ರಾಧಿಕಾ ಪಂಡಿತ್ ಮನೆಯಲ್ಲೂ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಕುಟುಂಬ ಮತ್ತು ಸ್ನೇಹಿತರ ಜೊತೆಗೂಡಿ ರಾಧಿಕಾ ಪಂಡಿತ್ ದೀಪಾವಳಿ ಹಬ್ಬವನ್ನ ಸಂಭ್ರಮದಿಂದ ಆಚರಿಸಿದ್ದಾರೆ.
ಬೆಳಕಿನ ಹಬ್ಬದ ದೀಪಾವಳಿಯ ಶುಭಾಶಯಗಳು, ನಿಮ್ಮ ಬಾಳಿನಲ್ಲಿ ಕತ್ತಲೇ ಕಳೆದು ಬೆಳಕು ಮೂಡಲಿ ಎಂದು ಪ್ರೀತಿಯಿಂದ ಅಭಿಮಾನಿಗಳಿಗೆ ಸಾಮಾಜಿಕ ಜಾಲತಾಣದಲ್ಲಿದಲ್ಲಿ ನಟಿ ಶುಭಕೋರಿದ್ದಾರೆ.
ಯಶ್ ಹಾಗೂ ರಾಧಿಕಾ ಪಂಡಿತ್ ಮಕ್ಕಳಾದ ಆಯ್ರಾ ಹಾಗೂ ಯಥರ್ವ್ ಕೂಡ ಪೋಸ್ ನೀಡಿದ್ದಾರೆ. ಹಾಗೂ ಆಪ್ತರ ಜೊತೆ ಕಾಣಿಸಿಕೊಂಡಿದ್ದಾರೆ. ಜೊತೆಗೆ ಯಶ್ ಎಲ್ಲಿ ಎಂದು ಫ್ಯಾನ್ಸ್ ಕೇಳಿದ್ದಾರೆ. ಈ ಫೋಟೋಸ್ ಇದೀಗ ಗಮನ ಸೆಳೆಯುತ್ತಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಇನ್ನೂ ಚಂದವನದ ಸಿಂಡ್ರೆಲ್ಲಾ ರಾಧಿಕಾ ಮತ್ತೆ ನಟನೆಗೆ ಮರಳಲಿ ಎಂದು ಕನ್ನಡಿಗರು ಎದುರು ನೋಡ್ತಿದ್ದಾರೆ. ಯಶ್ 19 ಬಗ್ಗೆ ಅದೆಷ್ಟು ಫ್ಯಾನ್ಸ್‌ಗೆ ಕುತೂಹಲ ಇದ್ಯೋ, ಹಾಗೆಯೇ ರಾಧಿಕಾ ಮುಂದಿನ ಸಿನಿಮಾ ಬಗ್ಗೆ ಅಪ್‌ಡೇಟ್ ಸಿಗಲಿ ಎಂದು ಫ್ಯಾನ್ಸ್ ಕಾಯ್ತಿದ್ದಾರೆ.
ರಾಧಿಕಾ ದೀಪಾವಳಿ ವಿಶ್‌ಗೆ ಫ್ಯಾನ್ಸ್, ಚಿತ್ರದ ಬಗ್ಗೆ ಮಾಹಿತಿ ನೀಡಿ ಎಂದೆಲ್ಲಾ ಕಾಮೆಂಟ್ಸ್ ಮಾಡಿದ್ದಾರೆ. ಸೂಕ್ತ ಕಥೆ ಮತ್ತು ಒಳ್ಳೆಯ ಪಾತ್ರ ಇಷ್ಟವಾಗಿದ್ದಲ್ಲಿ ಖಂಡಿತಾ ನಟಿಸುತ್ತೇನೆ ಎಂದು ರಾಧಿಕಾ ಈ ಹಿಂದೆ ಕೂಡ ತಿಳಿಸಿದ್ದರು.
ನಟ ಯಶ್ ಅವರನ್ನು ಪ್ರೀತಿಸುತ್ತಿದ್ದ ರಾಧಿಕಾ ಪಂಡಿತ್, 2016 ಡಿಸೆಂಬರ್ 9ರಂದು ಗೋವಾದಲ್ಲಿ ಮದುವೆಯಾದ್ರು. ಮದುವೆ ಬಳಿ ರಾಧಿಕಾ ಹೆಚ್ಚು ಸಿನಿಮಾ ಮಾಡಿಲ್ಲ. ಮಕ್ಕಳಾದ ಬಳಿಕ ನಟನೆಗೆ ಬೈ ಬೈ ಹೇಳಿ ಮಕ್ಕಳನ್ನು ನೋಡಿಕೊಳ್ತಿದ್ದಾರೆ.