ಪಾಚಿ ಕಲರ್ ಸೀರೆಯಲ್ಲಿ ಲವ್ ಮಾಕ್ಟೇಲ್ ಸುಂದರಿ: ಮಿಲನಾ ಪೋಟೋ ನೋಡಿದ ಫ್ಯಾನ್ಸ್ ಹೀಗೆ ಅನ್ನೋದಾ!

Published : Nov 11, 2023, 03:00 AM IST

ನಟಿ ಮಿಲನಾ ನಾಗರಾಜ್ ಅವರು ಚಿತ್ರರಂಗದಲ್ಲಿ ಬೇಡಿಕೆಯ ಹೀರೋಯಿನ್ ಆಗಿ ಹೊರಹೊಮ್ಮಿದ್ದು, ಇದೀಗ ಅಚರು ಅವರು ಪಾಚಿ ಬಣ್ಣದ ಸುಂದರವಾದ ಸೀರೆ ಉಟ್ಟು ಕ್ಯಾಮೆರಾ ಮುಂದೆ ಪೋಸ್ ಕೊಟ್ಟಿದ್ದಾರೆ. ಅವರ ಸೀರೆ ಫೋಟೋಗಳು ವೈರಲ್ ಆಗಿದೆ.

PREV
17
ಪಾಚಿ ಕಲರ್ ಸೀರೆಯಲ್ಲಿ ಲವ್ ಮಾಕ್ಟೇಲ್ ಸುಂದರಿ: ಮಿಲನಾ ಪೋಟೋ ನೋಡಿದ ಫ್ಯಾನ್ಸ್ ಹೀಗೆ ಅನ್ನೋದಾ!

ಮಿಲನಾ ನಾಗರಾಜ್ ಸ್ಲೀವ್ಲೆಸ್ ಬ್ಲೌಸ್ ಧರಿಸಿಕೊಂಡು ಸುಂದರವಾಗಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಜೊತೆಗೆ ಬ್ರಾಡ್ ಡೀಪ್ ನೆಕ್ ಬ್ಲೌಸ್​ಗೆ ಸೀರೆಯನ್ನು ಉಟ್ಟು ಗೊಂಬೆಯಂತೆಯೇ ಮಿಂಚಿದ್ದಾರೆ. ಅವರ ಫೋಟೋಸ್ ಫ್ಯಾನ್ಸ್​ಗೆ ಇಷ್ಟವಾಗಿದೆ.

27

ಸಿಂಪಲ್ ಆಗಿರುವ ಇಯರಿಂಗ್ಸ್ ಧರಿಸಿದ್ದ ಮಿಲನಾ ನಾಗರಾಜ್ ಅವರು ಪುಟ್ಟ ಬಿಂದಿಯನ್ನು ಹಣೆಗಿಟ್ಟಿದ್ದರು. ಅವರ ಲುಕ್ ನಿಜಕ್ಕೂ ಆಕರ್ಷಕವಾಗಿತ್ತು. ನಟಿಯ ಸ್ಟೈಲ್ ನೋಡಿದ ನೆಟ್ಟಿಗರು ರೆಡ್ ಹಾರ್ಟ್ ಎಮೋಜಿ, ಲುಕಿಂಗ್ ವಾವ್, ನಿಮ್ಮ ತುಟಿಯಂಚಿನಲ್ಲಿ ಸ್ವಲ್ಪ ನಗುವಿರಲಿ ಎಂದು ಕಾಮೆಂಟ್ ಮಾಡಿದ್ದಾರೆ.

37

ಲವ್​ ಮಾಕ್ಟೇಲ್ ನಟಿ ಮಿಲನಾ ಸೀರೆ ಉಟ್ಟರೆ ತುಂಬಾ ಮುದ್ದಾಗಿ ಕಾಣಿಸುತ್ತಾರೆ. ಈ ಹಿಂದೆಯೂ ನಟಿ ಹಲವಾರು ಸಲ ಸುಂದರವಾದ ಸೀರೆಯುಟ್ಟು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

47

ಹಾಸನ ಮೂಲದ ಈ ಬೆಡಗಿ 2013ರಲ್ಲಿ 'ನಮ್​ ದುನಿಯಾ ನಮ್​ ಸ್ಟೈಲ್​' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿರಿಸಿದರು. ನಂತರ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಜೊತೆ ಬೃಂದಾವನ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದರು.

57

ತೆರೆಯಲ್ಲಿ ಸೂಪರ್​ ಜೋಡಿಯಾಗಿದ್ದ ನಟ ಡಾರ್ಲಿಂಗ್​ ಕೃಷ್ಣ ಮತ್ತು ಮಿಲನಾ ನಾಗರಾಜ್ 2021 ರ ಫೆಬ್ರವರಿ 14 ರಂದು ದಾಂಪತ್ಯಕ್ಕೆ ಕಾಲಿರಿಸಿದರು. ​ಅಲ್ಲದೇ ಸಿನಿ ಪಯಣದಲ್ಲೂ ಜೊತೆಯಾದರು. ಅವರಿಬ್ಬರು ಮದುವೆಯಾದ ನಂತರ ಬಿಡುಗಡೆಯಾದ ಲವ್​ ಮಾಕ್ಟೇಲ್​ 2 ಕೂಡ ಸೂಪರ್​ ಹಿಟ್​ ಆಗಿದೆ.

67

ಆದರೆ ಇವರಿಗೆ ವಿಶೇಷವಾದ ಮನ್ನಣೆ ತಂದು ಕೊಟ್ಟಿದ್ದು ಲವ್​ ಮಾಕ್ಟೇಲ್​ ಚಿತ್ರ. ಈ ಸಿನಿಮಾ ಬಿಡುಗಡೆಯಾದಾಗ ಮಿಲನಾ ಕನ್ನಡಿಗರ ಕ್ರಶ್ ಆಗಿದ್ದರು. ನಿಧಿಮಾ ಎಂದೇ ಫೇಮಸ್​ ಆದ ಇವರ ಮಗುವಿನಂತ ನಗು, ಮುಗ್ಧತೆ, ಮನಸೋಲುವಂತ ಸೌಂದರ್ಯಕ್ಕೆ ಸಿನಿ ಪ್ರೇಕ್ಷಕರು ಮಾರುಹೋಗಿದ್ದರು. 

77

ಮಿಲನಾ ನಾಗರಾಜ್ ಅವರು ನಟಿ ಮಾತ್ರ ಅಲ್ಲ ನಿರ್ಮಾಪಕಿ ಕೂಡ ಹೌದು. ನಿರ್ಮಾಪಕಿ ಆಗಿ ಅವರು ದೊಡ್ಡ ಯಶಸ್ಸು ಕಂಡಿದ್ದಾರೆ ಅನ್ನೋದು ವಿಶೇಷ. ಇದೀಗ  ಅವರು ಹಲವು ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ.

Read more Photos on
click me!

Recommended Stories