ಪ್ರಿಯಾ ಸುದೀಪ್ ಗೆ ಕಾರ್ ರೇಸ್ ಹುಚ್ಚು ಹಿಡಿಸಿದ್ದು ಯಾರು? ಇಂಟರೆಸ್ಟಿಂಗ್ ವಿಷ್ಯ ಹೊರ ಹಾಕಿದ ಕಿಚ್ಚನ ಮಡದಿ

Published : Feb 17, 2026, 11:54 AM IST

ಕಿಚ್ಚನ ಪ್ರೀತಿಯ ಮಡದಿ ಪ್ರಿಯಾ ಸುದೀಪ್ ಎಲ್ಲದ್ರಲ್ಲೂ ಎತ್ತಿದ ಕೈ. ಸಿನಿಮಾ, ಕ್ರಿಕೆಟ್ ನಲ್ಲಿ ಮಾತ್ರವಲ್ಲ ಕಾರ್ ರೇಸ್ ನಲ್ಲೂ ಆಸಕ್ತಿ ಹೊಂದಿರುವ ಪ್ರಿಯಾ ಸುದೀಪ್ ಗೆ ಇಷ್ಟವಾಗುವ ಕಾರ್ ಯಾವ್ದು ಗೊತ್ತಾ?

PREV
16
ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ಓನರ್ ಪ್ರಿಯಾ ಸುದೀಪ್

ಸಕಲಕಲಾವಲ್ಲಭ ಕಿಚ್ಚ ಸುದೀಪ್ ಅವರ ಪತ್ನಿ ಪ್ರಿಯಾ ಸುದೀಪ್ ಕಮ್ಮಿ ಏನಿಲ್ಲ. ಎಲ್ಲ ಕ್ಷೇತ್ರಗಳ ಬಗ್ಗೆ ಜ್ಞಾನ ಹೊಂದಿರುವ ಪ್ರಿಯಾ ಸುದೀಪ್, ಗಂಡನಿಗೆ ಸಮನಾಗಿ ನಿಲ್ತಾರೆ. ಕಿಚ್ಚಾಸ್ ಕಿಂಗ್ಸ್ ಬೆಂಗಳೂರು (Kicchas Kings Bengaluru) ಓನರ್ ಆಗಿರುವ ಪ್ರಿಯಾ ಸುದೀಪ್ ಅವರಿಗೆ ಕಾರ್ ರೇಸ್ ನಲ್ಲಿ ಆಸಕ್ತಿ ಹೆಚ್ಚಾಗ್ತಿದೆ. ಕಾರ್ ರೇಸ್ ಬಗ್ಗೆ ತಮಗಿರುವ ಪ್ರೀತಿಯನ್ನು ಪ್ರಿಯಾ ಹಂಚಿಕೊಂಡಿದ್ದಾರೆ.

26
ಕ್ರಿಕೆಟ್ – ಕಾರ್ ರೇಸ್

shreyxnk ಹೆಸರಿನ ಇನ್ಸ್ಟಾಖಾತೆಯಲ್ಲಿ ಪ್ರಿಯಾ ಸುದೀಪ್ ಅವರ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಪ್ರಿಯಾ ಸುದೀಪ್ ಅವರಿಗೆ ಕಾರ್ ರೇಸ್ ಸೇರಿದಂತೆ ಇಂಟರೆಸ್ಟಿಂಗ್ ಪ್ರಶ್ನೆ ಕೇಳಲಾಗಿದೆ. ಕಾರ್ ರೇಸ್ ಹಾಗೂ ಕ್ರಿಕೆಟ್ ಎಂದಾಗ ಪ್ರಿಯಾ ಸುದೀಪ್ ಕಾರ್ ರೇಸ್ ಆಯ್ಕೆ ಮಾಡ್ಕೊಂಡಿದ್ದಾರೆ. ಇಂಥ ಪ್ರಶ್ನೆಯನ್ನು ಕೇಳ್ಬಾರದು ಎಂದ ಪ್ರಿಯಾ, ಒಂದು ವರ್ಷದ ಹಿಂದೆ ಇದೇ ಪ್ರಶ್ನೆ ಕೇಳಿದ್ರೆ ಕ್ರಿಕೆಟ್ ಅಂತಿದ್ದೆ. ಆದ್ರೆ ಈಗ ಕಾರ್ ರೇಸ್ ಮೇಲೆ ಆಸಕ್ತಿ ಹೆಚ್ಚಾಗಿದೆ ಎಂದಿದ್ದಾರೆ. ಆದ್ರೆ ಎರಡಕ್ಕೂ 50 /50 ಮಾರ್ಕ್ಸ್ ನೀಡಿದ್ದಾರೆ ಪ್ರಿಯಾ.

36
ಕಾರ್ ರೇಸ್ ನಲ್ಲಿ ಆಸಕ್ತಿ ಹೇಗೆ?

ಕಾರ್ ರೇಸ್ ನಲ್ಲಿ ಪ್ರಿಯಾಗೆ ಆಸಕ್ತಿ ಹುಟ್ಟಿದ್ದು ಕಿಚ್ಚ ಸುದೀಪ್ ಅವರಿಂದ. ಸುದೀಪ್ 2025ರಲ್ಲಿ ಬೆಂಗಳೂರಿನ ಕಾರ್ ರೇಸ್ ಟೀಂ ಖರೀದಿ ಮಾಡಿದ್ದರು. ಅದಕ್ಕೆ ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ಅಂತ ನಾಮಕರಣ ಮಾಡಲಾಗಿದೆ. ಹಿಂದಿನ ವರ್ಷ ರೇಸ್ ನಲ್ಲಿ ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ತಂಡ ಪಾಲ್ಗೊಂಡಿತ್ತು. ಕಿಚ್ಚ, ಟೀಂ ಖರೀದಿ ಮಾಡೋ ಮೊದಲು ಪ್ರಿಯಾ ಒಂದೇ ಒಂದು ಕಾರ್ ರೇಸ್ ನೋಡಿರಲಿಲ್ಲ. ಆದ್ರೆ ಟೀಂ ಖರೀದಿ ಮಾಡಿದ್ಮೇಲೆ ಆಸಕ್ತಿ ಬೆಳೀತಾ ಹೋಯ್ತು. ಸುದೀಪ್ ನಿರ್ಧಾರ ತೆಗೆದುಕೊಂಡ್ರು, ನಾನು ಅವರ ಜೊತೆ ಹೋದೆ ಅಂತ ಪ್ರಿಯಾ ಸುದೀಪ್ ಹೇಳಿದ್ದಾರೆ.

46
ಪ್ರಿಯಾಗೆ ಯಾವ ಕಾರು ಇಷ್ಟ?

ಪ್ರಿಯಾ ಸುದೀಪ್ ಗೆ ಬೈಕ್ ಗಿಂತ ಕಾರ್ ತುಂಬಾ ಇಷ್ಟ. ಬೈಕ್ ಡೇಂಜರ್ ಎನ್ನುವ ಪ್ರಿಯಾ ಸುದೀಪ್, ಡ್ರೈವರ್ ಸೀಟ್ ಪಕ್ಕದಲ್ಲಿ ಕುಳಿತುಕೊಳ್ಳೋದಕ್ಕಿಂತ ಸ್ವತಃ ಡ್ರೈವ್ ಮಾಡಲು ಇಷ್ಟಪಡ್ತಾರೆ. ಅವರು ಆಟೋಮ್ಯಾಟಿಕ್ ಗಿಂತ ಮ್ಯಾನುವಲ್ ಕಾರ್ ಲೈಕ್ ಮಾಡ್ತಾರೆ. ಮ್ಯಾನುವಲ್ ನಲ್ಲಿ ತಾವೇ ಡ್ರೈವ್ ಮಾಡ್ಬಹುದು ಎನ್ನುವ ಅಭಿಪ್ರಾಯ ಅವರದ್ದು. ಇಷ್ಟೇ ಅಲ್ಲ, ಪ್ರಿಯಾ ಅವರಿಗೆ ಎಲೆಕ್ಟ್ರಿಕ್ ಗಿಂತ ಪೆಟ್ರೋಲ್ ಕಾರ್ ಅಂದ್ರೆ ಇಷ್ಟ.

56
ಯಾವುದು ಪ್ರಿಯಾ ಡ್ರೀಮ್ ಕಾರ್ ?

ವಿಟೇಜ್ ಕ್ಲಾಸಿಕ್ ಕಾರುಗಳನ್ನು ಆಯ್ಕೆ ಮಾಡ್ಕೊಳ್ಳುವ ಪ್ರಿಯಾ ಅವರು, ನನ್ನ ಡ್ರೀಮ್ ಕಾರ್ ನನ್ನ ಬಳಿ ಇದೆ ಎಂದಿದ್ದಾರೆ. ಅವರ ಡ್ರೀಮ್ ಕಾರ್ ಮಿನಿ ಕೂಪರ್ ಕಂಟ್ರಿ ಮ್ಯಾನ್. ಸುದೀಪ್ ಇದನ್ನು ಪ್ರಿಯಾ ಅವರಿಗೆ ಗಿಫ್ಟ್ ಆಗಿ ನೀಡಿದ್ದು, ಬ್ಲ್ಯೂ ಕರಲ್ ಮಿನಿ ಕೂಪರ್ ನಲ್ಲಿ ಪ್ರಿಯಾ, ಬೆಂಗಳೂರಿನಿಂದ ಹೈದ್ರಾಬಾದ್ ಗೆ ಡ್ರೈವ್ ಮಾಡ್ಕೊಂಡು ಹೋಗಿದ್ರು. ಇದು ಅಧ್ಬುತ ಅನುಭವ ಎನ್ನುತ್ತಾರೆ ಪ್ರಿಯಾ ಸುದೀಪ್.

66
ಸುದೀಪ್ ಫ್ಯಾನ್ ಪ್ರಿಯಾ

ಪ್ರಿಯಾ ಸುದೀಪ್ ಅವರಿಗೆ ರೇಸಿಂಗ್ ಕಾರ್ ಓನರ್ ಆಗಿರೋದಕ್ಕಿಂತ ಸುದೀಪ್ ಅವರ ಹೆಮ್ಮೆಯ ಫ್ಯಾನ್ ಆಗಿರೋದಕ್ಕೆ ಇಷ್ಟವಂತೆ. ಪ್ರಿಯಾ ಸುದೀಪ್, ಕಾರ್ ರೇಸರ್ ಮ್ಯಾಕ್ಸ್ ವರ್ಸ್ಟಾಪ್ಪೆನ್ ಬಿಗ್ ಫ್ಯಾನ್. ಅವರ ಹೆಸರನ್ನು ಮ್ಯಾಕ್ಸ್ ಮ್ಯಾಕ್ಸ್ ಅಂತ ಖುಷಿಯಿಂದ ಹೇಳ್ಕೊಂಡಿದ್ದಾರೆ ಪ್ರಿಯಾ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories