ಉದಯಪುರ್ ನಲ್ಲಿ ಡೆವಿಲ್ ಕ್ವೀನ್ ರಚನಾ ರೈ…. ದರ್ಶನ್ ಜೊತೆ ಫೋಟೊ ಪ್ಲೀಸ್ ಎಂದ ಫ್ಯಾನ್ಸ್!

ದರ್ಶನ್ ತೂಗುದೀಪ ಅಭಿನಯಿಸಲಿರುವ ಡೆವಿಲ್ ಸಿನಿಮಾ ನಾಯಕಿ ರಚನಾ ರೈ ಅಂದಕ್ಕೆ ಫಿದಾ ಆದ ಅಭಿಮಾನಿಗಳು, ದರ್ಶನ್ ಜೊತೆಗೊಂದು ಫೋಟೊ ಪೋಸ್ಟ್ ಮಾಡುವಂತೆ ಮನವಿ. 
 

ದರ್ಶನ್ ತೂಗುದೀಪ (Darshan Thoogudeepa) ಅವರ ಬಹು ನಿರೀಕ್ಷಿತ ಸಿನಿಮಾ ಆಗಿರುವ ಡೆವಿಲ್ ಸಿನಿಮಾಕ್ಕೆ , ಕರಾವಳಿಯ ಬ್ಯೂಟಿ ರಚನಾ ರೈ ನಾಯಕಿಯಾಗಿದ್ದು, ರಚನಾ, ತಮ್ಮ ಹೊಸ ಫೋಟೊ ಶೂಟ್ ಮೂಲಕ ಸೋಶಿಯಲ್ ಮೀಡೀಯಾದಲ್ಲಿ ಸಖತ್ ಸೌಂಡ್ ಮಾಡ್ತಿದ್ದಾರೆ. ಡೆವಿಲ್ ಗೆ ನಾಯಕಿಯಾಗುವ ವಿಷಯ ಹೊರಬೀಳುತ್ತಿದ್ದಂತೆ, ಅಭಿಮಾನಿಗಳ ಬಳಗವೂ ಹೆಚ್ಚಾಗಿದೆ. 
 

ದರ್ಶನ್ ಜೈಲಿನಿಂದ ಬಿಡುಗಡೆಯಾಗಿ ಬಂದ ನಂತರ, ಡೆವಿಲ್ (Devil Cinema) ತಂಡ ಇಲ್ಲಿವರೆಗೆ ರಾಜಸ್ಥಾನದಲ್ಲಿ ಸಿನಿಮಾ ಶೂಟಿಂಗ್ ಮಾಡುತ್ತಿತ್ತು. ನಿನ್ನೆಯಷ್ಟೇ ರಾಜಸ್ಥಾನದಲ್ಲಿ ತಂಡ ಸಿನಿಮಾ ಶೂಟಿಂಗ್ ಮುಗಿಸಿತ್ತು. ನಟಿ ರಚನಾ ರೈ, ತಮ್ಮ ಸೋಶಿಯಲ್ ಮೀಡೀಯಾದಲ್ಲಿ ರಾಜಸ್ಥಾನದ ಫೋಟೊಗಳನ್ನು ಶೇರ್ ಮಾಡಿದ್ದಾರೆ. 
 


ಸರೋವರಗಳ ನಗರ ಉದಯಪುರದಲ್ಲಿರುವ ರಚನಾ ರೈ (Rachana Rai) ಕೇಸರಿ ಬಣ್ಣದ ಸ್ಲೀವ್ ಲೆಸ್ ಸಲ್ವಾರ್ ಸೂಟ್ ಧರಿಸಿ, ವಿವಿಧ ಭಂಗಿಯಲ್ಲಿ ಪೋಸ್ ನೀಡಿದ್ದಾರೆ. ಇವರ ಮುದ್ದಾದ ನಗು ಹಾಗೂ ಸೌಂದರ್ಯಕ್ಕೆ ಫಿದಾ ಆಗಿರುವ ಅಭಿಮಾನಿಗಳು ನೀವು ಚೆನ್ನಾಗಿದ್ದೀರಾ? ಅಥವಾ ಬ್ಯೂಟಿನೇ ನಿಮ್ಮಲ್ಲಿದೆಯೇ ಎಂದು ಕೇಳಿದ್ದಾರೆ. 
 

ಇನ್ನೂ ಹಲವು ಅಭಿಮಾನಿಗಳು ಡೆವಿಲ್ ಕ್ವೀನ್ (Davil Queen), ಡಿ ಬಾಸ್ ಜೊತೆ ಒಂದೇ ಒಂದು ಫೋಟೊ ಪ್ಲೀಸ್, ದರ್ಶನ್ ಜೊತೆಗಿನ ನಿಮ್ಮ ಫೋಟೊ ನೋಡೋದಕ್ಕೆ ಕಾಯ್ತಿದ್ದೀವಿ, ಎಲ್ಲಾ ದರ್ಶನ್ ಅಭಿಮಾನಿಗಳು ನಿಮ್ಮ ಫ್ಯಾನ್ ಆಗ್ಬಿಟ್ಟಿದ್ದೀವಿ ಮೇಡಂ, ನಿಮ್ಮ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸಿದ್ದಾರೆ. 
 

ಮಂಗಳೂರು ಚೆಲುವೆ ರಚನಾ ರೈ, ಸಖತ್ ಕ್ಯೂಟ್, ಇವರು ಈಗಾಗಲೇ ನಟ ರೂಪೇಶ್ ಶೆಟ್ಟಿ (Roopesh Shetty) ಜೊತೆ ಒಂದು ತುಳು ಸಿನಿಮಾದಲ್ಲಿ ನಟಿಸಿದ್ದರು ಅಷ್ಟೇ ಅಲ್ಲ, ವಾಮನ, ಶ್ರೀರಂಗ, ಭುವನಂ ಗಗನಂ ಸಿನಿಮಾದಲ್ಲೂ ರಚನಾ ನಟಿಸಿದ್ದರು. ಇದೀಗ ಡೆವಿಲ್ ಸಿನಿಮಾಗೆ ನಾಯಕಿಯಾಗುವ ಮೂಲಕ ಜನಪ್ರಿಯತೆ ಪಡೆದುಕೊಳ್ಳುತ್ತಿದ್ದಾರೆ. 
 

ಪುನೀತ್ ರಾಜಕುಮಾರ್ ಅಭಿನಯದ ಸೂಪರ್ ಹಿಟ್ ಸಿನಿಮಾ ಮಿಲನಾ ನಿರ್ದೇಶಕರಾದ ಮಿಲನಾ ಪ್ರಕಾಶ್ (Milana Prakash) ಡೆವಿಲ್ ಸಿನಿಮಾ ನಿರ್ದೇಶಕರಾಗಿದ್ದು, ದರ್ಶನ್ ರ ತಾರಕ್ ಸಿನಿಮಾ ನಿರ್ದೇಶನ ಕೂಡ ಇವರದ್ದೇ. ಈ ಸಿನಿಮಾದಲ್ಲಿ ದರ್ಶನ್ ಗೆ ನಾಯಕಿಯಾಗಿ ರಚನಾ ರೈ ನಟಿಸುತ್ತಿದ್ದು, ಶರ್ಮಿಳಾ ಮಾಂಡ್ರೆ, ವಿನಯ್ ಗೌಡ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. 
 

Latest Videos

click me!