ಚಿಕ್ಕಣ್ಣನ ಜೊತೆ ಸಿನಿಮಾ ಒಪ್ಪಿಕೊಂಡಿದ್ದಕ್ಕೆ ಮೊದಲ ದಿನವೇ ಕಣ್ಣೀರಿಟ್ಟ 'ಹಿಟ್ಲರ್ ಕಲ್ಯಾಣ' ನಟಿ
ಯಾಕೆ ಮಲೈಕಾ ವಸುಪಾಲ್ ಮೊದಲ ಸಿನಿಮಾ ಸಹಿ ಮಾಡಿದ ಬೆನ್ನಲೆ ನೆಗೆಟಿವ್ ಪ್ರತಿಕ್ರಿಯೆ ಪಡೆದರು?
ಯಾಕೆ ಮಲೈಕಾ ವಸುಪಾಲ್ ಮೊದಲ ಸಿನಿಮಾ ಸಹಿ ಮಾಡಿದ ಬೆನ್ನಲೆ ನೆಗೆಟಿವ್ ಪ್ರತಿಕ್ರಿಯೆ ಪಡೆದರು?
ಹಿಟ್ಲರ್ ಕಲ್ಯಾಣ ಧಾರಾವಾಹಿ ಮೂಲಕ ಕಿರುತೆರೆ ಕಾಲಿಟ್ಟ ಮಾಲೈಕಾ ವಸುಪಾಲ್, ಉಪಾಧ್ಯಕ್ಷ ಸಿನಿಮಾದಲ್ಲಿ ನಟಿಸಿ ಬೆಳ್ಳಿತೆರೆಯಲ್ಲೂ ಮೆಚ್ಚುಗೆ ಪಡೆದರು. ಆದರೆ ಮೊದಲ ಸಿನಿಮಾ ನಂತರ ಕಣ್ಣೀರಿಟ್ಟಿದ್ದರಂತೆ.
'ನಾನು ಬಹಳ ಸಂತೋಷದಿಂದ ಉಪಾಧ್ಯಕ್ಷ ಸಿನಿಮಾ ಒಪ್ಪಿಕೊಂಡಿದ್ದೆ. ಕಥೆ ಬಹಳ ಹಿಡಿಸಿತ್ತು. ನನ್ನ ಪಾತ್ರವೂ ಇಷ್ಟವಾಗಿತ್ತು' ಎಂದು ಖಾಸಗಿ ಸಂದರ್ಶನದಲ್ಲಿ ಮಲೈಕಾ ಮಾತನಾಡಿದ್ದಾರೆ.
'ಆದರೆ ಈ ವಿಚಾರ ತಿಳಿಯುತ್ತಿದ್ದಂತೆಯೇ ನನ್ನ ಸ್ನೇಹಿತರು ಹಾಗೂ ಕುಟುಂಬದವರೆಲ್ಲಾ ಅದ್ಯಾಕೆ ಆ ಸಿನಿಮಾಗೆ ಒಪ್ಪಿಕೊಂಡೆ ಅದ್ಯಾಕೆ ಆ ರೀತಿಯ ಪಾತ್ರ? ಚಿಕ್ಕಣ್ಣ ಏನು ದೊಡ್ಡ ನಟ ಅಲ್ಲ ಎಂಬ ಮಾತಿಗಳು ಕೇಳಿ ಬಂದಿತ್ತು'
'ಆಗ ನನಗೆ ನನ್ನ ಆಯ್ಕೆ ಬಗ್ಗೆತೇ ಅನುಮಾನ ಶುರುವಾಯ್ತು. ಬಹಳ ದುಃಖವಾಯ್ತು. ಮೊದಲ ದಿನದ ಶೂಟಿಂಗ್‌ನಂತರ ಮನೆಗೆ ಬಂದು ಜೋರಾಗಿ ಅತ್ತಿದ್ದೆ'
'ಈ ರೀತಿಯಾಗಿ ಯಾರನ್ನು ಮಿಸ್ ಗೈಡ್ ಮಾಡಬಾರದು. ನನ್ನ ಮೊದಲ ಸಿನಿಮಾ ಅಗಿದ್ದರಿಂದ ನಾನು ಖಂಡಿತವಾಗಿಯೂ ಚೆನ್ನಾಗಿ ಯೋಚಿಸಿ ನಿರ್ಧಾರವನ್ನು ತೆಗೆದುಕೊಂಡಿದ್ದೆ'
'ಆದರೆ ಒಂದಷ್ಟು ಜನರು ನನ್ನನ್ನು ಕೆಟ್ಟ ರೀತಿಯಲ್ಲಿ ಇನ್‌ಫ್ಲೂಯನ್ಸ್ ಮಾಡಲು ಪ್ರಯತ್ನಿಸಿದರು. ಆಗ ನನಗೆ ತುಂಬಾ ಗಾಬರಿ ಆಗಿತ್ತು. ಚಿಕ್ಕಣ್ಣ ಬಹಳ ಒಳ್ಳೆಯ ನಟರು ಅವರೊಂದಿಗೆ ನಟಿಸಿರುವ ಖುಷಿ ನನಗಿದೆ'
'ದರ್ಶನ್ ಅಥವಾ ಸುದೀಪ್ ಅವರೊಟ್ಟಿಗೆ ನಟಿಸುವಷ್ಟು ನಾನು ಬೆಳೆದಿಲ್ಲ ಅಲ್ಲದೆ ನಾನು ಸಾಮಾನ್ಯವಾಗಿ ಸಿನಿಮಾಗಳನ್ನು ಒಪ್ಪಿಕೊಳ್ಳುವಾಗ ಕಥೆಯನ್ನು ಕೇಳುತ್ತೇನೆಯೇ ಹೊರತು ನಾಯಕ ನಟ ಯಾರು ಎಂದು ಕೇಳುವುದಿಲ್ಲ'
'ಉಪಾಧ್ಯಕ್ಷ ಸಿನಿಮಾ ಶೂಟಿಂಗ್ ಸಮಯದಲ್ಲಿ ನನ್ನನ್ನು ಕನ್ಫ್ಯೂಸ್ ಮಾಡಿದ ಎಲ್ಲರಿಗೂ ನನ್ನ ನಟನೆಯ ಮೂಲಕ ಉತ್ತರ ಸಿಕ್ಕಿದೆ. ಸಿನಿಮಾ ರಿಲೀಸ್ ಆದ್ಮೇಲೆ ನನಗೆ ಒಳ್ಳೆ ಪ್ರತಿಕ್ರಿಯೆ ಸಿಕ್ಕಿದೆ'