ತೂಕ ಇಳಿಸಿಕೊಳ್ತಿರುವ ಕಿಚ್ಚ ಸುದೀಪ್ ಅವರ ಮಗಳು ಸಾನ್ವಿ ಸುದೀಪ್ ಏನು ಮಾಡುತ್ತಿದ್ದಾರೆ ಎಂದು ಕೆಲವರಿಗೆ ಆಶ್ಚರ್ಯ ಅನಿಸಬಹುದು.
ಇತ್ತೀಚೆಗೆ ಅವರು ತಂದೆ ಕಿಚ್ಚ ಸುದೀಪ್ ಜೊತೆ ಹೊಸ ಫೋಟೋಶೂಟ್ ಮಾಡಿಸಿಕೊಂಡು ಗಮನ ಸೆಳೆಯುತ್ತಿದ್ದಾರೆ.
ಅಂದಹಾಗೆ ಸುದೀಪ್ ಅವರ ಮಗಳು ಸಾನ್ವಿ ಅವರು ಸಂಗೀತದ ಕಡೆಗೆ ಮುಖ ಮಾಡುತ್ತಿದ್ದಾರೆ.
ಬೆಂಗಳೂರಿನಲ್ಲಿಯೇ ಪಿಯುಸಿ ಓದಿದ್ದ ಅವರಿಗೆ ಮುಂದೆ ಮತ್ತಷ್ಟು ಓದಲು ಆಸಕ್ತಿಯೇ ಬರಲಿಲ್ಲ.
ಕುಟುಂಬಪೂರ್ತಿ ಮನರಂಜನೆ ಕ್ಷೇತ್ರದಲ್ಲಿದೆ. ಹೀಗಾಗಿಯೋ ಏನೋ ಅವರಿಗೆ ಮನರಂಜನೆ ಕ್ಷೇತ್ರದಲ್ಲಿ ಸಾಧನೆ ಮಾಡುವ ಆಸೆಯಂತೆ.
4 ತಿಂಗಳುಗಳ ಕಾಲ ಸಾನ್ವಿ ಸುದೀಪ್ ಅವರು ಅನ್ನಪೂರ್ಣ ಸ್ಟುಡಿಯೋದಲ್ಲಿ ಆಕ್ಟಿಂಗ್ ಕೋರ್ಸ್ ಮಾಡಿದ್ದರು
ಈಗ ಅವರು ಹಾಡಿನ ಕಡೆಗೆ ಮುಖ ಮಾಡುತ್ತಿದ್ದಾರೆ, ಇನ್ನಷ್ಟು ಸಂಗೀತ ಕಲಿಯುವ ಆಸಕ್ತಿ ಹೊಂದಿದ್ದಾರೆ. ನಟ ನಾನಿ ಅವರ ʼಹಿಟ್ 3’ ಸಿನಿಮಾದಲ್ಲಿ ಸಾನ್ವಿ ಅವರು ಒಂದು ಹಾಡು ಹಾಡಿದ್ದರು.
ಜಿಮ್‌ಗೆ ಹೋಗಿ, ಡಯೆಟ್ ಮಾಡಿ ಸಾನ್ವಿ ಸುದೀಪ್ ಅವರು ಸಣ್ಣಗಾಗಿದ್ದಾರೆ.
ಸಾನ್ವಿ ಸುದೀಪ್ ಅವರು ಯಾವಾಗ ತೆರೆ ಮೇಲೆ ಕಾಣಿಸಿಕೊಳ್ತಾರೆ ಎಂದು ಕಾದು ನೋಡಬೇಕಿದೆ.
ಸೂಪರ್ ಹಿಟ್ 'ರಂಗಿತರಂಗ' ರಿಜೆಕ್ಟ್ ಮಾಡಿ, ಹಿಟ್ ಸಿನಿಮಾ ಕಳ್ಕೊಂಡ ನಟ ಯಾರು?
ಪ್ರೀತಿಗೋಸ್ಕರ ಅಂತರ್‌ಧರ್ಮೀಯ ಮದುವೆಯಾದ ಕನ್ನಡದ ನಟ-ನಟಿಯರಿವರು!
ಸಿನಿಮಾ ರಿಲೀಸ್ ಆಗ್ತಿದ್ದಂತೆ ಕಣ್ಮರೆಯಾಗೋದ್ಯಾಕೆ ನಟ Rakshith Shetty ?
ಗೋಲ್ಡನ್ ಬ್ಯೂಟಿ ಅಮೂಲ್ಯ ಮುದ್ದಾದ ಫ್ಯಾಮಿಲಿ ಫೋಟೊ ಶೂಟ್