ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ಕೋಮಲ್ ಜೊತೆ ಕಾಣಿಸಿಕೊಂಡ ಮೇಘನಾ ರಾಜ್: ಕಾರಣವೇನು?

Published : Jul 03, 2025, 01:13 PM IST

ಎರಡು ಕಾಲಘಟ್ಟದಲ್ಲಿ ಕತೆ ಸಾಗುತ್ತದೆ. ಎಂದಿನಂತೆ ನನ್ನ ಸಿಗ್ನೇಚರ್‌ ಕಾಮಿಡಿ ಇದ್ದೇ ಇರುತ್ತದೆ. ಇದರ ಜತೆಗೆ ಒಂದಿಷ್ಟು ಸೂಕ್ಷ್ಮ ವಿಚಾರಗಳನ್ನು ಚಿತ್ರದಲ್ಲಿ ಹೇಳಿದ್ದಾರೆ.

PREV
16

ಕೋಮಲ್‌ ಹೊಸ ಚಿತ್ರ ಘೋಷಣೆಯಾಗಿದೆ. ಈ ಚಿತ್ರದ ಹೆಸರು ‘ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್’.ಅನುಷಾ ರೈ ನಾಯಕಿ. ನಟಿ ಮೇಘನಾ ರಾಜ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

26

ಈ ಹಿಂದೆ 'ಕತ್ತಲೆ ಕೋಣೆ', 'ಇನಾಂದಾರ್', 'ಗುಂಮ್ಮಿ' ಚಿತ್ರಗಳನ್ನು ನಿರ್ದೇಶಿಸಿದ್ದ ಯುವ ನಿರ್ದೇಶಕ ಸಂದೇಶ್ ಶೆಟ್ಟಿ ಆಜಿ 'ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್' ಸಿನಿಮಾಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

36

ಸಿನಿಮಾದ ಟೈಟಲ್ಲೇ ಹೇಳುವಂತೆ, ಇದೊಂದು ವಿಭಿನ್ನ ಸಿನಿಮಾ. ಎರಡು ಕಾಲ ಘಟ್ಟದಲ್ಲಿ ಈ ಸಿನಿಮಾದ ಕಥೆಯನ್ನು ನಿರ್ದೇಶಕರು ವಿಭಿನ್ನವಾಗಿ ಹೇಳುತ್ತಿದ್ದಾರೆ. ಕಾಮಿಡಿ, ಮನರಂಜನೆಯ ಜೊತೆ ಬೇರೆ ಒಂದಷ್ಟು ವಿಷಯಗಳು ಕೂಡ ಈ ಸಿನಿಮಾದಲ್ಲಿರಲಿದೆ.

46

ಈ ಸಿನಿಮಾದಲ್ಲಿ ಒಂದು ಗೆಟಪ್‌ನಲ್ಲಿ ನಾನು ಸಿನಿಮಾ ಡೈರೆಕ್ಟರ್ ಪಾತ್ರ ಮಾಡಲಿದ್ದು, ಮತ್ತೊಂದು ಪಾತ್ರದ ಬಗ್ಗೆ ಈಗಲೇಹೇಳಲಾರೆ. ಒಟ್ಟಿನಲ್ಲಿ ಎರಡು ಶೇಡ್ ಇರುವಂಥ ಪಾತ್ರ ಇಲ್ಲಿದೆ. ಸಿನಿಮಾದ ಬಗ್ಗೆ ಮತ್ತು ಪಾತ್ರದ ಬಗ್ಗೆ ಹೇಳೋದಕ್ಕೆ ಸಾಕಷ್ಟಿದೆ ಎಂದರು.

56

ಕನ್ನಡದಲ್ಲಿ ಇದೊಂದು ವಿಭಿನ್ನ ಸಿನಿಮಾವಾಗಿ ಮೂಡಿಬರಲಿದೆ ಎಂಬ ವಿಶ್ವಾಸವಿದೆ. ಕಳೆದ ಐದಾರು ತಿಂಗಳಿನಿಂದ ಈ ಸಿನಿಮಾದ ಪ್ರೀ-ಪ್ರೊಡಕ್ಷನ್ ಕೆಲಸಗಳು ಕೆಲಸಗಳು ನಡೆಯುತ್ತಿದೆ ಎಂದು ನಿರ್ಮಾಪಕ ವಿಕಾಸ್ ಎಸ್. ಶೆಟ್ಟಿ ಹೇಳಿದರು.

66

'ಜ್ಯೋತಿ ಪ್ರೊಡಕ್ಷನ್ಸ್' ಬ್ಯಾನರಿನಲ್ಲಿ ವಿಕಾಸ್ ಎಸ್. ಶೆಟ್ಟಿ ಈ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ. ಎಂ.ಕೆ.ಮಠ, ಪ್ರಕಾಶ್ ತುಮಿನಾಡು, ವರ್ಧನ್ ತೀರ್ಥಹಳ್ಳಿ, ಸಿರಿ ಚಿತ್ರದಲ್ಲಿ ನಟಿಸುತ್ತಿದ್ದಾರೆ.

Read more Photos on
click me!

Recommended Stories