‘ಹುಚ್ಚ’ನ ಅಭಿಷ್ಟೆ ಶೋಬಿತೆ ಪ್ರಸನ್ನಾಕ್ಷಿ ಆಲಿಯಾಸ್ ಜಿಂಕೆಮರಿ ರೇಖಾ ಈಗ ಹೇಗಿದ್ದಾರೆ?

Published : Jun 09, 2026, 10:55 PM IST

Chithra Rekha: ಹುಚ್ಚ, ಚಿತ್ರ, ಚೆಲ್ಲಾಟ, ತುಂಟಾಟ ಸಿನಿಮಾಗಳ ಮೂಲಕ ಜನಪ್ರಿಯತೆ ಪಡೆದ ನಟಿ ರೇಖಾ, ಕನ್ನಡ ಚಿತ್ರರಂಗದಿಂದ ದೂರ ಸರಿದು ವರ್ಷಗಳೇ ಕಳೆದಿವೆ. ಈಗ ನಟಿ ಎಲ್ಲಿದ್ದಾರೆ? ಏನು ಮಾಡ್ತಿದ್ದಾರೆ. ಇಲ್ಲಿದೆ ನಟಿಯ ಬ್ಯೂಟಿಫುಲ್ ಚಿತ್ರಗಳು. 

PREV
16
ಕಿಚ್ಚನ ನಾಯಕಿ ರೇಖಾ

ನಟಿ ರೇಖಾ ಕನ್ನಡ ಚಿತ್ರರಂಗದಲ್ಲಿ ದಶಕಗಳ ಕಾಲ ತಮ್ಮ ವಿಭಿನ್ನ ಮ್ಯಾನರಿಸಂ, ಪಾತ್ರಗಳ ಮೂಲಕ ಇದ್ದು ಗೆದ್ದವರು. ಆದರೆ ಹತ್ತುವರ್ಷಗಳಿಂದೀಚೆಗೆ ನಟಿ ಕನ್ನಡ ಸಿನಿಮಾಗಳಿಂದ ಅಂತರ ಕಾಯ್ದುಕೊಂಡರು. ಒಂದು ಕಾಲದಲ್ಲಿ ಕನ್ನಡ, ತಮಿಳು, ತೆಲುಗು ಸಿನಿಮಾಗಳಲ್ಲಿ ಮಿಂಚಿದ ರೇಖಾ ಈಗ ಎಲ್ಲಿದ್ದಾರೆ?

26
ಸಿನಿಮಾಕ್ಕೆ ಕಾಲಿಟ್ಟ ತಕ್ಷಣವೇ ನಾಲ್ಕು ಸಿನಿಮಾ ರಿಲೀಸ್

ಮಾಡೆಲಿಂಗ್ ಲೋಕದಲ್ಲಿ ಗುರುತಿಸಿಕೊಂಡಿದ್ದ ರೇಖಾ, 2001ರಲ್ಲಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು. ಆ ವರ್ಷವೇ ಬರೋಬ್ಬರಿ ನಾಲ್ಕು ಸಿನಿಮಾಗಳಲ್ಲಿ ರೇಖಾ ನಟಿಸಿದ್ದರು. ಅದರಲ್ಲಿ ಮೂರು ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್ ಆಗಿದ್ದವು. ಅದರಲ್ಲಿ ಎರಡು ಕನ್ನಡ ಹಾಗೂ ಒಂದು ತಮಿಳು ಸಿನಿಮಾವೂ ಸೇರಿದೆ.

36
ಚಿತ್ರ ಸಿನಿಮಾ ಮೂಲಕ ನಟನೆ ಆರಂಭ

ರೇಖಾ ವೇದವ್ಯಾಸ್ ಮೊದಲಿಗೆ ಸಹಿ ಮಾಡಿದ ಸಿನಿಮಾ 'ಚಿತ್ರ’ ಇದು ಕಾಲೇಜ್ ಡ್ರಾಮಾ ಸಿನಿಮಾವಾಗಿತ್ತು. ಇದಾದ ಬಳಿಕ ಕಿಚ್ಚ ಸುದೀಪ ಜೊತೆಗೆ 'ಹುಚ್ಚ’ ಸಿನಿಮಾಗೆ ಸಹಿ ಹಾಕಿದ್ದರು. ಈ ಸಿನಿಮಾ ಮೊದಲು ರಿಲೀಸ್ ಆಗಿ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಇದರ ಜೊತೆಗೆ ಚಿತ್ರ ಹಾಗೂ ತೆಲುಗಿನ ‘ಅನಂದಮ್’ ಸಿನಿಮಾ ಕೂಡ ಸೂಪರ್ ಹಿಟ್ ಆಗಿತ್ತು.

46
ಆನಂದಮ್ ರೇಖಾ

ಕನ್ನಡ ಚಿತ್ರರಂಗದಲ್ಲಿ ರೇಖಾ, ರೇಖಾ ವೇದವ್ಯಾಸ್ ಆಗಿ ಗುರುತಿಸಿಕೊಂಡಿದ್ದವರು, ತೆಲುಗಿನ ‘ಆನಂದಮ್’ ಸಿನಿಮಾ 200 ದಿನಗಳ ಕಾಲ ಪ್ರದರ್ಶನಗೊಂಡು ಸೂಪರ್ ಹಿಟ್ ಆದ ಬಳಿಕ ತಮ್ಮ ಹೆಸರನ್ನು ಇಂದಿಗೂ ಆನಂದಮ್ ರೇಖಾ ಅಂತಾನೆ ಸೋಶಿಯಲ್ ಮೀಡಿಯಾದಲ್ಲಿ ಇಟ್ಟುಕೊಂಡಿದ್ದಾರೆ.

56
ರೇಖಾ ನಟಿಸಿದ ಸಿನಿಮಾಗಳು

‘ಚಿತ್ರ’, ‘ತುಂಟಾಟ’, ‘ಮೋನಲಿಸಾ’, ಹುಡುಗಾಟ, ‘ಚೆಲ್ಲಾಟ’ ‘ಪರಿಚಯ’, ‘ಬಾಸ್’, ‘ಬೆಂಕಿ ಬಿರುಗಾಳಿ’, ‘ಲೂಸ್ಗಳು’, ‘ಪರಮಶಿವ’ ಹೀಗೆ ಹಲವು ಸಿನಿಮಾಗಳಲ್ಲಿ ರೇಖಾ ನಟಿಸಿದ್ದರು. ಇಷ್ಟೆಲ್ಲ ಯಶಸ್ಸಿನ ತುದಿಯಲ್ಲಿದ್ದ ಚೆಲುವೆ ರೇಖಾ ವೇದವ್ಯಾಸ್ ಇದ್ದಕ್ಕಿದ್ದಂತೆ ಚಿತ್ರರಂಗದಿಂದ ಮಾಯವಾಗಿಬಿಟ್ಟರು. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಚೆಲುವೆ ಇದೀಗ ಹೊಸದಾದ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

66
ಹಳದಿ ಸೀರೆಯಲ್ಲಿ ಚೆಲುವೆ

ನಟಿ ರೇಖಾ ಹಳದಿ ಸೀರೆಯುಟ್ಟಿರುವ ಫೋಟೊಗಳನ್ನು ಶೇರ್ ಮಾಡಿದ್ದು,ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದಾರೆ. 20 ವರ್ಷಗಳ ಹಿಂದೆ ಸಿನಿಮಾಗೆ ಎಂಟ್ರಿ ಕೊಟ್ಟಾಗ ನಟಿ ಹೇಗಿದ್ದರೋ, ಈವಾಗ್ಲೂ ಹಾಗೆಯೇ ಇದ್ದಾರೆ ಅನಿಸುತ್ತಿದೆ. ಅಭಿಮಾನಿಗಳು ನಟಿಯ ಫೋಟೊ ನೋಡಿ ‘ಜಿಂಕೆ ಮರಿ ಓಡ್ತಾತೆ ನೋಡ್ಲಾ ಮಗ, ಮಂದಾಕಿನಿಯೇ, ಉಸಿರೇ ಉಸಿರೇ ಹಾಡುಗಳನ್ನು ಅದರಲ್ಲಿನ ನಟಿಯ ಪಾತ್ರವನ್ನು ನೆನಪಿಸಿಕೊಂಡು ಸಂಭ್ರಮಿಸುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories