Sapthami Gowda ನಿಮಗೆ ಕಮೆಂಟ್ ಮಾಡೋಕೂ ಹೆದರಿಕೆ ಆಗುತ್ತಪ್ಪಾ, ಅಪ್ಪ ಬೇರೆ ಪೊಲೀಸ್ ಆಫೀಸರ್ ಎಂದ ಫ್ಯಾನ್!

ಸ್ಯಾಂಡಲ್‌ವುಡ್‌ನ ಕಾಂತಾರ ಚೆಲುವೆ ಸಪ್ತಮಿ ಗೌಡ  ಹಾರ್ಸ್ ರೈಡಿಂಗ್ ಕಲಿಯುತ್ತಿದ್ದು, ಕುದುರೆ ಸವಾರಿ ಫೋಟೋಸ್ ಶೇರ್ ಮಾಡಿದ್ದಾರೆ. ಫೊಟೋ ನೋಡಿದ ನೆಟ್ಟಿಗರು ನಿಮ್ಗೆ ಕಮೆಂಟ್ ಮಾಡೋಕೆ ಹೆದರಿಕೆ ಆಗುತ್ತಪ್ಪಾ ಎಂದಿದ್ದಾರೆ.

ಕಾಂತಾರ' ಚಿತ್ರದಿಂದ ಫೇಮಸ್ ಆದ ನಟಿ ಸಪ್ತಮಿ ಗೌಡ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ಆಗಾಗ ತಮ್ಮ ಟ್ರೆಡಿಶನಲ್ ಹಾಗೂ ಮಾಡರ್ನ್‌ ಲುಕ್‌ನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿರುತ್ತಾರೆ.

ಇದೀಗ ಹಾರ್ಸ್ ರೈಡಿಂಗ್ ಮಾಡುವ ಮುದ್ದಾದ ಫೋಟೋಸ್ ಶೇರ್ ಮಾಡಿದ ಸಪ್ತಮಿ ವಿಭಿನ್ನವಾಗಿ ಕಾಣಿಸಿದ್ದು, ಕುದುರೆಯ ಜೊತೆ ಆಕರ್ಷಕವಾಗಿ ವಿವಿಧ ಭಂಗಿಗಳಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.


ಕ್ಯಾಪ್ ಧರಿಸಿಕೊಂಡು ಕಂಡುಬಂದ ಸಪ್ತಮಿ ಅವರ ಫೊಟೋಗಳಿಗೆ ಲೈಕ್ಸ್ ಹಾಗೂ ಕಾಮೆಂಟ್ಸ್‌ಗಳ ಸುರಿಮಳೆಯಾಗಿದೆ. ಫೋಟೋಗಳಲ್ಲಿ ಸಪ್ತಮಿ ಹಾರ್ಸ್ ರೈಡಿಂಗ್ ಮಾಡುವುದನ್ನು ಕೂಡಾ ಕಾಣಬಹುದು.

ಸಪ್ತಮಿ ಫೋಟೋಸ್ ನೋಡಿದ ನೆಟ್ಟಿಗರು ಸಹ ತರೇಹವಾರಿ ಕಾಮೆಂಟ್ ಮಾಡಿದ್ದು, ಅದರಲ್ಲಿ ಒಬ್ಬ ನೆಟ್ಟಿಗ ನಿಮಗೆ ಕಮೆಂಟ್ ಮಾಡೋಕೂ ಹೆದರಿಕೆ ಆಗುತ್ತಪ್ಪಾ, ಯಾಕಂದ್ರೆ ನಿಮ್ಮ ಅಪ್ಪ ಬೇರೆ ಪೊಲೀಸ್ ಆಫೀಸರ್ ಎಂದಿದ್ದಾನೆ.

ಸಪ್ತಮಿ ಹಾರ್ಡ್ ರೈಡಿಂಗ್ ತರಬೇತಿ ಫೋಟೋಸ್ ನೋಡಿದ್ರೆ ಇದು ಕಾಂತಾರ ಚಾಪ್ಟರ್ ಒನ್ ಸಿದ್ಧತೆ ಅಂತಲೇ ಫೀಲ್ ಆಗುತ್ತಿದೆ. ಆದರೆ ಈ ಸಿದ್ದತೆ ಯಾವ ಸಿನಿಮಾಗೋಸ್ಕರ ಅನ್ನೋದನ್ನ ಮಾತ್ರ ಇನ್ನೂ ಬಿಟ್ಟಕೊಟ್ಟಿಲ್ಲ.

ಬಹುಶಃ ಫೋಟೋಸ್ ನೋಡಿದವ್ರು ಇದು ಕಾಂತಾರ ಚಾಪ್ಟರ್ ಒನ್‌ಗಾಗಿಯೇ ಅಂತ ಭಾವಿಸುತ್ತಿದ್ದಾರೆ. ಯಾಕಂದ್ರೆ, ಈ ಚಿತ್ರಕ್ಕಾಗಿಯೇ ರಿಷಬ್ ಶೆಟ್ರು ಹಾರ್ಸ್ ರೈಡಿಂಗ್ ಕಲಿಯಬೇಕಿದೆ ಅಂತಲೇ ಈ ಹಿಂದೆ ಹೇಳಿಕೊಂಡಿದ್ದರು. ಹಾಗಾಗಿಯೇ ಈಗ ಸಪ್ತಮಿ ಗೌಡ ಫೋಟೋ ಇದೀಗ ಹೆಚ್ಚು ಗಮನ ಸೆಳೆಯುತ್ತಿವೆ.

ಸಪ್ತಮಿ ಕಾಂತಾರ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆದರು. ನಂತರ ಬಾಲಿವುಡ್​ನ ವ್ಯಾಕ್ಸಿನ್ ವಾರ್ ಸಿನಿಮಾದಲ್ಲಿಯೂ ಪ್ರಮುಖ ಪಾತ್ರದಲ್ಲಿ ಮಿಂಚಿದರು. ಇನ್ನು ಅಭಿಷೇಕ್ ಅಂಬರೀಶ್ ಜೊತೆಗೆ ಕಾಳಿ ಸಿನಿಮಾ ಕೂಡಾ  ಸಪ್ತಮಿ ಮಾಡುತ್ತಿದ್ದಾರೆ.

ಕಾಂತಾರ' ಸಿನಿಮಾ ನಟಿ ಸಪ್ತಮಿ ಗೌಡ ಅವರು ಲೀಲಾ ಪಾತ್ರದ ಮೂಲಕ ದೇಶಾದ್ಯಂತ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಈ ಮೊದಲು ಸಿನಿಮಾ ಮಾಡಿದ್ದರೂ ಸಪ್ತಮಿ ಗೌಡ ಕ್ಲಿಕ್ ಆಗಿದ್ದು 'ಕಾಂತಾರ' ಚಿತ್ರದ ಮೂಲಕ. ಕಾಂತಾರ ಪಾತ್ರಕ್ಕಾಗಿ ನಟಿ ತಿಂಗಳ ಕಾಲ ವರ್ಕ್​ಶಾಪ್ ಕೂಡಾ ಅಟೆಂಡ್ ಮಾಡಿದ್ದರು.

Latest Videos

click me!