ಬಾಲಿವುಡ್ ಖ್ಯಾತ ನಟ ಅಫ್ತಾಬ್ ಶಿವದಾಸನಿ ತಂದೆಯಾದ ಸಂತಸವನ್ನು ಹಂಚಿಕೊಂಡಿದ್ದಾರೆ.
ಆಗಸ್ಟ್ 1ರಂದು ಹೆಣ್ಣು ಮಗಳನ್ನು ಬರ ಮಾಡಿಕೊಂಡಿದ್ದಾರೆ.
'ನಿಮ್ಮೆಲ್ಲರ ಆಶೀರ್ವಾದ ಮತ್ತು ದೇವರದಯೆಯಿಂದ ನಮಗೆ ಮಗಳು ಹುಟ್ಟಿದ್ದಾಳೆ'
'ನಾವೀಗ ಹೆಮ್ಮೆಯ ಪಾಲಕರು, ನಮ್ಮ ಕುಟುಂಬ ಈಗ ಮೂರಾಗಿದೆ' ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
2014ರಲ್ಲಿ ಲಂಡನ್ ಮೂಲದ ನಿನ್ ದುಸಂಜ್ ಅವರನ್ನು ಅಫ್ತಾಬ್ ಮದುವೆಯಾದರು.
ಇವರು ಮದುವೆ ತುಂಬಾನೇ ಪ್ರೈವೆಟ್ ಆಗಿತ್ತು, ಎರಡು ಕುಟುಂಬದವರು ಮಾತ್ರ ಭಾಗಿಯಾಗಿದ್ದರು.
ಅಫ್ತಾಬ್ ಪತ್ನಿ ನಿನ್ ಹುಟ್ಟಿದ್ದು, ಬೆಳೆದಿದ್ದೆಲ್ಲವೂ ವಿದೇಶದಲ್ಲಿಯೇ.
ಇತ್ತೀಚಿಗೆ ಅಫ್ತಾಬ್ ನೆಪೊಟಿಸಂ ಬಗ್ಗೆಯೂ ಮಾತನಾಡಿದ್ದರು.
'ಮಿಸ್ಟರ್ ಇಂಡಿಯಾ', 'ಚಲ್‌ಬಾಜ್', 'ಕಸ್ತೂರಿ' ಹಾಗೂ ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ಇತ್ತೀಚಿಗೆ ಕಿಚ್ಚ ಸುದೀಪ್ 'ಕೋಟಿಗೊಬ್ಬ-3' ಚಿತ್ರದಲ್ಲಿ ಅಭಿನಯಿಸಿದ್ದಾರೆ.
Suvarna News