ಕೋಟಿ ರಾಮು (Koti Ramu) ಮನೆಯಲ್ಲಿ ದೀಪಾವಳಿ ಸಂಭ್ರಮ ಸಡಗರ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಶುಭ ಹಾರೈಸಿದ್ದಾರೆ.
ಮಾಲಾಶ್ರೀ ಮತ್ತು ಆರಾಧನಾ ಒಂದೇ ಬಣ್ಣದ ಸೀರೆ ಧರಿಸಿ ದೀಪಾ ಹಿಡಿದು ಫೋಟೋಶೂಟ್ ಮಾಡಿಸಿದ್ದಾರೆ. ಇವರಿಬ್ಬರ ಕಾಂಬಿನೇಷನ್ ಜನರಿಗೆ ಇಷ್ಟವಾಗಿದೆ.
ಹಲವು ವರ್ಷಗಳ ನಂತರ ಕನಸಿನ ರಾಣಿಯನ್ನು ಡಿಫರೆಂಟ್ ಲುಕ್‌ನಲ್ಲಿ ನೋಡಿ ನೆಟ್ಟಿಗರು ಖುಷಿಯಾಗಿದ್ದಾರೆ. ಮತ್ತೆ ಸಿನಿಮಾ ಮಾಡುವಂತೆ ಒತ್ತಾಯಿಸುತ್ತಿದ್ದಾರೆ.
ಈ ವರ್ಷ ದೀಪಾವಳಿ ನಿಮ್ಮ ಮನೆಯಲ್ಲಿ ಪ್ರೀತಿ, ಸಂತೋಷ, ಪಾಸಿಟಿವ್ ಶಕ್ತಿ ತರಲಿ. ಈ ವರ್ಷ ಅದ್ಧೂರಿಯಾಗಿ ಹಬ್ಬ ಆಚರಿಸಿ ಎಂದು ಮಾಲಾಶ್ರೀ ಬರೆದುಕೊಂಡಿದ್ದಾರೆ.
ಕಾಟೇರ ಸಿನಿಮಾ ಮೂಲಕ ಮಾಲಾಶ್ರೀ ಮಗಳು ಕನ್ನಡ ಚಿತ್ರರಂಗಕ್ಕೆ ಆರಾಧನಾ ಹೆಸರಿನಲ್ಲಿ ಪರಿಚಯವಾಗುತ್ತಿದ್ದಾರೆ. ಮೊದಲ ಚಿತ್ರದಲ್ಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಜೋಡಿಯಾಗಿದ್ದಾರೆ.