ಅಬ್ಬಬ್ಬಾ.. ಸಿನಿಮಾ ನನ್ನ ಮೊದಲ ಪ್ರೀತಿ ಎನ್ನುವ ಕಿಚ್ಚ ಸುದೀಪ್ ಒಪ್ಪಿಕೊಂಡಿರುವ ಸಿನಿಮಾಗಳ ಸಂಖ್ಯೆ ಎಷ್ಟು?

Published : Jun 11, 2026, 04:36 PM IST

ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಜೂನ್ 26ರಿಂದ ‘ಬಿಲ್ಲಾ ರಂಗ ಬಾಷಾ’ ಶೂಟಿಂಗ್ ಆರಂಭವಾಗಲಿದ್ದು, ಒಟ್ಟಿಗೆ 4 ಹೊಸ ಸಿನಿಮಾಗಳಿಗೆ ಒಪ್ಪಿಗೆ ನೀಡಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ.

PREV
15
ಸಿನಿಮಾ ಕೆಲಸ ಆರಂಭ

ಕಿಚ್ಚ ಸುದೀಪ್‌ ಒಟ್ಟೊಟ್ಟಿಗೆ ನಾಲ್ಕೈದು ಸಿನಿಮಾ ಸ್ಕ್ರಿಪ್ಟ್‌ ಒಪ್ಪಿಕೊಂಡಿದ್ದಾರೆ, ಶೀಘ್ರ ಸಿನಿಮಾ ಕೆಲಸ ಆರಂಭಿಸಲಿದ್ದಾರೆ. ಸ್ವತಃ ಕಿಚ್ಚ ಸುದೀಪ್‌ ಅಧಿಕೃತವಾಗಿ ಘೋಷಿಸಿದ್ದಾರೆ.

25
ಕೆಲಸಗಳಲ್ಲಿ ಬ್ಯುಸಿ

ಜೂ.26ರಂದು ಅನೂಪ್‌ ಭಂಡಾರಿ ನಿರ್ದೇಶನದ ‘ಬಿಲ್ಲಾ ರಂಗ ಬಾಷಾ’ ಸಿನಿಮಾ ಶೂಟಿಂಗ್‌ ಆರಂಭಿಸುತ್ತಿರುವುದಾಗಿಯೂ ಸುದೀಪ್‌ ತಿಳಿಸಿದ್ದಾರೆ. ಕೊಂಚ ಸಮಯ ಬೇರೆ ಕೆಲಸಗಳಲ್ಲಿ ಬ್ಯುಸಿ ಇದ್ದೆ.

35
ಲಘುವಾಗಿ ತೆಗೆದುಕೊಂಡಿದ್ದೇನೆ

ಇದರರ್ಥ ಅಭಿಮಾನಿಗಳಾದ ನಿಮ್ಮ ಪ್ರೀತಿಯನ್ನು ಕಡೆಗಣಿಸಿದ್ದೇನೆಂದಲ್ಲ ಅಥವಾ ನನ್ನನ್ನು ಹರಸುತ್ತ ಬಂದಿರುವ ಸಿನಿಮಾಕ್ಷೇತ್ರವನ್ನು ಲಘುವಾಗಿ ತೆಗೆದುಕೊಂಡಿದ್ದೇನೆ ಎಂದಲ್ಲ.

45
ನಿಮ್ಮ ಪ್ರೀತಿಗೆ ಸಾಕ್ಷಿ

ಸಿನಿಮಾ ಮಾಡುವುದು, ಕಥೆ ಕೇಳುವುದು ನಿಮ್ಮನ್ನು ಮನರಂಜಿಸುವುದಕ್ಕಿಂತ ಹೆಚ್ಚಿನ ಪ್ರೀತಿ ಬೇರೆ ಯಾವುದರಲ್ಲೂ ಇಲ್ಲ. ನನ್ನನ್ನು ಎಚ್ಚರಿಸುವ ನಿಮ್ಮ ಪ್ರಯತ್ನಗಳು ನನ್ನ ಕೆಲಸದ ಮೇಲಿರುವ ನಿಮ್ಮ ಪ್ರೀತಿಗೆ ಸಾಕ್ಷಿಯಂತಿವೆ.

55
4 ಕತೆಗಳಿಗೆ ಒಪ್ಪಿಗೆ

ಬಿಆರ್‌ಬಿ ಶೂಟಿಂಗ್‌ ಈ ತಿಂಗಳಲ್ಲೇ ಆರಂಭವಾಗುತ್ತಿದೆ. ಸಿನಿಮಾದಲ್ಲಿ ನಿರಂತರತೆ ಕಾಯ್ದುಕೊಳ್ಳುವ ಪ್ರಯತ್ನವಾಗಿ 4 ಕತೆಗಳಿಗೆ ಒಪ್ಪಿಗೆ ಸೂಚಿಸಿದ್ದು, ಶೀಘ್ರದಲ್ಲೇ ಆ ಸಿನಿಮಾಗಳ ಕೆಲಸ ಆರಂಭಿಸಲು ಉತ್ಸುಕನಾಗಿದ್ದೇನೆ ಎಂದು ಸುದೀಪ್‌ ತಿಳಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories