'ಕರ್ಣ' ಸೀರಿಯಲ್ ಖ್ಯಾತಿಯ ನಟ ಕಿರಣ್ ರಾಜ್, 'ಜಾಕಿ 42' ಎಂಬ ಹೊಸ ಆ್ಯಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕುದುರೆ ರೇಸ್ ಮತ್ತು ಬೆಟ್ಟಿಂಗ್ ಜಗತ್ತಿನ ಕಥೆಯುಳ್ಳ ಈ ಸಿನಿಮಾದಲ್ಲಿ ಅವರು ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಪಾತ್ರಕ್ಕಾಗಿ ಕುದುರೆ ಸವಾರಿಯನ್ನೂ ಕಲಿತಿದ್ದಾರೆ.
ಕರ್ಣ ಸೀರಿಯಲ್ನಲ್ಲಿ ಕರ್ಣ ಸದ್ಯ ನಿಧಿಯ ಜೊತೆ ಮೊದಲ ರಾತ್ರಿಯ ಸಂಭ್ರಮದಲ್ಲಿ ಇದ್ದಾನೆ. ತಾಳಿ ಶಾಸ್ತ್ರವೂ ನೆರವೇರಿದ್ದು, ಹೊಸ ಹಂತಕ್ಕೆ ಸಂಸಾರ ಸಾಗುತ್ತಿದೆ. ಅದೇ ಇನ್ನೊಂದೆಡೆ ಕರ್ಣ ಉರ್ಫ್ ನಟ ಕಿರಣ್ ರಾಜ್ (Kiran Raj) ಅವರು ನಟಿಸ್ತಿರೋ ಹೊಸ ಚಿತ್ರ ಜಾಕಿ 42 ಚಿತ್ರದ ಸಾಂಗ್ ಒಂದು ರಿಲೀಸ್ ಆಗಿದ್ದು, ಅದರಲ್ಲಿ ನಾಯಕಿ ಜೊತೆ ಕಿರಣ್ ರಾಜ್ ರೊಮಾನ್ಸ್ ನೋಡಬಹುದಾಗಿದೆ.
26
ನಾಯಕ-ನಾಯಕಿ ಯಾರು?
ಈ ಸಿನಿಮಾದಲ್ಲಿ ಕಿರಣ್ ರಾಜ್ ನಾಯಕನಾಗಿದ್ದರೆ, ಕಿರಣ್ ರಾಜ್ ಜೊತೆಗೆ ನಾಯಕಿಯಾಗಿ ಹೃತಿಕಾ ಶ್ರೀನಿವಾಸ್ ನಟಿಸುತ್ತಿದ್ದಾರೆ. ಗುರುತೇಜ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬರ್ತಿರೋ ಈ ಸಿನಿಮಾವನ್ನು, ಭಾರತಿ ಸತ್ಯನಾರಾಯಣ ಅವರು ‘ಗೋಲ್ಡನ್ ಗೇಟ್ ಸ್ಟುಡಿಯೋಸ್’ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸುತ್ತಿದ್ದಾರೆ.
36
ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ
ಅಂದಹಾಗೆ ಜಾಕಿ 42 (Jockey 42) ಆ್ಯಕ್ಷನ್ ಥ್ರಿಲ್ಲರ್ ಸಿನಿಮಾವಾಗಿದೆ. ಕುದುರೆ ರೇಸ್ (Horse Racing) ಮತ್ತು ಬೆಟ್ಟಿಂಗ್ ಪ್ರಪಂಚದ ನೈಜ ಕಥೆಯನ್ನು ಆಧರಿಸಿದ ಸ್ಟೋರಿ ಈ ಸಿನಿಮಾದ್ದು. ಈ ಚಿತ್ರದಲ್ಲಿ ನಟ ಕಿರಣ್ ರಾಜ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಒಬ್ಬ ಸಾಮಾನ್ಯ ಹುಡುಗ ರೇಸ್ ಫೀಲ್ಡ್‌ಗೆ ಎಂಟ್ರಿ ಕೊಡೋದು ಹೇಗೆ, ಈ ಸಂದರ್ಭದಲ್ಲಿ ಆತ ಅಲ್ಲಿ ಏನೆಲ್ಲ ಸವಾಲು ಎದುರಿಸುತ್ತಾನೆ ಹಾಗೂ ಅಲ್ಲಿನ ರಾಜಕೀಯವನ್ನು ಮೆಟ್ಟಿ ನಿಂತು ಹೇಗೆ ಸಕ್ಸಸ್ ಕಾಣುತ್ತಾನೆ ಎಂಬೆಲ್ಲ ಸಂಗತಿ ಒಳಗೊಂಡ ಸ್ಟೋರಿ ಈ ಸಿನಿಮಾದ್ದು ಎಂದು ಇದಾಗಲೇ ರಿವೀಲ್ ಆಗಿದೆ.
56
ಚಿತ್ರಕ್ಕಾಗಿ ಕುದುರೆ ಸವಾರಿ
ಅಷ್ಟಕ್ಕೂ ಕಿರಣ್ ರಾಜ್ ಅವರು ತಮ್ಮ ಪಾತ್ರಕ್ಕೆ ಜೀವ ತುಂಬಲು ಸಾಕಷ್ಟು ಹೋಮ್ವರ್ಕ್ಮಾಡುತ್ತಾರೆ. ಕರ್ಣ ಸೀರಿಯಲ್ನಲ್ಲಿ ಡಾಕ್ಟರ್ ಆಗಿದ್ದಾಗ ಅವರು ವೈದ್ಯರ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿರುವುದಾಗಿ ತಿಳಿಸಿದ್ದರು. ಅದೇ ರೀತಿ ಈ ಸಿನಿಮಾ 'ಬೆಟ್ಟಿಂಗ್ ಹಾಗೂ ರೇಸಿಂಗ್ ಪ್ರಪಂಚದ್ದು ಆಗಿರುವ ಕಾರಣ, ಸಾಕಷ್ಟು ರಿಸರ್ಚ್ ಮಾಡಿದ್ದಾರೆ. ನೈಜತೆಗೆ ಹತ್ತಿರವಾಗಿ ಇರಬೇಕು ಎನ್ನುವ ಕಾರಣಕ್ಕೆ ಕುದುರೆ ಸವಾರಿಯನ್ನೂ ಕಲಿತಿರುವುದಾಗಿ ಕಿರಣ್ ರಾಜ್ ಹೇಳಿದ್ದಾರೆ.
66
ನಿರ್ದೇಶಕ ಹೇಳಿದ್ದೇನು?
ಚಿತ್ರಕಥೆ, ಡೈಲಾಗ್ ಎಷ್ಟೇ ಅದ್ಭುತವಾಗಿ ಮಾಡಿದರೂ ಮೂಲಕಥೆ ಗಟ್ಟಿಯಾಗಿರಬೇಕು. ಈ ನಿಟ್ಟಿನಲ್ಲಿ ಸಾಕಷ್ಟು ಹೋಮ್‌ವರ್ಕ್ ಮಾಡಿ ಅಪರೂಪದ ಕಥೆ ಹೇಳುತ್ತಿದ್ದೇವೆ' ಎಂದಿದ್ದಾರೆ ನಿರ್ದೇಶಕ ಗುರುತೇಜ್ ಈ ಹಿಂದೆ ಹೇಳಿದ್ದರು. ಯಾವುದೇ ಸಿನಿಮಾ ಎಷ್ಟೇ ಅದ್ಧೂರಿಯಾಗಿ ನಿರ್ಮಾಣಗೊಂಡರೂ ಕೊನೆಗೆ ಉಳಿಯುವುದು ಕಂಟೆಂಟ್ ಮಾತ್ರ. ಈ ನಿಟ್ಟಿನಲ್ಲಿ 'ಜಾಕಿ 42' ಚಿತ್ರತಂಡ ಕೂಡ ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದೆ ಎಂದು ಅವರು ಕಳೆದ ವರ್ಷ್ ಚಿತ್ರ ಸೆಟ್ಟೇರಿದ ಸಂದರ್ಭದಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.