'ಮ್ಯಾಂಗೋ ಪಚ್ಚ' ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿರುವ ಅಳಿಯ ಸಂಚಿತ್ ಕುರಿತ ನೆಪೋಟಿಸಂ ಪ್ರಶ್ನೆಗೆ ನಟ ಸುದೀಪ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಅಣ್ಣಾವ್ರ ಕಾಲದಿಂದಲೂ ಇದ್ದು, ಜನರ ಒಪ್ಪಿಗೆ ಮಾತ್ರ ಇಲ್ಲಿ ಮುಖ್ಯವಾಗುತ್ತದೆ ಹೊರತು ನೆಪೋಟಿಸಂ ಪದಕ್ಕೆ ಇಲ್ಲಿ ಅರ್ಥವಿಲ್ಲ ಎಂದರಯ
ನೆಪೋಟಿಸಂ ಎನ್ನುವ ಮಾತು ಸಿನಿಮಾ ಇಂಡಸ್ಟ್ರಿಯಲ್ಲಿ ಬಹಳ ಹಿಂದಿನಿಂದಲೂ ಕೇಳಿಕೊಂಡಿರುವ ಬಂದಿರುವ ಮಾತು. ಮನೆಯಲ್ಲಿ ಅಪ್ಪ-ಅಮ್ಮ ನಟ, ನಟಿಯರಾಗಿದ್ದರೆ ಮಕ್ಕಳಿಗೂ ಸುಲಭದಲ್ಲಿ ಈ ಇಂಡಸ್ಟ್ರಿಯಲ್ಲಿ ಅವಕಾಶ ಸಿಗುತ್ತದೆ, ಬೇರೆಯವರು ಬೆಳೆಯುವುದು ಕಷ್ಟ ಎನ್ನುವ ಮಾತಿದು. ಇದೀಗ ಇದೇ ಮಾತು ಕಿಚ್ಚ ಸುದೀಪ್ ಅವರಿಗೂ ಎದುರಾದಾಗ ಸ್ವಲ್ಪ ಖಾರವಾಗಿಯೇ ನುಡಿದಿದ್ದಾರೆ ಸುದೀಪ್.
26
'ಮ್ಯಾಂಗೋ ಪಚ್ಚ'ದಲ್ಲಿ ಸುದೀಪ್ ಅಕ್ಕನ ಮಗ
ಅಷ್ಟಕ್ಕೂ, ಸುದೀಪ್ ಅಕ್ಕನ ಮಗ ಸಂಚಿತ್ 'ಮ್ಯಾಂಗೋ ಪಚ್ಚ' ಸಿನಿಮಾದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಸಿನಿಮಾದ ಪ್ರಚಾರದ ಸಮಯದಲ್ಲಿ, ಸುದೀಪ್ ಅವರಿಗೆ ಪತ್ರಕರ್ತರು ನೆಪೋಟಿಸಂ ಬಗ್ಗೆ ಪ್ರಶ್ನೆ ಕೇಳಿದಾಗ, ಸಹಜವಾಗಿ ಇದು ಸುದೀಪ್ ಅವರನ್ನು ಕೆರಳಿಸಿದೆ.
36
ಶಿವರಾಜ್ ಕುಮಾರ್ ಅವರಿಗೂ ಕೇಳ್ತೀರಾ?
ಈ ಪ್ರಶ್ನೆ ನನ್ನನ್ನು ಮಾತ್ರ ಯಾಕೆ ಕೇಳ್ತೀರಾ? ಇದೇ ಪ್ರಶ್ನೆಯನ್ನು ಶಿವರಾಜ್ ಕುಮಾರ್ ಅವರಿಗೂ ಕೇಳ್ತೀರಾ ಎಂದು ಪ್ರಶ್ನಿಸಿದ್ದಾರೆ. ನೆಪೋಟಿಸಂ ಅಣ್ಣಾವ್ರ ಕಾಲದಿಂದಲೇ ಶುರುವಾಗಿತ್ತಲ್ಲ. ಅವರಿಗೆ ಯಾಕೆ ಪ್ರಶ್ನೆ ಕೇಳಲ್ಲ. ರಾಜ್ಕುಮಾರ್ ಅವರ ಮಕ್ಕಳಿಗೂ ಕೇಳಬೇಕು, ಅಂಬಾನಿ ಅವರಿಗೂ ಕೇಳಬೇಕು. ನೀವು ಹಾಗೆ ಯಾಕೆ ಮಾಡಲ್ಲ ಎಂದ ಪ್ರಶ್ನಿಸಿದ್ದಾರೆ.
ಬಾಂಬೆನಲ್ಲಿ ಹುಟ್ಟಿರೋ ಯಾವುದೋ ಒಂದು ಶಬ್ದ (ನೆಪೋಟಿಸಂ) ಇಲ್ಲಿ ಹೇಳೋದು ತಪ್ಪು. ಅಣ್ಣಾವ್ರ ಕಾಲದಿಂದಲೇ ಇದು ಇದೆ. ಯಾರ ಮಕ್ಕಳಿಗೆ ಕಲೆ ಒಲಿಯುತ್ತದೆಯೋ, ಯಾರನ್ನು ಜನರು ನೋಡಲು ಇಷ್ಟಪಡುತ್ತಾರೋ ಅವರು ಇಂಡಸ್ಟ್ರಿಗೆ ಬರುತ್ತಾರೆ. ಕನ್ನಡ ಜನ ಇಷ್ಟಪಟ್ಟರೆ ಮುಗೀತು. ಇದು ಯಾರ ಜಾಗ ಬೇಕಾದರೂ ಆಗಬಹುದು ಎಂದು ತಮ್ಮ ಮಾತಿಗೆ ಸುದೀಪ್ ಸ್ಪಷ್ಟನೆ ನೀಡಿದ್ದಾರೆ.
56
ಶಿವಣ್ಣ, ಅಪ್ಪು ಸ್ಫೂರ್ತಿ
ಇವತ್ತು ಶಿವಣ್ಣ ಮೇರು ನಟನಾಗಿ ಬೆಳೆದಿದ್ದಾರೆ. ನಾವು ಅವರಿಂದ ಸ್ಫೂರ್ತಿ ಪಡೆದು ಬೆಳೆದವರು. ಅಪ್ಪು ಅವರು ಎಂತಹ ಅದ್ಭುತ ಪ್ರತಿಭೆ ಎನ್ನುವುದು ಎಲ್ಲರಿಗೂ ಗೊತ್ತು. ಇವುಗಳಿಗೆ ನೆಪೋಟಿಸಂ ಅನ್ನೋದು ಬರಬಾರದು, ಅವರಿಂದ ಸ್ಫೂರ್ತಿ ಪಡೆದವರು ಸಾಕಷ್ಟು ಜನ ಇದ್ದಾರೆ ಎಂದು ಸುದೀಪ್ ಹೇಳಿದ್ದಾರೆ.
66
ನನ್ನ ಮನೆಯಿಂದ ಬಂದಿರೋದು ಇವರು
ನನ್ನ ಮನೆಯಿಂದ ಸಂಚಿತ್ ಬಂದಿದ್ದಾನೆ. ಅವನನ್ನು ಬಿಟ್ಟು ಅಕ್ಕನ ಮಕ್ಕಳು, ನನ್ನ ಕಸೀನ್ಸ್ ಮಕ್ಕಳು ಸಾಕಷ್ಟು ಜನ ಇದ್ದಾರೆ. ಯಾರು ಚಿತ್ರರಂಗಕ್ಕೆ ಬಂದಿಲ್ಲ. ಮಗಳು ಚೆನ್ನಾಗಿ ಹಾಡ್ತಾಳೆ, ಹಾಗಾಗಿ ಬಂದಿದ್ದಾಳೆ. ಸಂಚಿತ್‌ಗೆ ನಟನೆಯಲ್ಲಿ ಆಸಕ್ತಿಯಿದೆ, ಬಂದಿದ್ದಾನೆ. ನೆಪೋಟಿಸಂ ಎನ್ನುವ ಪದ ಸುಮಾರು ವರ್ಷಗಳಿಂದ ನಮಗೆ ಸೂಟ್ ಆಗಲ್ಲ. ಕೆಲವರಿಗೆ ಆ ಪದದ ಅರ್ಥ ಕೂಡ ಗೊತ್ತಿಲ್ಲ. ಗೊತ್ತಿರುವುದು ಕಲೆ ಮಾತ್ರ ಎಂದು ತೀಕ್ಷ್ಮ ಉತ್ತರ ನೀಡಿದ್ದಾರೆ ಕಿಚ್ಚ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.