ನಟ ಕಿಚ್ಚ ಸುದೀಪ್ ತಮ್ಮ ಪ್ರೀತಿಯ ಮಗಳು ಸಾನ್ವಿಗೆ ಮಹೀಂದ್ರಾ ಕಂಪನಿಯ ನೂತನ 'ಬಿಇ 6' ಎಲೆಕ್ಟ್ರಿಕ್ ಕಾರನ್ನು ಸರ್ಪ್ರೈಸ್ ಗಿಫ್ಟ್ ಆಗಿ ನೀಡಿದ್ದಾರೆ. ಮಗಳಿಗೆ ರಫ್ ಲುಕ್ ಇರುವ ಕಾರುಗಳೆಂದರೆ ಇಷ್ಟ ಮತ್ತು 'ಜೆನ್-ಜಿ' ಪೀಳಿಗೆಗೆ ಸರಿಹೊಂದುವ ಕಾರಣ ಈ ಕಾರು ಕೊಟ್ಟಿರುವುದಾಗಿ ಸುದೀಪ್ ತಿಳಿಸಿದ್ದಾರೆ.
ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಸದಾ ತಮ್ಮ ವಿಭಿನ್ನ ಶೈಲಿ ಹಾಗೂ ಕುಟುಂಬದ ಮೇಲಿರುವ ಪ್ರೀತಿಯಿಂದ ಅಭಿಮಾನಿಗಳ ಮನ ಗೆಲ್ಲುತ್ತಾರೆ. ಇದೀಗ ಸುದೀಪ್ ತಮ್ಮ ಪ್ರೀತಿಯ ಮಗಳು ಸಾನ್ವಿ ಸುದೀಪ್‌ಗೆ ಸರ್ಪ್ರೈಸ್ ಗಿಫ್ಟ್ ಒಂದನ್ನು ನೀಡುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಕಳೆದ ವಾರ ತಾವೇ ಸ್ವತಃ ಖರೀದಿಸಿದ್ದ ಮಹೀಂದ್ರಾ ಕಂಪನಿಯ ನೂತನ 'ಬಿಇ 6e' (Mahindra BE 6e) ಐಷಾರಾಮಿ ಎಲೆಕ್ಟ್ರಿಕ್ ಕಾರನ್ನು ಕಿಚ್ಚ ಸುದೀಪ್ ತಮ್ಮ ಮಗಳಿಗೆ ಉಡುಗೊರೆಯಾಗಿ ನೀಡಿದ್ದಾರೆ.
25
ಮಗಳಿಗೆ ಈ ಕಾರನ್ನೇ ಗಿಫ್ಟ್ ನೀಡಲು ಕಾರಣವೇನು?
ಈ ಕುರಿತು ಮಾತನಾಡಿರುವ ನಟ ಸುದೀಪ್, 'ಮಗಳಿಗೆ ಒಂದು ಅತ್ಯುತ್ತಮ ಗಿಫ್ಟ್ ನೀಡಬೇಕು ಎಂಬ ಆಸೆ ಯೋಚನೆ ನನ್ನಲ್ಲಿ ಹಲವು ದಿನಗಳಿಂದ ಇತ್ತು. ಅವಳಿಗೆ ನನ್ನಂತೆಯೇ ರಸ್ಟಿಕ್ ಹಾಗೂ ರಫ್ ರುಕ್ ಇರುವ ಕಾರುಗಳೆಂದರೆ ಬಹಳ ಇಷ್ಟ.
ಇತ್ತೀಚೆಗೆ ಈ ಮಹೀಂದ್ರಾ BE 6e ಕಾರು ನನ್ನ ಕಣ್ಣಿಗೆ ಬಿತ್ತು. ಇದರ ಡಿಸೈನ್, ಸೊಗಸಾದ ಬಣ್ಣ, ಒಳಾಂಗಣದ ಕಂಫರ್ಟ್ ಮತ್ತು ಆಕರ್ಷಕ ಲೈಟಿಂಗ್ ಸಿಸ್ಟಮ್ ನನಗೂ ತುಂಬಾ ಇಷ್ಟವಾಯಿತು. ಮುಖ್ಯವಾಗಿ ಇಂದಿನ 'ಜೆನ್-ಜಿ' (Gen-Z) ಯುವ ಪೀಳಿಗೆಗೆ ಇಷ್ಟವಾಗುವಂತೆ ಈ ಕಾರಿನ ಪ್ರತಿಯೊಂದು ವಿನ್ಯಾಸವೂ ಇದೆ. ಹಾಗಾಗಿ ಇದನ್ನೇ ಮಗಳಿಗೆ ಕೊಡಿಸಲು ನಿರ್ಧರಿಸಿದೆ' ಎಂದು ತಿಳಿಸಿದ್ದಾರೆ.
35
ಮಹೀಂದ್ರಾ BE 6e ಕಾರಿನ ಪ್ರಮುಖ ಆಕರ್ಷಣೆಗಳು
ಅಭಿನಯ ಚಕ್ರವರ್ತಿ ಸುದೀಪ್ ಮನಸ್ಸನ್ನು ಕೊಂದ ಈ ಮಹೀಂದ್ರಾ BE 6e ಎಲೆಕ್ಟ್ರಿಕ್ ಕಾರು ಭಾರತೀಯ ಇವಿ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದರ ಪ್ರಮುಖ ವೈಶಿಷ್ಟ್ಯಗಳು ಹೀಗಿವೆ:
ಆಕರ್ಷಕ ಮತ್ತು ವಿಶಿಷ್ಟ ವಿನ್ಯಾಸ: ಇದು ಅತ್ಯಂತ ಸ್ಪೋರ್ಟಿ 'ಕೂಪ್' ಶೈಲಿಯ ಬಾಡಿಯನ್ನು ಹೊಂದಿದ್ದು, ಶಾರ್ಪ್ ಸಿ-ಆಕಾರದ ಎಲ್‌ಇಡಿ ಡಿಆರ್‌ಎಲ್‌ಗಳು, ಇಲ್ಯುಮಿನೇಟೆಡ್ ಮಹೀಂದ್ರಾ ಲೋಗೋ ಮತ್ತು ರಸ್ತೆಯಲ್ಲಿ ಸುಲಭವಾಗಿ ಸಾಗಲು ಸಹಾಯ ಮಾಡುವ ಏರೋಡೈನಾಮಿಕ್ ವಿನ್ಯಾಸವನ್ನು ಹೊಂದಿದೆ.
ದೀರ್ಘ ರೇಂಜ್ ಮತ್ತು ಬಲವಾದ ಬ್ಯಾಟರಿ: ಈ ಕಾರಿನಲ್ಲಿ 59 kWh ಹಾಗೂ 79 kWh ಸಾಮರ್ಥ್ಯದ ಎರಡು ಬಲವಾದ ಬ್ಯಾಟರಿ ಆಯ್ಕೆಗಳಿವೆ. ಪೂರ್ಣ ಚಾರ್ಜ್ ಮಾಡಿದರೆ ಕಾರಿನ ಮಾಡೆಲ್‌ಗೆ ಅನುಗುಣವಾಗಿ 557 ಕಿ.ಮೀ ನಿಂದ 682 ಕಿ.ಮೀ ವರೆಗೆ ಸುಲಭವಾಗಿ ಪ್ರಯಾಣಿಸಬಹುದು.
ಅತಿ ವೇಗದ ಫಾಸ್ಟ್ ಚಾರ್ಜಿಂಗ್: ಪ್ರಯಾಣದ ವೇಳೆ ಚಾರ್ಜಿಂಗ್ ಚಿಂತೆ ಇರಬಾರದು ಎಂದು 175 kW DC ಫಾಸ್ಟ್ ಚಾರ್ಜಿಂಗ್ ಬೆಂಬಲ ನೀಡಲಾಗಿದೆ. ಇದರಿಂದ ಕೇವಲ 20 ನಿಮಿಷಗಳಲ್ಲಿ ಶೇ.20 ರಿಂದ 80 ರಷ್ಟು ಚಾರ್ಜ್ ಮಾಡಿಕೊಳ್ಳಬಹುದು. ಜೊತೆಗೆ, ಕೇವಲ 6.7 ಸೆಕೆಂಡುಗಳಲ್ಲಿ 0 ಯಿಂದ 100 ಕಿ.ಮೀ ವೇಗ ಪಡೆದುಕೊಳ್ಳುವ ಶಕ್ತಿ ಇದರಲ್ಲಿದೆ.
55
ಸುರಕ್ಷತೆಗೂ ಬೆಸ್ಟ್
ಹೈಟೆಕ್ ಮತ್ತು ಐಷಾರಾಮಿ ಒಳಾಂಗಣ: ಕಾರಿನ ಕ್ಯಾಬಿನ್ ಒಳಗಡೆ ಅವಳಿ 12.3-ಇಂಚಿನ ಟಚ್‌ಸ್ಕ್ರೀನ್ ಡಿಸ್‌ಪ್ಲೇಗಳು, ಹೆಡ್ಸ್-ಅಪ್ ಡಿಸ್ಪ್ಲೇ (HUD), ವಿಶಾಲವಾದ ಪನೋರಮಿಕ್ ಗ್ಲಾಸ್ ರೂಫ್, ಹರ್ಮನ್ ಕಾರ್ಡನ್ ಆಡಿಯೋ ಸಿಸ್ಟಮ್ ಮತ್ತು 'MAIA' AI ತಂತ್ರಜ್ಞಾನವನ್ನು ಅಳವಡಿಸಲಾಗಿದೆ.
ಉನ್ನತ ಮಟ್ಟದ ಸುರಕ್ಷತೆ: ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗಿದ್ದು, ಲೆವೆಲ್-2 ADAS (ಸುಧಾರಿತ ಚಾಲಕ ಸಹಾಯ ವ್ಯವಸ್ಥೆ), 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮತ್ತು 360-ಡಿಗ್ರಿ ಕ್ಯಾಮೆರಾವನ್ನು ನೀಡಲಾಗಿದೆ.
ನೆಚ್ಚಿನ ನಟ ಸುದೀಪ್ ತಮ್ಮ ಮಗಳಿಗೆ ಇಂತಹ ಹೈಟೆಕ್ ಮತ್ತು ರಫ್ ಅಂಡ್ ಟಫ್ ಇವಿ ಕಾರನ್ನು ಗಿಫ್ಟ್ ನೀಡಿರುವುದು ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಭಾರೀ ಟ್ರೆಂಡ್ ಆಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.