'ಕಾಂತಾರ' ಅಭಿಮಾನಿಗಳಿಗೆ ಮತ್ತೊಂದು ಗುಡ್‌ನ್ಯೂಸ್: ಮುಂದಿನ ಭಾಗದ ಕಥೆಯ ರಹಸ್ಯ ಬಯಲು!

Published : Jul 08, 2026, 05:41 PM IST

'ಕಾಂತಾರ' ಅಭಿಮಾನಿಗಳಿಗೆ ಮತ್ತೊಂದು ಗುಡ್‌ನ್ಯೂಸ್ ಸಿಕ್ಕಿದೆ. ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡ ಕಾಂತಾರ ಫ್ರಾಂಚೈಸಿಯ ಮುಂದಿನ ಭಾಗದ ಕುರಿತು ನಟ-ನಿರ್ದೇಶಕ ರಿಷಬ್ ಶೆಟ್ಟಿ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.

PREV
14
ಮಹತ್ವದ ಮಾಹಿತಿ

'ಕಾಂತಾರ' ಅಭಿಮಾನಿಗಳಿಗೆ ಮತ್ತೊಂದು ಗುಡ್‌ನ್ಯೂಸ್ ಸಿಕ್ಕಿದೆ. ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡ ಕಾಂತಾರ ಫ್ರಾಂಚೈಸಿಯ ಮುಂದಿನ ಭಾಗದ ಕುರಿತು ನಟ-ನಿರ್ದೇಶಕ ರಿಷಬ್ ಶೆಟ್ಟಿ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. 'ಕಾಂತಾರ: ಚಾಪ್ಟರ್ 1' ಬಳಿಕ ಈಗ ಮುಂದಿನ ಭಾಗದ ಚಿತ್ರದ ಚಿತ್ರಕಥೆ ಬರೆಯುವ ಕೆಲಸ ಆರಂಭವಾಗಿದ್ದು, ತಮ್ಮ ಲೇಖಕರ ತಂಡದೊಂದಿಗೆ ಸ್ಕ್ರಿಪ್ಟ್ ಅಭಿವೃದ್ಧಿಯಲ್ಲಿ ತೊಡಗಿರುವುದಾಗಿ ಅವರು ತಿಳಿಸಿದ್ದಾರೆ.

24
ನಿರ್ದೇಶನವೇ ನಿಜವಾದ ಫ್ಯಾಷನ್

ಅಂತರರಾಷ್ಟ್ರೀಯ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರಿಷಬ್ ಶೆಟ್ಟಿ, ನಿರ್ದೇಶನವೇ ತಮ್ಮ ನಿಜವಾದ ಫ್ಯಾಷನ್ ಎಂದು ಹೇಳಿಕೊಂಡಿದ್ದಾರೆ. ಕಥೆ ಬರೆಯುವ ಪ್ರಕ್ರಿಯೆಯಲ್ಲೇ ತಮಗೆ ಹೆಚ್ಚು ತೃಪ್ತಿ ಸಿಗುತ್ತದೆ ಎಂದು ತಿಳಿಸಿರುವ ಅವರು, ಮುಂದಿನ ಅಧ್ಯಾಯವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ರೂಪಿಸುವ ಉದ್ದೇಶ ಹೊಂದಿರುವುದಾಗಿ ಹೇಳಿದ್ದಾರೆ.

34
ಮುಂದಿನ ಭಾಗದ ಕಥೆಯಲ್ಲಿ ಏನಿರಬಹುದು?

ಮೂಲಗಳ ಪ್ರಕಾರ, ಕಾಂತಾರದ ಮುಂದಿನ ಅಧ್ಯಾಯದಲ್ಲೂ ದೈವಿಕ ಶಕ್ತಿಗಳು ಕಥೆಯ ಕೇಂದ್ರಬಿಂದುವಾಗಲಿವೆ. ರಾಜಮನೆತನ ಮತ್ತು ಬುಡಕಟ್ಟು ಸಮುದಾಯದ ನಡುವಿನ ಸಂಘರ್ಷ ಮತ್ತೊಂದು ಹಂತಕ್ಕೆ ಸಾಗಲಿದ್ದು, ಹೊಸ ತಲೆಮಾರಿನ ಕಥೆಯೊಂದಿಗೆ ದೈವ, ನಂಬಿಕೆ ಮತ್ತು ಸಂಪ್ರದಾಯಗಳ ಹೋರಾಟವನ್ನು ಚಿತ್ರಿಸುವ ಸಾಧ್ಯತೆ ಇದೆ. ಹಿಂದಿನ ಭಾಗದಲ್ಲಿ ಕಾಣಿಸಿಕೊಂಡ ಸಂಘರ್ಷದ ಮುಂದುವರಿದ ಅಧ್ಯಾಯವನ್ನು ಇನ್ನಷ್ಟು ರೋಚಕವಾಗಿ ಕಟ್ಟಿಕೊಡುವ ಪ್ರಯತ್ನ ಚಿತ್ರತಂಡದ್ದಾಗಿದೆ.

44
ನಟನೆಯಲ್ಲೂ ಬ್ಯುಸಿ ರಿಷಬ್

ನಿರ್ದೇಶನದ ಜೊತೆಗೆ ನಟನೆಯಲ್ಲೂ ರಿಷಬ್ ಶೆಟ್ಟಿ ಸದ್ಯ ಸಾಕಷ್ಟು ಬ್ಯುಸಿಯಾಗಿದ್ದಾರೆ. ಅವರ ಕೈಯಲ್ಲಿ ಎರಡು ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಸಿನಿಮಾಗಳಿದ್ದು, ಒಂದಾದ ಮೇಲೆ ಒಂದರಂತೆ ಪೂರ್ಣಗೊಳಿಸುವ ಯೋಜನೆ ಹೊಂದಿದ್ದಾರೆ. ಮೊದಲು ಪ್ರಶಾಂತ್ ವರ್ಮ ನಿರ್ದೇಶನದ ಜೈ ಹನುಮಾನ್ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಲಿರುವ ಅವರು, ಬಳಿಕ ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್ ಐತಿಹಾಸಿಕ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಎರಡೂ ಸಿನಿಮಾಗಳ ಪಾತ್ರಗಳು ಸಂಪೂರ್ಣ ಭಿನ್ನವಾಗಿರುವುದರಿಂದ, ಪ್ರತ್ಯೇಕ ದೈಹಿಕ ಸಿದ್ಧತೆ ಮತ್ತು ವಿಭಿನ್ನ ಲುಕ್ ಅಗತ್ಯವಿದೆ ಎಂದು ರಿಷಬ್ ಹೇಳಿದ್ದಾರೆ. ಒಟ್ಟಾರೆ, ಕಾಂತಾರ ಸರಣಿಯ ಮುಂದಿನ ಭಾಗದ ಕೆಲಸ ಅಧಿಕೃತವಾಗಿ ಆರಂಭವಾಗಿರುವುದು ಅಭಿಮಾನಿಗಳಲ್ಲಿ ಹೊಸ ನಿರೀಕ್ಷೆ ಮೂಡಿಸಿದ್ದು, ಚಿತ್ರದ ಕುರಿತು ಇನ್ನಷ್ಟು ಮಾಹಿತಿಗಾಗಿ ಸಿನಿಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories