ನನ್ನ ನಿರ್ದೇಶನದ ಚಿತ್ರಕ್ಕೆ ಕತೆ ರೆಡಿ ಇದೆ: ಅಭಿಮಾನಿಗಳಿಗೆ ಸರ್ಪ್ರೈಸ್‌ ಕೊಟ್ಟ ಕಿಚ್ಚ ಸುದೀಪ್‌

Published : Sep 03, 2025, 12:41 PM IST

ಮಾರ್ಕ್‌’ ಹಾಗೂ ‘ಬಿಲ್ಲ ರಂಗ ಬಾಷಾ’ ಚಿತ್ರಗಳಿವೆ. ‘ಮಾರ್ಕ್‌’ ಚಿತ್ರ ಡಿ. 25ಕ್ಕೆ ತೆರೆಗೆ ಬರಲಿದೆ. ‘ಬಿಲ್ಲ ರಂಗ ಬಾಷಾ’ ಚಿತ್ರದ ಶೂಟಿಂಗ್‌ ಅಕ್ಟೋಬರ್‌ನಲ್ಲಿ ಶುರುವಾಗಲಿದ್ದು, 2026ರ ಕೊನೆಯಲ್ಲಿ ಸಿನಿಮಾ ತೆರೆಗೆ ಬರಲಿದೆ.

PREV
17

‘ನಾನು ನಿರ್ದೇಶನ ಮಾಡುವುದಕ್ಕಾಗಿಯೇ ಒಂದು ಕತೆ ಮಾಡಿಕೊಂಡಿದ್ದೇನೆ. ಅದರ ಸ್ಕ್ರೀನ್‌ ಪ್ಲೇ ಕೆಲಸಗಳು ಕೂಡ ನಡೆಯುತ್ತಿವೆ.’ಹೀಗೆ ಹೇಳುವ ಮೂಲಕ ಸದ್ಯದಲ್ಲೇ ನಿರ್ದೇಶನದ ಅಖಾಡಕ್ಕಿಳಿಯುವ ಸೂಚನೆ ಕೊಟ್ಟಿದ್ದಾರೆ ಕಿಚ್ಚ ಸುದೀಪ್‌.

27

ಸದ್ಯಕ್ಕೆ ಸುದೀಪ್ ಕೈಯಲ್ಲಿ ‘ಮಾರ್ಕ್‌’ ಹಾಗೂ ‘ಬಿಲ್ಲ ರಂಗ ಬಾಷಾ’ ಚಿತ್ರಗಳಿವೆ. ‘ಮಾರ್ಕ್‌’ ಚಿತ್ರ ಡಿ. 25ಕ್ಕೆ ತೆರೆಗೆ ಬರಲಿದೆ. ‘ಬಿಲ್ಲ ರಂಗ ಬಾಷಾ’ ಚಿತ್ರದ ಶೂಟಿಂಗ್‌ ಅಕ್ಟೋಬರ್‌ನಲ್ಲಿ ಶುರುವಾಗಲಿದ್ದು, 2026ರ ಕೊನೆಯಲ್ಲಿ ಸಿನಿಮಾ ತೆರೆಗೆ ಬರಲಿದೆ. ಈ ಎರಡೂ ಚಿತ್ರಗಳ ನಡುವೆ ಮತ್ತೊಂದು ಸಿನಿಮಾ ತೆರೆಗೆ ತರುವುದಾಗಿ ಸುದೀಪ್‌ ಹೇಳಿಕೊಂಡಿದ್ದಾರೆ.

37

ಈ ಕುರಿತು ಸುದೀಪ್‌, ‘ಬೇರೆಯವರ ನಿರ್ದೇಶನದ ಚಿತ್ರಗಳಲ್ಲಿ ನಟಿಸುತ್ತಲೇ ನನಗಾಗಿ, ನನ್ನ ನಿರ್ದೇಶನದಲ್ಲೇ ಸಿನಿಮಾ ಮಾಡುವುದಕ್ಕಾಗಿ ಒಂದು ಕತೆ ಮಾಡಿಕೊಂಡಿದ್ದೇನೆ. ಅದು ನನಗೆ ತುಂಬಾ ಖುಷಿ ಕೊಟ್ಟಿರುವ ಕತೆ. ನನ್ನ ಸ್ಟೈಲಿನ. ನಿರ್ದೇಶನದ ತಯಾರಿ ಶುರುವಾಗಲಿದೆ’ ಎಂದಿದ್ದಾರೆ.

47

ಮಾರ್ಕ್‌ ಮತ್ತು ಬಿಆರ್‌ಬಿ ಫಸ್ಟ್ ಲುಕ್: ಸುದೀಪ್‌ ಹುಟ್ಟುಹಬ್ಬದ ಅಂಗವಾಗಿ ವಿಜಯ್‌ ಕಾರ್ತಿಕೇಯ ನಿರ್ದೇಶನದ ‘ಮಾರ್ಕ್‌’ ಚಿತ್ರದ ಟೈಟಲ್‌ ಟೀಸರ್‌ ಬಿಡುಗಡೆಯಾಗಿದ್ದು, 38 ಲಕ್ಷ ಹಿಟ್ಸ್‌ ದಾಖಲಿಸಿದೆ. ಜೊತೆಗೆ ಅನೂಪ್‌ ಭಂಡಾರಿ ನಿರ್ದೇಶನದ ‘ಬಿಲ್ಲ ರಂಗ ಬಾಷಾ’ ಚಿತ್ರದ ಪೋಸ್ಟರ್‌ ಕೂಡ ಬಿಡುಗಡೆ ಆಗಿದೆ.

57

ಅಭಿಮಾನಿಗಳ ಜೊತೆಗೆ ಸಂಭ್ರಮ: ಸುದೀಪ್‌ ಅವರು ಬೆಂಗಳೂರಿನ ನಂದಿ ಲಿಂಕ್ಸ್‌ ಗ್ರೌಂಡ್‌ನಲ್ಲಿ ಅಭಿಮಾನಿಗಳ ಜೊತೆಗೆ ತಮ್ಮ 52ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಸೋಮವಾರ ರಾತ್ರಿಯಿಂದಲೇ ನಡುರಾತ್ರಿವರೆಗೂ ನಡೆದ ‘ಕಿಚ್ಚೋತ್ಸವ’ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಅಭಿಮಾನಿಗಳೇ ತಂದಿದ್ದ ಕೇಕ್‌ ಅನ್ನು ಸುದೀಪ್‌ ಕತ್ತರಿಸಿದರು.

67

ಬಿಗ್‌ಬಾಸ್‌ ಶುರು: ಕಿಚ್ಚ ಸುದೀಪ್‌ ಸಾರಥ್ಯದ ‘ಬಿಗ್‌ಬಾಸ್‌ ಸೀಸನ್‌ 12’ ಸೆಪ್ಟೆಂಬರ್‌ 28ಕ್ಕೆ ಅದ್ದೂರಿ ಆರಂಭ ಕಾಣಲಿದೆ. ಈ ಪ್ರೋಮೋವನ್ನು ಕಲರ್ಸ್‌ ಕನ್ನಡ ಬಿಡುಗಡೆ ಮಾಡಿದೆ. ಇದರಲ್ಲಿ ನಾಡಿನ ಸಾಂಸ್ಕೃತಿಕ ವೈವಿಧ್ಯದ ಜೊತೆಗೆ ಕಿಚ್ಚ ಸುದೀಪ್‌ ಅವರ ‘ಬಿಗ್‌ಬಾಸ್‌ ಸೀಸನ್‌ 12’ನ ಲುಕ್ ಅನ್ನೂ ರಿವೀಲ್‌ ಮಾಡಲಾಗಿದೆ.

77

‘ನನ್ನ ಪ್ರೀತಿಯ ಸಮಸ್ತ ಕನ್ನಡಿಗರ ಕುಟುಂಬಕ್ಕೆ ಸ್ವಾಗತ. ಬಿಗ್‌ಬಾಸ್‌ ಹೊಸ ಸೀಸನ್‌ಗೆ ಏಳು ಕೋಟಿ ಕನ್ನಡಿಗರು ರೆಡಿ, ನಾನೂ ರೆಡಿ’ ಎಂಬ ಕಿಚ್ಚ ಸುದೀಪ್‌ ಮಾತೂ ಪ್ರೊಮೋದಲ್ಲಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories