ನಟ ಕಿಚ್ಚ ಸುದೀಪ್ ತಮ್ಮ ಮಗಳ ಕುರಿತ ಅಸಭ್ಯ ಕಾಮೆಂಟ್‌ಗಳಿಗೆ ಖಡಕ್ ಪ್ರತಿಕ್ರಿಯೆ ನೀಡಿದ್ದು, ತನ್ನ ಮಗಳು ತನಗಿಂತಲೂ ಸ್ಟ್ರಾಂಗ್ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜೊತೆಗೆ, ಸಿನಿಮಾ ಪೈರಸಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಮತ್ತು ತಮ್ಮ 'ಮಾರ್ಕ್' ಚಿತ್ರದ ಯಶಸ್ಸಿನ ಕುರಿತು ಮಾತನಾಡಿದ್ದಾರೆ.
ಬೆಂಗಳೂರು: ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಮಗಳ ಕುರಿತು ಬಂದಿರುವ ಅಸಭ್ಯ ಮತ್ತು ಕೆಟ್ಟ ಕಾಮೆಂಟ್‌ಗಳ ಬಗ್ಗೆ ನಟ ಕಿಚ್ಚ ಸುದೀಪ್ ಮೊದಲ ಬಾರಿಗೆ ಸ್ಪಷ್ಟವಾಗಿ ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು, “ಇಂತಹ ಕಿತ್ತೊಗಿರೋ ಕಾಮೆಂಟ್‌ಗಳ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಅದಕ್ಕಿಂತ ನಾವು ಇಲ್ಲಿ ಕೂತು ಚೀಪ್ ವಿಚಾರಗಳ ಬಗ್ಗೆ ಮಾತಾಡದೇ, ಸರಿಯಾದ ಸೆಲೆಬ್ರೇಶನ್ ಮತ್ತು ಸಿನಿಮಾ ಕುರಿತು ಚರ್ಚೆ ಮಾಡೋಣ” ಎಂದಿದ್ದಾರೆ.
27
ಮಗಳು ನನಗಿಂತಲೂ ದೊಡ್ಡದಾಗಿ ಬೆಳೆಯುತ್ತಾಳೆ
“ನನ್ನ ಬಗ್ಗೆ ಅಥವಾ ನನ್ನ ಮಗಳ ಬಗ್ಗೆ ಮಾತನಾಡಿ ತಮ್ಮ ಸಮಯವನ್ನು ವ್ಯರ್ಥ ಮಾಡಿಕೊಳ್ಳುವವರಿಗಾಗಿ ನಾನು ನನ್ನ ಸಮಯವನ್ನು ವ್ಯರ್ಥ ಮಾಡುವುದಿಲ್ಲ. ನನ್ನ ಮಗಳು ನನ್ನಿಗಿಂತಲೂ ಹೆಚ್ಚು ಸ್ಟ್ರಾಂಗ್. ನಾನು ಜೀವನದಲ್ಲಿ ಎದುರಿಸಿದ ಸಮಸ್ಯೆಗಿಂತ ಹತ್ತುಪಟ್ಟು ಹೆಚ್ಚು ಅವಳು ಫೇಸ್ ಮಾಡುತ್ತಾಳೆ. ಭವಿಷ್ಯದಲ್ಲಿ ಅವಳು ನನ್ನಿಗಿಂತಲೂ ದೊಡ್ಡದಾಗಿ ಹತ್ತರಷ್ಟು ಬೆಳೆಯುತ್ತಾಳೆ ಎಂಬ ವಿಶ್ವಾಸ ನನಗೆ ಇದೆ” ಎಂದು ಸುದೀಪ್ ಹೇಳಿದರು.
37
ನನ್ನ ವಿರುದ್ಧ ಆರೋಪ ಮಾಡಬೇಕಾದರೆ ವಿಥ್ ಪ್ರೂಫ್ ಬೇಕು
ಕೆಲವರು ಉದ್ದೇಶಪೂರ್ವಕವಾಗಿ ಅರ್ಥವಿಲ್ಲದ ಹೇಳಿಕೆಗಳನ್ನು ನೀಡುತ್ತಿರುವುದರ ಬಗ್ಗೆ ಮಾತನಾಡಿದ ಅವರು, “ಸುದೀಪ್ ಪ್ಯಾಂಟ್ ಬಿಟ್ಟರೆ ಬೇರೆ ಏನು ಹಾಕಿಕೊಳ್ಳುವುದಿಲ್ಲ ಎನ್ನುವಂತಹ ಸಿಲ್ಲಿ ಮಾತುಗಳನ್ನು ನಾನು ಮಾಡೋದಿಲ್ಲ. ನಾನು ಬಿಚ್ಚಿ ತೋರಿಸಿಲ್ಲ, ಹಾಗೆ ಮಾಡುವ ಉದ್ದೇಶವೂ ಇಲ್ಲ. ಇಂಟೆಲಿಜೆನ್ಸ್ ಇಂದ ಬಂದಿದೆ ಅಂದ್ರೆ ಮಾಧ್ಯಮ ದಿಂದನೇ ಬಂದಿರಬಹುದು. ನಿಮ್ಮಲ್ಲೇ ಕೂತಿರುವ ಯಾರಾದರೂ ವ್ಯಕ್ತಿ ನನ್ನ ವಿರುದ್ಧ ಆರೋಪ ಮಾಡಬೇಕಾದರೆ, ಅದು ವಿಥ್ ಪ್ರೂಫ್ ಆಗಿರಬೇಕು. ಯಾವುದೇ ಕಮರ್ಷಿಯಲ್ ಉದ್ದೇಶವಿಲ್ಲದೆ ಹೇಳಿರುವುದಾದರೆ ಮಾತ್ರ ನಾನು ಅದನ್ನು ಪರಿಗಣಿಸುತ್ತೇನೆ” ಎಂದು ಹೇಳಿದರು.
ಸಿನಿಮಾ ಪೈರಸಿ ವಿಚಾರವಾಗಿ ಮಾತನಾಡಿದ ಸುದೀಪ್, “ಮೊದಲ ದಿನ ಮತ್ತು ಎರಡನೇ ದಿನ ಸೇರಿ ಸುಮಾರು 4 ಸಾವಿರ ಪೈರಸಿ ಲಿಂಕ್‌ಗಳನ್ನು ಡಿಲೀಟ್ ಮಾಡಿಸಿದ್ದೇವೆ. ಒಟ್ಟಾರೆ 9 ಸಾವಿರಕ್ಕೂ ಹೆಚ್ಚು ಲಿಂಕ್‌ಗಳನ್ನು ತೆಗೆಸಲಾಗಿದೆ. ಕಳೆದ ಬಾರಿ ಕೆಲವು ವ್ಯಕ್ತಿಗಳನ್ನು ಹಿಡಿದಿದ್ದೆವು. ಈ ಬಾರಿ ಬಿಡೋ ಮಾತೇ ಇಲ್ಲ. ಮೊದಲು ಪೈರಸಿ ಅಡಗಿಕೊಂಡು ನಡೆಯುತ್ತಿತ್ತು, ಈಗ ಚಾಲೆಂಜ್ ಹಾಕಿಕೊಂಡೇ ಮಾಡ್ತಿದ್ದಾರೆ. ಪೈರಸಿ ಎನ್ನುವ ವಿಚಾರ ಬಂದಾಗ ಸರ್ಕಾರವೂ ಮಧ್ಯಪ್ರವೇಶಿಸಬೇಕು. ಇದಕ್ಕೆ ಕಠಿಣ ಕಾನೂನು ಕ್ರಮ ಅಗತ್ಯ. ಕೆಲವರಿಗೆ ತಮ್ಮ ಸಿನಿಮಾಗೆ ಆಗಿದಾಗ ಮಾತ್ರ ಅದರ ನೋವು ಅರ್ಥವಾಗುತ್ತದೆ. ಇದಕ್ಕೆ ಪವರ್ ಇರುವ ವ್ಯಕ್ತಿ ಮುಂದೆ ಬರಬೇಕು” ಎಂದು ಸುದೀಪ್ ಅಭಿಪ್ರಾಯಪಟ್ಟರು.
57
ಟ್ರೋಲಿಂಗ್ ಬಗ್ಗೆ ಸುದೀಪ್ ಪ್ರತಿಕ್ರಿಯೆ
ಕೆಲವು ಚಾನೆಲ್‌ಗಳ ಲೋಗೋ ಮತ್ತು ಸ್ಕ್ರೀನ್‌ಶಾಟ್‌ಗಳನ್ನು ಬಳಸಿ ಟ್ರೋಲ್ ಮಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸುದೀಪ್, “ನಮ್ಮ ಜೊತೆಗೆ ನೀವು ಫೇಮಸ್ ಆಗಿದ್ದೀರಿ. ‘ಮಾರ್ಕ್’ ಸಿನಿಮಾಗೆ ಸಂಬಂಧಿಸಿದಂತೆ ಎರಡೆರಡು ಆರ್ಟಿಕಲ್‌ಗಳನ್ನು ನಾನು ನೋಡಿದ್ದೇನೆ. “24 ಗಂಟೆಗಳ ಮುಂಚೆಯೇ ಪೈರಸಿ ಬಗ್ಗೆ ಎಚ್ಚರಿಕೆ ನೀಡಿದ್ದೆ. ಅದಕ್ಕೂ ಮುಂಚೆ ನಮಗೆ ಮಾಹಿತಿ ಇತ್ತು. ಅಹಂಕಾರದಿಂದ ಮಾತನಾಡಿದರೆ, ಇಷ್ಟು ವರ್ಷಗಳ ಹಿಂದಿನ ಸುದೀಪ್ ಬೇರೆ, ಈಗ ನೀವು ನೋಡುತ್ತಿರುವ ಸುದೀಪ್ ಬೇರೆ” ಎಂದರು.
67
ಸಂಭ್ರಮ ಪ್ರೇಕ್ಷಕರದ್ದು, ನನ್ನದು ಅಲ್ಲ
“ಥಿಯೇಟರ್ ಮುಂದೆ ನಡೆಯುತ್ತಿರುವ ಸಂಭ್ರಮ ನೋಡಿದರೆ ಎಲ್ಲವೂ ಗೊತ್ತಾಗುತ್ತದೆ. ಅದು ನನ್ನ ಮನೆಯ ಸಂಭ್ರಮ ಅಲ್ಲ, ನನ್ನ ಬರ್ತ್‌ಡೇ ಕೂಡ ಅಲ್ಲ. ಪ್ರೇಕ್ಷಕರಿಗೆ ಸಂತೋಷ ಕೊಡುವ ಕೆಲಸ ಮಾಡುವುದು ನನ್ನ ಜವಾಬ್ದಾರಿ, ಅಷ್ಟೇ ಸರ್ ಎಂದರು. ಚಿತ್ರ ಬಿಡುಗಡೆ ಬಗ್ಗೆ ಮಾತನಾಡಿದ ಅವರು, “ಇದೀಗಷ್ಟೇ ಸಿನಿಮಾ ರಿಲೀಸ್ ಆಗಿದೆ. ಖುಷಿಯಲ್ಲಿ ನಾನು ಏನಾದರೂ ಹೇಳಿ, ಅದೇನೋ ಆಗೋದು ಬೇಡ. ಒಂದು ವಾರ ಆದ್ಮೇಲೆ ಸಿನಿಮಾ ಬಗ್ಗೆ ವಿವರವಾಗಿ ಮಾತನಾಡುತ್ತೇನೆ. ಪ್ರಶ್ನೆ–ಉತ್ತರ ಅಂತ ಹೇಳಿದ್ರು ಬಂದಿದ್ದೀನಿ, ಸಮಯ ಬಂದಾಗ ಖಂಡಿತ ಮಾತನಾಡುತ್ತೇನೆ” ಎಂದು ಹೇಳಿದರು.
77
‘ಮಾರ್ಕ್’ ಚಿತ್ರಕ್ಕೆ ಭಾರೀ ಮೆಚ್ಚುಗೆ
ಖಾಸಗಿ ಹೋಟೆಲ್‌ನಲ್ಲಿ ನಡೆದ ಮಾರ್ಕ್ ಚಿತ್ರದ ಪ್ರೆಸ್ ಮೀಟ್ ಕಾರ್ಯಕ್ರಮದಲ್ಲಿ ಮಾತನಾಡಿದ ಚಿತ್ರದ ನಿರ್ಮಾಪಕ ಸತ್ಯ ಜ್ಯೋತಿ ಫಿಲ್ಮ್ಸ್‌ನ ತ್ಯಾಗರಾಜನ್, “ನಾನು ತಮಿಳಿನಲ್ಲಿ ಈ ಸಿನಿಮಾವನ್ನು ನನ್ನ ಕುಟುಂಬದೊಂದಿಗೆ ನೋಡಿದೆ. ತುಂಬಾ ಖುಷಿಯಾಯಿತು. ಸುದೀಪ್ ಅವರ ಫ್ಯಾನ್ ಫಾಲೋಯಿಂಗ್ ನೋಡಿದಾಗ ನಮ್ಮ ಸೂಪರ್ ಸ್ಟಾರ್ ರಜಿನಿಕಾಂತ್ ನೆನಪಾದರು. ಈ ಸಿನಿಮಾ ಇಷ್ಟು ಚೆನ್ನಾಗಿರುತ್ತದೆ ಎಂದು ನಾನು ಊಹಿಸಿರಲಿಲ್ಲ. ಬಿಜಿಎಂ ಮತ್ತು ಸ್ಕ್ರೀನ್‌ಪ್ಲೇ ಅತ್ಯುತ್ತಮವಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.