ಕ್ಯಾನ್ಸರ್‌ನಿಂದ ಬಳಲುತ್ತಿರುವ ಪುಟ್ಟ ಅಭಿಮಾನಿಯನ್ನು ಭೇಟಿಯಾದ ಕಿಚ್ಚ ಸುದೀಪ್‌

Published : Jul 06, 2023, 09:39 AM IST

ಅಭಿಮಾನಿಗೆ ಡಬಲ್ ಪ್ರೀತಿ ಕೊಟ್ಟ ಕಿಚ್ಚ ಸುದೀಪ್. ಆಟೋಗ್ರಾಫ್‌ ಮತ್ತು ಗಿಫ್ಟ್‌ ಕೊಟ್ಟು ಯೋಗ ಕ್ಷೇಮ ವಿಚಾರಿಸಿದ ನಟ

PREV
15
 ಕ್ಯಾನ್ಸರ್‌ನಿಂದ ಬಳಲುತ್ತಿರುವ ಪುಟ್ಟ ಅಭಿಮಾನಿಯನ್ನು ಭೇಟಿಯಾದ ಕಿಚ್ಚ ಸುದೀಪ್‌

 ಸಾಕ್ಷಿ ಮೂರನೇ ಕ್ಲಾಸ್ ಓದುತ್ತಿರುವ ಒಂಭತ್ತು ವರ್ಷದ ಪುಟ್ಟ ಹುಡುಗಿ. ಬೋನ್‌ ಕ್ಯಾನ್ಸರ್‌ಗೆ ತುತ್ತಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. 

25

ಅವಳಿಗೆ ಸುದೀಪ್‌ ಅಂದರೆ ಬಹಳ ಇಷ್ಟ. ಸುದೀಪ್‌ ನಟನೆಯ ‘ರನ್ನ’ ಸಿನಿಮಾದ ‘ತಿತಲಿ’ ಹಾಡು ಈಕೆಗೆ ಅಚ್ಚುಮೆಚ್ಚು. ಸದ್ಯ ಸಾಕ್ಷಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ. 

35

ಆದರೂ ಆಕೆಗೆ ತನ್ನ ನೆಚ್ಚಿನ ನಟ ಸುದೀಪ್‌ ಅವರನ್ನು ಕಣ್ಣಾರೆ ನೋಡುವ ಆಸೆ. ಈ ಪುಟ್ಟ ಬಾಲೆಯ ಕನವರಿಕೆ ಸುದೀಪ್‌ಗೂ ತಲುಪಿದೆ. 

45

ತನ್ನ ಬ್ಯುಸಿ ಶೆಡ್ಯೂಲ್‌ನ ನಡುವೆ ಬಿಡುವು ಮಾಡಿಕೊಂಡು ಅವರು ಈ ಪುಟಾಣಿ ಅಭಿಮಾನಿಯನ್ನು ಭೇಟಿ ಮಾಡಿದ್ದಾರೆ.
ಆಕೆಯ ಜೊತೆಗೆ ಸಮಯ ಕಳೆದಿದ್ದಾರೆ. ಆಟೋಗ್ರಾಫ್ ನೀಡಿದ್ದಾರೆ. 

55

ಆಕೆಯ ಚಿಕಿತ್ಸೆಗೂ ಸಹಾಯಹಸ್ತ ಚಾಚಿದ್ದಾರೆ. ತನ್ನ ನೆಚ್ಚಿನ ನಟನ ಭೇಟಿ ಮಾಡಿದ ಸಾಕ್ಷಿ ಮುಖದಲ್ಲಿ ನೋವಲ್ಲೂ ನಗು ಮೂಡಿದೆ. ಸಾಕ್ಷಿ ಅವರ ತಂದೆ ಮಹಿಂದರ್ ಬಡಗಿ ಕೆಲಸ ಮಾಡುತ್ತಾರೆ. ತಾಯಿ ಸುರೇಖಾ ರಾಣಿ ಗೃಹಿಣಿ.

Read more Photos on
click me!

Recommended Stories